14,990 ರೂ.ಗೆ 'ಗ್ಯಾಲಾಕ್ಸಿ ಎಂ30' ರಿಲೀಸ್!..ಚೀನಾ ಕಂಪೆನಿಗಳ ಕಥೆ ಕ್ಲೋಸ್!!

|

ಗ್ಯಾಲಾಕ್ಸಿ ಎಂ10 ಮತ್ತು ಗ್ಯಾಲಾಕ್ಸಿ ಎಂ20 ಫೋನ್‌ಗಳ ಮೂಲಕ ಭಾರತದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ತನ್ನ ಶಕ್ತಿ ತೋರಿಸಿದ್ದ ಸ್ಯಾಮ್‌ಸಂಗ್ ಇದೀಗ ಚೀನಾ ಕಂಪೆನಿಗಳಿಗೆ ಆಘಾತಕಾರಿಯಾಗುವಂತಹ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆಗೊಳಿಸಿದೆ. ದೇಶದ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಸ್ಯಾಮ್‌ಸಂಗ್‌ನ ಟ್ರಿಪಲ್ ರಿಯರ್ ಕ್ಯಾಮೆರಾ ಸಾಮರ್ಥ್ಯದ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿ ಚೀನಾ ಕಂಪೆನಿಗಳಿಗೆ ನಡುಕಹುಟ್ಟಿಸಿದೆ.

ಹೌದು, ನೆನ್ನೆ ಸಂಜೆ ಭಾರತದಲ್ಲಿ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್‌ ಲಾಂಚ್ ಆಗಿದ್ದು, ನಿರೀಕ್ಷೆಗೂ ಮೀರಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. 5000mAh ಬ್ಯಾಟರಿ, 6.4-ಇಂಚಿನ ಪೂರ್ಣ ಹೆಚ್‌ಡಿ + ಸೂಪರ್ ಅಮೊಲೆಡ್ ಇನ್ಫಿನಿಟಿ ಡಿಸ್‌ಪ್ಲೇ, ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು ಆಕ್ಟಾ-ಕೋರ್ ಎಕ್ಸನೋಸ್ 7904 ಪ್ರೊಸೆಸರ್ ನಂತಹ ಅತ್ಯುತ್ತಮ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆಗಳು ಕೇವಲ 14,990 ರೂ.ಗಳಿಂದ ಪ್ರಾರಂಭವಾಗಿರುವುದು ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

14,990 ರೂ.ಗೆ 'ಗ್ಯಾಲಾಕ್ಸಿ ಎಂ30' ರಿಲೀಸ್!..ಚೀನಾ ಕಂಪೆನಿಗಳ ಕಥೆ ಕ್ಲೋಸ್!!

ಇದೀಗ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಾಗಿರುವ ಶಿಯೋಮಿ ರೆಡ್‌ಮಿ ನೋಟ್ 7, ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ ಜೊತೆಗೆ ನೋಕಿಯಾ 8 ಪ್ಲಸ್, ಮತ್ತು ಹಾನರ್ 10 ನಂತಹ ಸ್ಮಾರ್ಟ್‌ಫೋನ್‌ಗಳಿಗೆ ನೇರಾನೇರ ಸೆಡ್ಡು ಹೊಡೆದಿರುವ 'ಗ್ಯಾಲಾಕ್ಸಿ ಎಂ30' ತನ್ನ ಭಾರೀ ಫೀಚರ್ಸ್‌ಗಳಿಂದಲೇ ಕಣ್ಣುಕುಕ್ಕುತ್ತಿದೆ. ಹಾಗಾದರೆ, ನೆನ್ನೆಯಷ್ಟೇ ಲಾಂಚ್ ಆಗಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್‌ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ವಿಶೇಷತೆಗಳೂ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಗ್ಯಾಲಾಕ್ಸಿ ಎಂ30' ವಿನ್ಯಾಸ!

'ಗ್ಯಾಲಾಕ್ಸಿ ಎಂ30' ವಿನ್ಯಾಸ!

ಭಾರತದ ಬಜೆಟ್ ಸ್ಮಾರ್ಟ್‌ಪೋನ್ ಪ್ರಿಯರನ್ನು ಬಹುವಾಗಿ ಸೆಳೆದಿರುವ ಡಿಸ್‌ಪ್ಲೇ ನೋಚ್ ಮತ್ತು 19.5:9 ಆಕಾರ ಅನುಪಾದಲ್ಲಿ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ವಿನ್ಯಾಸವಾಗಿದೆ. ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಶೇ. 90 ಕ್ಕಿಂತ ಹೆಚ್ಚು ಸ್ಕ್ರೀನ್ ಹೊಂದಿರುವುದನ್ನು ನಾವು ನೋಡಬಹುದು.

'ಗ್ಯಾಲಾಕ್ಸಿ ಎಂ30' ಡಿಸ್‌ಪ್ಲೇ!

'ಗ್ಯಾಲಾಕ್ಸಿ ಎಂ30' ಡಿಸ್‌ಪ್ಲೇ!

'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ದೊಡ್ಡದಾದ ಸೂಪರ್ ಅಮೊಲೆಟ್ ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದುವ ಮೂಲಕ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. 6.4-ಇಂಚಿನ ಇಂಚಿನ ಪೂರ್ಣ ಹೆಚ್‌ಡಿ+ ಸೂಪರ್ ಅಮೊಲೆಡ್ ಇನ್ಫಿನಿಟಿ ಡಿಸ್‌ಪ್ಲೇಯು ವಾಟರ್‌ಡ್ರಾಪ್ ನೋಚ್ ವಿನ್ಯಾಸದಲ್ಲಿದ್ದು, 1080 x 2280 ಪಿಕ್ಸೆಲ್ಸ್ ಸಾಮರ್ಥ್ಯದಲ್ಲಿ ಮೊಬೈಲ್ ಪ್ರಿಯರನ್ನು ಸೆಳೆದಿದೆ.

'ಗ್ಯಾಲಾಕ್ಸಿ ಎಂ30' ಪ್ರೊಸೆಸರ್!

'ಗ್ಯಾಲಾಕ್ಸಿ ಎಂ30' ಪ್ರೊಸೆಸರ್!

ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ) ಸ್ಮಾರ್ಟ್‌ಫೋನ್ ಆಗಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ ಎಕ್ಸನೋಸ್ 7904 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಸ್ಯಾಮ್ಸಂಗ್ ಎಕ್ಸ್‌ಪೀರಿಯೆನ್ಸ್ v9.5 ಮೂಲಕ ಆಂಡ್ರಾಯ್ಡ್ 8.1 ಓರಿಯೋ ಆಧರಿಸಿ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಆಂಡ್ರಾಯ್ಡ್ ಪೈಗೆ ಅಪ್‌ಡೇಟ್ ಆಗಲಿದೆ.

'ಗ್ಯಾಲಾಕ್ಸಿ ಎಂ30' RAM ಮತ್ತು ROM

'ಗ್ಯಾಲಾಕ್ಸಿ ಎಂ30' RAM ಮತ್ತು ROM

ಆಕ್ಟಾ-ಕೋರ್ ಎಕ್ಸನೋಸ್ 7904 ಪ್ರೊಸೆಸರ್ ಅನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ30' ಫೋನ್ 4GB RAM ಮತ್ತು 64GB ROM (ಆಂತರಿಕ ಸಂಗ್ರಹ) ಮತ್ತು 6GB RAM ಮತ್ತು 128GB ROM (ಆಂತರಿಕ ಸಂಗ್ರಹ)ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ 512GB ವರೆಗೆ ಸ್ಮಾರ್ಟ್‌ಫೋನ್ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ.

'ಗ್ಯಾಲಾಕ್ಸಿ ಎಂ30' ರಿಯರ್ ಕ್ಯಾಮೆರಾಗಳು!

'ಗ್ಯಾಲಾಕ್ಸಿ ಎಂ30' ರಿಯರ್ ಕ್ಯಾಮೆರಾಗಳು!

'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದ್ದು, f /1.9ದ್ಯುತಿರಂಧ್ರದಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ RGB ಸಂವೇದಕ ಮತ್ತು 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಆಳ ಸಂವೇದಕ ಹಾಗೂ ಎಫ್ / 2.2 ಅಪರ್ಚರ್ನೊಂದಿಗೆ 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾ ವಿಭಾಗದಲ್ಲಿ ಅಲಂಕರಿತವಾಗಿವೆ.

'ಗ್ಯಾಲಾಕ್ಸಿ ಎಂ30' ಸೆಲ್ಫೀ ಕ್ಯಾಮೆರಾ

'ಗ್ಯಾಲಾಕ್ಸಿ ಎಂ30' ಸೆಲ್ಫೀ ಕ್ಯಾಮೆರಾ

ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನಿನಲ್ಲಿ 123-ಡಿಗ್ರಿ ಫೀಲ್ಡ್-ಆಫ್-ವ್ಯೂ (ಎಫ್ಒವಿ) ಮತ್ತು ಎಫ್ / 2.2 ಅಪರ್ಚರ್ ಸಾಮರ್ಥ್ಯದಲ್ಲಿ 16-ಮೆಗಾಪಿಕ್ಸೆಲ್ ಸಂವೇದಕದ ಅತ್ಯುತ್ತಮ ಸೆಲ್ಪೀ ಕ್ಯಾಮೆರಾವನ್ನು ನೀಡಲಾಗಿದೆ. ಕೃತಕ ಬುದ್ದಿಮತ್ತೆ ಜೊತೆಗೆ 123-ಡಿಗ್ರಿ ಫೀಲ್ಡ್-ಆಫ್-ವ್ಯೂ ಫೀಚರ್ ಸೆಲ್ಫೀ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

'ಗ್ಯಾಲಾಕ್ಸಿ ಎಂ30' ಬ್ಯಾಟರಿ!

'ಗ್ಯಾಲಾಕ್ಸಿ ಎಂ30' ಬ್ಯಾಟರಿ!

ಭಾರತೀಯರು ಬಹುಮುಖ್ಯವಾಗಿ ಬಯಸುವ ಬ್ಯಾಟರಿ ಬಾಳಿಕೆ ಶಕ್ತಿಯಲ್ಲಿ 'ಗ್ಯಾಲಾಕ್ಸಿ ಎಂ30' ಇದೀಗ ಮೊದಲ ಸ್ಥಾನಕ್ಕೆ ಬಂದುನಿಂತಿದೆ. 15 ಸಾವಿರ ರೂ. ಒಳಗಿನ ಈ ಫೋನಿನಲ್ಲಿ 5,000 ಎಮ್ಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. 15ಡಿ ಚಾರ್ಜರ್ ಮೂಲಕ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವುದು ಬ್ಯಾಟರಿ ಮತ್ತೊಂದು ವಿಶೇಷತೆಯಾಗಿದೆ.

'ಗ್ಯಾಲಾಕ್ಸಿ ಎಂ30' ಫೇಸ್ ಅನ್ಲಾಕ್

'ಗ್ಯಾಲಾಕ್ಸಿ ಎಂ30' ಫೇಸ್ ಅನ್ಲಾಕ್

ಹಿಂಬಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಪೊನಿನಲ್ಲಿ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ತರಲಾಗಿದೆ. ಜತೆಗೆ ವೈಡ್ವೈನ್ ಎಲ್ 1 ಪ್ರಮಾಣೀಕರಣದೊಂದಿಗೆ ಬಂದಿರುವ ಈ ಸ್ಮಾರ್ಟ್‌ಫೋನ್ ಬಳಕೆದಾರರು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗಳನ್ನು ಸಹ ಹೆಚ್‌ಡಿ ಸ್ಟ್ರೀಮ್ ಮಾಡಬಹುದಾಗಿದೆ.

'ಗ್ಯಾಲಾಕ್ಸಿ ಎಂ30' ಬೆಲೆಗಳು!

'ಗ್ಯಾಲಾಕ್ಸಿ ಎಂ30' ಬೆಲೆಗಳು!

4GB RAM ಮತ್ತು 64GB ROM (ಆಂತರಿಕ ಸಂಗ್ರಹ) ಮತ್ತು 6GB RAM ಮತ್ತು 128GB ROM (ಆಂತರಿಕ ಸಂಗ್ರಹ)ದ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿರುವ 'ಗ್ಯಾಲಾಕ್ಸಿ ಎಂ30' ಬೆಲೆಗಳು 14,990 ರೂ.ಗಳಿಂದ ಪ್ರಾರಂಭವಾಗಿವೆ. 4GB RAM ವೆರಿಯಂಟ್ ಪೋನ್ ಬೆಲೆ 14,990 ರೂ. ಆದರೆ, 6GB RAM ವೆರಿಯಂಟ್ ಪೋನ್ ಬೆಲೆ 17,990 ರೂ.ಗಳಾಗಿವೆ.

ಓದಿರಿ: ಭಾರತದಲ್ಲಿ 48MP ಕ್ಯಾಮೆರಾದ 'ರೆಡ್‌ಮಿ ನೋಟ್ 7' ರಿಲೀಸ್!..ಬೆಲೆ ಎಷ್ಟು ಗೊತ್ತಾ?

ಓದಿರಿ: ಬಿಗ್‌ ಸರ್‌ಪ್ರೈಸ್!..ವಿಶ್ವದಲ್ಲೇ ಮೊದಲು ಭಾರತದಲ್ಲಿ 'ರೆಡ್‌ಮಿ ನೋಟ್ 7 ಪ್ರೊ' ಲಾಂಚ್!

Best Mobiles in India

English summary
Samsung Galaxy M30 With 5,000mAh Battery, Triple Rear Cameras Launched in India: Price, Specifications, Release Date. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X