Home
ಮೊಬೈಲ್

Samsung: ಕಾಯುವಿಕೆ ಮುಗಿಯಿತು.. ಜುಲೈ 17ಕ್ಕೆ ಎಂಟ್ರಿ ಕೊಡ್ತಿದೆ ಹೊಸ ಫೋನ್, ನೀರಿಕ್ಷೆಗೂ ಮೀರಿದ ವೈಶಿಷ್ಟಗಳು

ಸ್ಯಾಮ್‌ಸಂಗ್‌ (Samsung) ಕಂಪನಿಯು ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು, ವಿಶ್ವದ ದೈತ್ಯ ಟೆಕ್‌ ಕಂಪನಿಗಳಲ್ಲಿ ಒಂದಾಗಿರುವ ಹಾಗೂ ಭಾರತದ ಅತಿದೊಡ್ಡ ಗ್ರಾಹಕರ ಬಳಗವನ್ನು ಹೊಂದಿರುವ ಸ್ಯಾಮ್‌ಸಂಗ್ ತನ್ನ ಮುಂಬರುವ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಇದೇ ಜುಲೈ 17 ರಂದು Galaxy M34 5G ಸರಣಿಯ ಈ ಹೊಚ್ಚ ಹೊಸ ಮೊಬೈಲ್‌ ಲಾಂಚ್‌ ಆಗಲಿದೆ. ಕಳೆದ ಮೇ ತಿಂಗಳಿನಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದ Samsung Galaxy M35 5G ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಸ್ಯಾಮ್‌ಸಂಗ್ ಕಂಪನಿ ತನ್ನ ಗುಣಮಟ್ಟ ಹಾಗೂ ಅತ್ಯಾಕರ್ಷಕ ವಿನ್ಯಾಸದ ಸಾಧನಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಪ್ರಸ್ತುತ, ಸ್ಯಾಮ್‌ಸಂಗ್‌ನ ಮೊಬೈಲ್‌ ಯುವಜನರ ಹಾಟ್‌ಫೇವರಿಟ್‌ ಆಗಿವೆ. ಹೀಗಾಗಿ, ಮುಂಬರುವ ಫೋನ್‌ ಬಗ್ಗೆ ಮೊಬೈಲ್ ಪ್ರಿಯರಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಇದೀಗ, ತನ್ನ ಗ್ರಾಹಕರಿಗೆ ನೂತನ ಫೋನ್‌ ಅನ್ನು ಗಿಫ್ಟ್ ನೀಡಲು ಸಜ್ಜಾಗಿದೆ. ಈ ಫೋನ್‌ನ ಬೆಲೆ ಎಷ್ಟು? ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Samsung: ಕಾಯುವಿಕೆ ಮುಗಿಯಿತು.. ಜುಲೈ 17ಕ್ಕೆ ಎಂಟ್ರಿ ಕೊಡ್ತಿದೆ ಈ ಹೊಸ ಫೋನ್

Samsung Galaxy M35 5G ಅನ್ನು Galaxy M34 5Gಯ ಮುಂದುವರೆದ ಸರಣಿಯ ಸ್ಮಾರ್ಟ್‌ಫೋನ್‌ ಆಗಿ ಮೇ ತಿಂಗಳಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು. ಇದೀಗ ಸ್ಯಾಮ್‌ಸಂಗ್ ಇಂಡಿಯಾದಲ್ಲಿ ಮುಂದಿನ M ಸರಣಿಯ ಮೊಬೈಲ್‌ ಅನ್ನು ಬಿಡುಗಡೆ ಮಾಡಲಿರುವ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ Amazon ನಲ್ಲಿ ಮೈಕ್ರೋಸೈಟ್ ಒಂದನ್ನು ಮೀಸಲಿಟ್ಟಿದ್ದು, Galaxy M35 ಅನ್ನು ಪ್ರೈಮ್ ಡೇ ಸೇಲ್ ಸ್ಪೆಷಲ್ ಆಗಿ ಬಿಡುಗಡೆ ಮಾಡಲಿದೆ. ಈ ಪ್ರೈಮ್‌ ಡೇ ಜುಲೈ 20 ಮತ್ತು 21 ರಂದು ನಡೆಯಲಿದೆ.

Samsung Galaxy M35 ವಿಶೇಷತೆಗಳು

Samsung Galaxy M35 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಸೂಪರ್ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿರಲಿದೆ. ಜೊತೆಗೆ 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಪಡೆದಿದೆ. ಮತ್ತು 1,000nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು Galaxy M34 ನಲ್ಲಿನ 6.5 ಇಂಚಿನ ಪ್ಯಾನೆಲ್‌ಗಿಂತ ಸ್ವಲ್ಪ ದೊಡ್ಡದಾಗಿದೆ.

ಗ್ರಾಫಿಕ್ಸ್‌ಗಾಗಿ Mali-G68 MP5 GPU ನೊಂದಿಗೆ ಜೋಡಿಸಲಾದ Exynos 1380 ಚಿಪ್‌ಸೆಟ್ ಫೋನ್ ಅನ್ನು ಪವರ್ ಮಾಡುತ್ತದೆ. ಇದರ ಹಿಂದಿನ ಸರಣಿಯ ಸ್ಮಾರ್ಟ್‌ಫೋನ್ Exynos 1280 ಚಿಪ್‌ಸೆಟ್‌ನೊಂದಿಗೆ ರನ್ ಆಗಲಿದೆ. ಚಿಪ್‌ಸೆಟ್ ಅನ್ನು 8GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ One UI 6.1 ಲೇಯರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

50MP ಮುಖ್ಯ ಕ್ಯಾಮೆರಾ, 13MP ಸೆಲ್ಫಿ ಶೂಟರ್

ಈ ಫೋನ್‌ನ ಕ್ಯಾಮೆರಾ ಸೆಟಪ್‌ ಬಗ್ಗೆ ಹೇಳುವುದಾದರೆ, ಇದು 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಇದು Galaxy M34 ನಂತೆಯೇ ಕ್ಯಾಮೆರಾ ಸೆಟಪ್ ಹೊಂದಿದೆ. ಆದಾಗ್ಯೂ ಫಲಿತಾಂಶಗಳು ಸ್ವಲ್ಪ ಭಿನ್ನವಾಗಿರಬಹುದು. ಸೆಲ್ಫಿಗಾಗಿ ಫೋನ್ ಮುಂಭಾಗದಲ್ಲಿ 13MP ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಇದು Galaxy M34 ನ 16MP ಶೂಟರ್‌ನಿಂದ ಡೌನ್‌ಗ್ರೇಡ್ ಆಗಿದೆ. ಇದು 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿದೆ.

Samsung Galaxy M35 5Gನ ಸಂಪೂರ್ಣ ಫೀಚರ್ಸ್

  • ಡಿಸ್ಲ್ಪೇ: 6.6-ಇಂಚಿನ FHD+ (1080×2340 ಪಿಕ್ಸೆಲ್‌ಗಳು) ಸೂಪರ್ AMOLED ಇನ್ಫಿನಿಟಿ-O ಡಿಸ್‌ಪ್ಲೇ.
  • ರಿಫ್ರೆಶ್ ರೇಟ್: 120Hz ರಿಫ್ರೆಶ್ ರೇಟ್, 1000nits ಗರಿಷ್ಠ ಬ್ರೈಟ್‌ನೆಸ್.
  • ಪ್ರೊಸೆಸರ್: ಆಕ್ಟಾ ಕೋರ್ (2.4GHz Quad A78 + 2GHz Quad A55 CPUಗಳು) Exynos 1380 ಪ್ರೊಸೆಸರ್ ಜೊತೆಗೆ Mali-G68 MP5 GPU.
  • ಸ್ಟೋರೇಜ್: 6GB / 8GB RAM, 128GB / 256GB ಇಂಟರ್ನಲ್ ಸ್ಟೋರೇಜ್.
  • ಮೆಮೊರಿ: ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.
  • ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)
  • OS: One UI 6.1 ಜೊತೆಗೆ Android 14
  • ಕ್ಯಾಮೆರಾ: 50MP ಹಿಂಬದಿಯ (f/1.8 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾ, OIS, 8MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಜೊತೆಗೆ f/2.2 ಅಪರ್ಚರ್, 2MP ಮ್ಯಾಕ್ರೋ ಕ್ಯಾಮೆರಾ ಜೊತೆಗೆ f/2.4 ಅಪರ್ಚರ್, LED ಫ್ಲಾಶ್
  • ಫ್ರಂಟ್ ಕ್ಯಾಮೆರಾ: 13MP ಮುಂಭಾಗದ (f/2.2 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾ
  • ಫಿಂಗರ್‌ಪ್ರಿಂಟ್: ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್
  • ಆಡಿಯೊ: ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್
  • ಅಳತೆ: 162.3 x 78.6 x 9.1mm
  • ತೂಕ: 222 ಗ್ರಾಂ
  • ಬ್ಯಾಟರಿ: 6000mAh ಬ್ಯಾಟರಿ
  • ಚಾರ್ಜಿಂಗ್‌: 25W ವೇಗದ ಚಾರ್ಜಿಂಗ್‌
  • ಕನೆಕ್ಟಿವಿಟಿ ಆಯ್ಕೆಗಳು: 5G SA /NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.3, GPS, ಗ್ಲೋನಾಸ್, ಬೀಡೌ, ಗೆಲಿಲಿಯೋ, QZSS, USB ಟೈಪ್-C 2.0
Best Mobiles in India

English summary
Samsung Galaxy M35 5G India launch Date Confirmed on July 17. Amazon has dedicated a microsite for this
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+