Home
ಮೊಬೈಲ್

ಬೆಲೆ ಕೇವಲ ಇಷ್ಟು! Samsung Galaxy M35 5G ಬಿಡುಗಡೆ.. ಆಫರ್‌ಗಳೇನು?

ಸ್ಯಾಮ್‌ಸಂಗ್ ಸದ್ದಿಲ್ಲದೇ ಮೊಬೈಲ್ ಪ್ರಿಯರಿಗೆ ರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದೆ. ಕಂಪನಿಯು ತನ್ನ Galaxy 'M' ಸರಣಿಯ ಹೊಸ Samsung Galaxy M35 5G ಬಜೆಟ್‌ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಕಳೆದ ವರ್ಷ ಬಿಡುಗಡೆಯಾದ Samsung Galaxy M34 5G ಫೋನಿನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಆದರೆ, ಕಂಪನಿಯು ಈ ಫೋನನ್ನು ಕೆಲವು ಅಪ್ಡೇಟ್‌ಗಳು ಮತ್ತು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಇದು iQOO Z9 5G, Poco X6 5G, OnePlus Nord CE 4 5G, Realme Narzo 70 Pro 5G ಸೇರಿದಂತೆ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಲಿದೆ.

ನೂತನ Samsung Galaxy M35 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 120Hz ಸೂಪರ್ AMOLED ಡಿಸ್ಪ್ಲೇ ಮತ್ತು Exynos 1380 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ Android 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮುಖ್ಯವಾಗಿ 6,000mAh ದೊಡ್ಡ ಬ್ಯಾಟರಿಯೊಂದಿಗೆ ಈ ಫೋನನ್ನು ಬಿಡುಗಡೆ ಮಾಡಲಾಗಿದೆ. ಈ ಫೋನ್‌ನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಬೆಲೆ ಕೇವಲ ಇಷ್ಟು! Samsung Galaxy M35 5G ಬಿಡುಗಡೆ.. ಆಫರ್‌ಗಳೇನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಅನ್ನು ಭಾರತದಲ್ಲಿ 15,999 ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಿದೆ. ಮೂನ್‌ಲೈಟ್ ಬ್ಲೂ, ಡೇಬ್ರೇಕ್ ಬ್ಲೂ ಮತ್ತು ಥಂಡರ್ ಗ್ರೇ ಬಣ್ಣಗಳಲ್ಲಿ ನೀವು ಈ ಫೋನ್ ಅನ್ನು ಖರೀದಿಸಬಹುದು. ಜುಲೈ 20 ಮತ್ತು ಜುಲೈ 21ರಂದು ನಡೆಯಲಿರುವ ಅಮೆಜಾನ್ 'ಪ್ರೈಮ್ ಡೇ ಸೇಲ್'ನಲ್ಲಿ (Amazon Prime Day Sale) ಈ ಫೋನ್ ಖರೀದಿಗೆ ಲಭ್ಯವಿರುತ್ತದೆ.

ಗ್ಯಾಲಕ್ಸಿ ಎಂ35 5G ಏನೆಲ್ಲಾ ವಿಶೇಷತೆ ಹೊಂದಿದೆ?

ಡಿಸ್ಲೇ: ಕಂಪನಿಯು Samsung Galaxy M35 5Gನಲ್ಲಿ 6.6 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ನೀಡಿದೆ. ಇದು Galaxy M34 ನಲ್ಲಿನ 6.5 ಇಂಚಿನ ಪ್ಯಾನೆಲ್‌ಗಿಂತ ಸ್ವಲ್ಪ ದೊಡ್ಡದಾಗಿದೆ. ರೆಸಲ್ಯೂಶನ್ FHD+ ಮತ್ತು 120 Hz ರಿಫ್ರೆಶ್ ರೇಟ್ ಸಪೋರ್ಟ್‌ ಪಡೆದಿದೆ. ಜೊತೆಗೆ, 16 ಮಿಲಿಯನ್ ಬಣ್ಣದ ಆಳವನ್ನು ಹೊಂದಿದೆ. ಈ ಫೋನ್‌ನ ಪ್ಯಾನೆಲ್‌ನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆಯನ್ನು ಒದಗಿಸಲಾಗಿದೆ.

ಪ್ರೊಸೆಸರ್: ಗ್ಯಾಲಕ್ಸಿ ಎಂ35 5G ಇಂಟರ್ನಲ್ Exynos ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಇದು Exynos 1380 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಹಿಂದಿನ ಮಾದರಿ Samsung Galaxy M34 5G ಫೋನಿನಲ್ಲಿರುವ Exynos 1280 ನಿಂದ ಅಪ್‌ಗ್ರೇಡ್ ಆಗಿದೆ.

ಸ್ಟೋರೇಜ್: ಈ ಸ್ಮಾರ್ಟ್‌ಫೋನ್ ಅನ್ನು ಆಕ್ಟಾ-ಕೋರ್ ಚಿಪ್‌ಸೆಟ್, 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ನ ಸಹಾಯದಿಂದ ನೀವು ಅದರ ಸ್ಟೋರೇಜ್‌ ಅನ್ನು 1TB ವರೆಗೆ ವಿಸ್ತರಿಸಬಹುದು.

ಬೆಲೆ ಕೇವಲ ಇಷ್ಟು! Samsung Galaxy M35 5G ಬಿಡುಗಡೆ.. ಆಫರ್‌ಗಳೇನು?

ಕ್ಯಾಮೆರಾ: ಈ ಫೋನ್ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು ಗ್ಯಾಲಕ್ಸಿ ಎಂ34 ನಂತೆಯೇ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂದಿನ ಸೆಟಪ್ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಆಕ್ಸಿಲರಿ ಲೆನ್ಸ್ ಅನ್ನು ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಮುಖ್ಯ ಲೆನ್ಸ್‌ಗೆ ಸೇರಿಸಲಾಗಿದೆ.

ಇದು 30fps ನಲ್ಲಿ 4K ವಿಡಿಯೋವನ್ನು ಶೂಟ್ ಮಾಡಬಹುದು. ಮತ್ತು 10x ವರೆಗೆ ಡಿಜಿಟಲ್ ಜೂಮ್ ಬೆಂಬಲವನ್ನು ಹೊಂದಿದೆ. ಸೆಲ್ಫಿ ಕ್ಲಿಕ್ಕಿಸಲು ಮತ್ತು ವಿಡಿಯೋ ಕರೆಗಳಿಗಾಗಿ ಸ್ಕ್ರೀನ್‌ನ ಪಂಚ್ ಹೋಲ್‌ನಲ್ಲಿಈ ಸ್ಮಾರ್ಟ್‌ಫೋನ್ 13MP ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಗ್ಯಾಲಕ್ಸಿ ಎಂ34ನ 16MP ಶೂಟರ್‌ನಿಂದ ಡೌನ್‌ಗ್ರೇಡ್ ಆಗಿದೆ.

ಬ್ಯಾಟರಿ: ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಪೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ Android 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಮೇಲ್ಭಾಗದಲ್ಲಿ ಒಂದು UI ಅನ್ನು ಸಹ ಒಳಗೊಂಡಿದೆ.

ಕನೆಕ್ಟಿವಿಟಿ ಆಯ್ಕೆಗಳು: ಇದು 5G SA /NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.3, GPS, USB ಟೈಪ್-C 2.0ನಂತಹ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

Best Mobiles in India

English summary
Samsung Galaxy M35 5G smartphone Launched in India. Price Starts at Rs 15,999: Check offer, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+