Home
ಮೊಬೈಲ್

ಇಂದು ಭಾರತಕ್ಕೆ Samsung Galaxy M35 ಗ್ರ್ಯಾಂಡ್ ಎಂಟ್ರಿ: 6000mAh ಬ್ಯಾಟರಿ, 50MP ಕ್ಯಾಮೆರಾ.. ಬೆಲೆ ಎಷ್ಟು?

ಸ್ಯಾಮ್‌ಸಂಗ್ (Samsung) ತನ್ನ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಇದೀಗ Galaxy 'M' ಸರಣಿಯ ಹೊಸ ಬಜೆಟ್‌ ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುಂದಾಗಿದೆ. ಹೌದು, ಇಂದು (ಜುಲೈ 17) Samsung Galaxy M35 5G ಮೊಬೈಲ್‌ ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್‌ ಮಾಡಲಿದೆ. ಬಿಡುಗಡೆಗೆ ಮುನ್ನವೇ, ಕಂಪನಿಯು Galaxy M35 5Gನ ​​ಹಲವು ವಿಶೇಷ ಫೀಚರ್ಸ್‌ಗಳನ್ನು ಬಹಿರಂಗಗೊಳಿಸಿದೆ. ಇದು 6000mAh ಬ್ಯಾಟರಿ, 6.6 ಇಂಚಿನ ಫುಲ್ HD+ ಸೂಪರ್ ಅಮೋಲ್ಡ್‌ ಡಿಸ್‌ಪ್ಲೇ, 50MP ಕ್ಯಾಮೆರಾವನ್ನು ಹೊಂದಿರಲಿದೆ. ಉಳಿದಂತೆ, ಈ ಫೋನಿನ ಬೆಲೆ ಮತ್ತು ಫೀಚರ್ಸ್‌ ವಿವರಗಳನ್ನು ತಿಳಿಯೋಣ ಬನ್ನಿ.

ಅಂದಹಾಗೆ, ಕಳೆದ ಮೇ ತಿಂಗಳಿನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ35 5G ಸ್ಮಾರ್ಟ್‌ಫೋನ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದೀಗ, ಕಂಪನಿಯು ಭಾರತದಲ್ಲಿ Galaxy 'M' ಸರಣಿಯ Galaxy M35 5G ಫೋನನ್ನು ಲಾಂಚ್ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅಮೆಜಾನ್‌ನಲ್ಲಿ ಮೈಕ್ರೋಸೈಟ್ ಒಂದನ್ನು ಮೀಸಲಿಟ್ಟಿದ್ದು, ಈ ಫೋನನ್ನು 'ಪ್ರೈಮ್ ಡೇ ಸೇಲ್' (Amazon Prime Day Sale) ವಿಶೇಷವಾಗಿ ಲೋಕಾರ್ಪಣೆ ಮಾಡಲಾಗುತ್ತಿದೆ. ಈ 'ಪ್ರೈಮ್‌ ಡೇ' ಜುಲೈ 20 ಮತ್ತು 21 ರಂದು ನಡೆಯಲಿದೆ.

ಇಂದು Samsung Galaxy M35 ಬಿಡುಗಡೆ: 6000mAh ಬ್ಯಾಟರಿ, 50MP ಕ್ಯಾಮೆರಾ

Samsung Galaxy M35 5Gನ ವಿಶೇಷತೆಗಳೇನು?

Galaxy M35 5G ಡಿಸ್‌ಪ್ಲೇ: ಇದು Galaxy M34 ನಲ್ಲಿನ 6.5 ಇಂಚಿನ ಪ್ಯಾನೆಲ್‌ಗಿಂತ ಸ್ವಲ್ಪ ದೊಡ್ಡದಾಗಿದೆ. ಇದು 162.3 x 78.6 x 9.1mm ಅಳತೆ ಮತ್ತು 222 ಗ್ರಾಂ ತೂಕ ಹೊಂದಿರಲಿದೆ. 6.6 ಇಂಚಿನ ಫುಲ್ HD+ ಸೂಪರ್ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿರುವ ನಿರೀಕ್ಷೆಯಿದೆ. ಇದು 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 1,000nits ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದಿರಲಿದೆ.

Galaxy M35 5G ಪ್ರೊಸೆಸರ್, ಸ್ಟೋರೇಜ್‌

ಕಂಪನಿಯು ಆಕ್ಟಾ-ಕೋರ್ 5G ಪ್ರೊಸೆಸರ್ Exynos 1380 ಚಿಪ್‌ಸೆಟ್‌ನೊಂದಿಗೆ Samsung Galaxy M35 5G ಅನ್ನು ಪರಿಚಯಿಸಲಿದೆ. ಇದರ ಹಿಂದಿನ ಸರಣಿಯ ಫೋನ್ Exynos 1280 ಚಿಪ್‌ಸೆಟ್‌ನೊಂದಿಗೆ ರನ್ ಆಗಲಿದೆ. ಇದು ಆಂಡ್ರಾಯ್ಡ್ 14 ಆಧಾರಿತ One UI 6.1 ಲೇಯರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಬ್ರೆಜಿಲ್‌ನಲ್ಲಿ 8 GB RAM ಮತ್ತು 256 GB ಸ್ಟೋರೇಜ್‌ನೊಂದಿಗೆ ಬಿಡುಗಡೆ ಆಗಿತ್ತು. ಇದನ್ನು ಮೈಕ್ರೊ SD ಕಾರ್ಡ್‌ನೊಂದಿಗೆ ಮತ್ತಷ್ಟು ವಿಸ್ತರಿಸಬಹುದಾಗಿದೆ.

50MP ಮುಖ್ಯ ಕ್ಯಾಮೆರಾ, 13MP ಸೆಲ್ಫಿ ಶೂಟರ್‌

ಈ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ34 ನಂತೆಯೇ ಕ್ಯಾಮೆರಾ ಸೆಟಪ್ ಹೊಂದಿದೆ. ಕಂಪನಿಯು ಫೋನ್ ಅನ್ನು 50MP OIS ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆಪರಿಚಯಿಸುತ್ತಿದೆ. 13MP ಮುಂಭಾಗದ ಕ್ಯಾಮೆರಾದೊಂದಿಗೆ ಈ ಫೋನ್ ಬಿಡುಗಡೆಯಾಗುತ್ತಿದೆ. ಇದು ಗ್ಯಾಲಕ್ಸಿ ಎಂ34ನ 16MP ಶೂಟರ್‌ನಿಂದ ಡೌನ್‌ಗ್ರೇಡ್ ಆಗಿದೆ.

ಇಂದು Samsung Galaxy M35 ಬಿಡುಗಡೆ: 6000mAh ಬ್ಯಾಟರಿ, 50MP ಕ್ಯಾಮೆರಾ

6,000mAh ಬ್ಯಾಟರಿ, 25W ಫಾಸ್ಟ್ ಚಾರ್ಜಿಂಗ್

ಕಂಪನಿಯು 6,000mAh ಬ್ಯಾಟರಿಯೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಫೋನನ್ನು ಪರಿಚಯಿಸುತ್ತಿದೆ. ಇದು 25W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿರಲಿದೆ. 5G SA /NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.3, GPS, USB ಟೈಪ್-C 2.0ನಂತಹ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿರಲಿದೆ. ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ.

Samsung Galaxy M35ನ ಬೆಲೆ ಎಷ್ಟು?

ಪ್ರಸ್ತುತ, ಈ ಸ್ಮಾರ್ಟ್‌ಫೋನಿನ ಬೆಲೆಗೆ ಸಂಬಂಧಿಸಿದಂತೆ ಯಾವುದೇ ನಿಖರ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಜುಲೈ 20 ರಿಂದ ಜುಲೈ 21 ರವರೆಗಿನ 'ಪ್ರೈಮ್ ಡೇ ಸೇಲ್'ನಲ್ಲಿ ಇದು ಅಮೆಜಾನ್‌ನಲ್ಲಿ ಮೊದಲ ಮಾರಾಟ ಪ್ರಾರಂಭಿಸುವ ನಿರೀಕ್ಷೆಯಿದೆ. ಬ್ರೆಜಿಲ್‌ನಲ್ಲಿ ಈ ಫೋನ್ ಅನ್ನು ಮೂರು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಗಾಢ ನೀಲಿ, ತಿಳಿ ನೀಲಿ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿರಲಿದೆ.

Best Mobiles in India

English summary
Samsung Galaxy M35 Set to Launch on July 17 in India. Amazon has dedicated a microsite for this: Expected specs, price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+