Home
ಮೊಬೈಲ್

Samsung Galaxy M36 5G: ಜೂನ್ 27 ರಂದು ಬಿಡುಗಡೆ, 20 ಸಾವಿರಕ್ಕಿಂತ ಕಡಿಮೆ ಬೆಲೆ!

Samsung ತನ್ನ ಬಹುನಿರೀಕ್ಷಿತ Samsung Galaxy M36 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಘೋಷಿಸಿದೆ. ಇದೇ ಜೂನ್ 27 ರಂದು Samsung Galaxy M36 5G ಫೋನ್ ದೇಶದಲ್ಲಿ ಬಿಡುಗಡೆಯಾಗುತ್ತಿದೆ ಎಂಬುದನ್ನು ಕಂಪೆನಿಯು ದೃಢಪಡಿಸಿದೆ. ಕಳೆದ ವರ್ಷ ಜುಲೈನಲ್ಲಿ ಪರಿಚಯಿಸಲಾದ Samsung Galaxy M35 5G ಗೆ ಉತ್ತರಾಧಿಕಾರಿಯಾಗಿ ಈ ಹೊಸ Samsung Galaxy M36 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗುತ್ತಿದ್ದು, ಕಂಪನಿಯು ಈಗಾಗಲೇ ಮುಂಬರುವ ಈ ಸ್ಮಾರ್ಟ್‌ಫೋನ್‌ನ ವಿನ್ಯಾಸ, ಬೆಲೆ ಶ್ರೇಣಿ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Samsung Galaxy M36 5G: ವಿನ್ಯಾಸ ಮತ್ತು ಲಭ್ಯತೆ
Samsung Galaxy M36 5G ಫೋನ್ ಆರೆಂಜ್ ಹೇಸ್, ಸೆರೆನ್ ಗ್ರೀನ್ ಮತ್ತು ವೆಲ್ವೆಟ್ ಬ್ಲ್ಯಾಕ್ ಎಂಬ ಮೂರು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ಸ್ಯಾಮ್‌ಸಂಗ್ ಖಚಿತಪಡಿಸಿದೆ. ಜೊತೆಗೆ ಈ ಫೋನ್ 7.7mm ದಪ್ಪವನ್ನು ಹೊಂದಿದ್ದು, ಪ್ರೀಮಿಯಂ ವಿನ್ಯಾಸವನ್ನು ನೀಡುತ್ತದೆ. ಇದರ ಡಿಸ್ಪ್ಲೇಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಇರುವುದರಿಂದ ಹೆಚ್ಚು ಬಾಳಿಕೆ ಬರುವ ನಿರೀಕ್ಷೆಯಿದೆ. ಈ ಹ್ಯಾಂಡ್‌ಸೆಟ್ ಅಧಿಕೃತ Samsung ಇಂಡಿಯಾ ವೆಬ್‌ಸೈಟ್ ಮತ್ತು Amazon ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿರುತ್ತದೆ.

Samsung Galaxy M36 5G: ಕ್ಯಾಮೆರಾ ಸಾಮರ್ಥ್ಯಗಳು
ಕ್ಯಾಮೆರಾ ವಿಭಾಗದಲ್ಲಿ, Samsung Galaxy M36 5G ಫೋನ್ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲಿತ 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಮಾತ್ರೆ-ಆಕಾರದ ಮಾಡ್ಯೂಲ್ ಮತ್ತು LED ಫ್ಲ್ಯಾಷ್ ಇರಿಸಲಾಗಿಎ. ಕಂಪನಿಯ ಪ್ರಕಾರ, ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 4K ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತವೆ.

Samsung Galaxy M36 5G: ಜೂನ್ 27 ರಂದು ಬಿಡುಗಡೆ, 20 ಸಾವಿರಕ್ಕಿಂತ ಕಡಿಮೆ ಬೆಲೆ

Samsung Galaxy M36 5G: AI ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ
Galaxy M36 5G ಪೋನಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಅದರ AI ವೈಶಿಷ್ಟ್ಯಗಳು. ಈ ಸ್ಮಾರ್ಟ್‌ಫೋನ್ Google Gemini ಮತ್ತು Circle to Search ನಂತಹ AI ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ, ಇದು ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇತ್ತೀಚೆಗೆ Geekbench ನಲ್ಲಿ SM-M366B ಮಾದರಿ ಸಂಖ್ಯೆಯೊಂದಿಗೆ ಗುರುತಿಸಲಾದ Galaxy M36 5G, Exynos 1380 SoC ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಇದು 6GB RAM ನೊಂದಿಗೆ ಜೋಡಿಸಲ್ಪಟ್ಟಿರಬಹುದು ಮತ್ತು Android 15-ಆಧಾರಿತ One UI 7 ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

Samsung Galaxy M36 5G: ಬೆಲೆ ಎಷ್ಟು?
ಬೆಲೆಯ ವಿಷಯದಲ್ಲಿ, Samsung Galaxy M36 5G ಫೋನ್ ₹20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ದೇಶದಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ. ಈ ಬೆಲೆ ಶ್ರೇಣಿಯಲ್ಲಿ, ಇದು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ, ವಿಶೇಷವಾಗಿ ಅದರ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳನ್ನು ಪರಿಗಣಿಸಿದಾಗ.ಸ್ಯಾಮ್‌ಸಂಗ್ Galaxy M36 5G ಯ ಅಧಿಕೃತ ಬಿಡುಗಡೆಗಾಗಿ ಕಾದು ನೋಡಬೇಕಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಮತ್ತು ಕೈಗೆಟುಕುವ ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.

ಮುಂಬರುವ Samsung Galaxy M36 5G ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು ಹೇಗಿವೆ? ಮತ್ತು ಬೆಲೆ ನಿಮ್ಮನ್ನು ಆಕರ್ಷಿಸಿದದೆಯಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Samsung Galaxy M36 5G will feature a triple rear camera system, led by a 50-megapixel main sensor that includes optical image stabilization (OIS).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+