ಭಾರತದಲ್ಲಿ ಇಂದು 'ಗ್ಯಾಲಕ್ಸಿ ಎಂ40' ರಿಲೀಸ್!..ಬೆಲೆ ಕೂಡ ಫಿಕ್ಸ್!!
ಜಾಗತಿಕವಾಗಿ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಯಶಸ್ವಿಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯ ಎಂ30, ಎಂ20 ಹಾಗೂ ಎಂ10ಗಳ ಬಳಿಕ ಇದೀಗ ಇದೇ ಸರಣಿಯ ಎಂ40 ಸ್ಮಾರ್ಟ್‌ಪೋನ್ ಬಿಡುಗಡೆಗೆ ಸಿದ್ಧತೆ ನಡೆದಿದೆ. ಜೂನ್ 11 ರಂದು, ಅಂದರೆ ನಾಳೆ ಮಂಗಳವಾರ ದೇಶದಲ್ಲಿ ಗ್ಯಾಲಕ್ಸಿ M40 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.
ಹೌದು, ಎಂ ಸರಣಿ ಯಶಸ್ಸನ್ನು ಮತ್ತೆ ಪಡೆಯಲು ಮುಂದಾಗಿರುವ ಕಂಪೆನಿಯು ಹಲವು ವಿಶೇಷತಗಳ ಮೂಲಕ ಎಂ40 ಫೋನನ್ನು ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ. ಸ್ಯಾಮ್ಸಂಗ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಸಿಮ್ ವಾರ್ಸಿ ಅವರು ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್ ಸುಮಾರು 20,000. ರೂ.ಗಳಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದ್ದಾರೆ.

ಕಳೆದ ಜನವರಿಯ ಕೊನೆಯಲ್ಲಿ ದೇಶದಲ್ಲಿ ಗ್ಯಾಲಕ್ಸಿ ಎಂ ಸರಣಿ ಫೋನ್‌ಗಳು ಬಿಡುಗಡೆಯಾದಂದಿನಿಂದ ಎರಡು ಮಿಲಿಯನ್ ಮಾರಾಟ ಕಂಡಿವೆ. ಇದೇ ಯಶಸ್ಸನ್ನು ಮತ್ತೆ ಪಡೆಯಲು ಮುಂದಾಗಿರುವ ಕಂಪೆನಿಯು ಇದೀಗ ಎಂ40 ಬಿಡುಗಡೆ ಮಾಡುತ್ತಿದೆ. ಹಾಗಾದರೆ, ಈಗಾಗಲೇ ಲೀಕ್ ಆಗಿರುವ ಮಾಹಿತಿಯಂತೆ ಗ್ಯಾಲಕ್ಸಿ ಎಂ40 ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ವಿನ್ಯಾಸ!
ಮಾರುಕಟ್ಟೆಗೆ ತರುವ ಮುನ್ನವೇ ಗ್ಯಾಲಕ್ಸಿ M40 ಫೋನ್ ಅನ್ನು ಈಗಾಗಲೇ ಅಮೆಜಾನ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಚಿತ್ರದಲ್ಲಿರುವಂತೆ ಗ್ಯಾಲಕ್ಸಿ M40 ಬಹುತೇಕ ಪೂರ್ಣ ಡಿಸ್‌ಪ್ಲೇ ಹೊಂದಿರುವಂತೆ ಕಾಣುತ್ತಿದ್ದು, ಎಡಭಾಗದ ಒಂದು ಚುಕ್ಕೆಯಂತೆ ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆ ಇದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಡಿಸ್‌ಪ್ಲೇ
ಗ್ಯಾಲಕ್ಸಿ M40 ಫೋನ್ 6.3-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದೆ. 1080×2340 ಪಿಕ್ಸೆಲ್‌ಗಳ ಸಾಮರ್ಥ್ಯದಲ್ಲಿ ಇನ್ಫಿನಿಟಿ ಓ ಪ್ರದರ್ಶನ ಫಲಕವನ್ನು ನೀಡಲು ಕಂಪೆನಿ ಸಿದ್ಧವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಾಹಿತಿ ಅಧಿಕೃತವಾಗಿದ್ದರೆ ಗ್ಯಾಲಕ್ಸಿ M40 ಡಿಸ್‌ಪ್ಲೇ ಸಾಮರ್ಥ್ಯಕ್ಕೆ ಸರಿಸಾಟಿಯಾಗುವ ಬಜೆಟ್ ಸ್ಮಾರ್ಟ್‌ಫೋನ್‌ಗಳು ಇಲ್ಲ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಪ್ರೊಸೆಸರ್
ಇತ್ತೀಚಿನ ವರದಿಗಳು ಉಲ್ಲೇಖಿಸಿದಂತೆ ಗ್ಯಾಲಕ್ಸಿ M40 ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ ಎಂದು ಹೇಳಲಾಗಿದೆ. 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 600 ಸರಣಿ ಪ್ರೊಸೆಸರ್ ಇರಲಿದೆ ಎಂದು ಹೇಳಲಾಗಿದೆಯಾದರೂ ನಿಖರ ಚಿಪ್‌ಸೆಟ್ ಬಗ್ಗೆ ಮಾಹಿತಿ ಇಲ್ಲ. ಇನ್ನು ಅಡ್ರಿನೊ 612 ಜಿಪಿಯು ಇರುವುದು ಬಹುತೇಕ ಖಚಿತವಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಕ್ಯಾಮೆರಾ!
ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಪ್ರಾಥಮಿಕ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೆ, ಎರಡನೆಯ ಮತ್ತು ಮೂರನೇ ಕ್ಯಾಮೆರಾಗಳು ಕ್ರಮವಾಗಿ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು ಆಳ ಸಂವೇದನೆಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ.ಇವುಗಳ ಸಾಮರ್ಥ್ಯದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಬ್ಯಾಟರಿ
ವರದಿಗಳ ಪ್ರಕಾರ, ಗ್ಯಾಲಕ್ಸಿ ಎಂ40 ಫೋನ್ 3,500 mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಗ್ಯಾಲಕ್ಸಿ M30 ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವುದರಿಂದ, ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್ ಕೂಡ ವೇಗದ ಚಾರ್ಜಿಂಗ್ ಬೆಂಬಲ ಹೊಂದಿರಲಿದೆ. ಈ ಮೊದಲು ಲೀಕ್ ಆದ ವರದಿಗಳಲ್ಲಿ 5000 mAh ಬ್ಯಾಟರಿ ಇರಲಿದೆ ಎಂಬ ಗಾಳಿಸುದ್ದಿ ಇದ್ದವು.

ಸ್ಯಾಮ್ಸಂಗ್ ಗ್ಯಾಲಕ್ಸಿ ಇತರೆ ಫೀಚರ್ಸ್
ಗ್ಯಾಲಕ್ಸಿ M40 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ, ಒನ್ ಯುಐ ಜೊತೆಗೆ ಆಂಡ್ರಾಯ್ಡ್ ಪೈ ಮತ್ತು ಇಯರ್ಪೀಸ್ ಅನ್ನು ಬದಲಿಸುವ ಆಡಿಯೋ ಸೌಂಡ್ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ. ಇದು ನೋಕಿಯಾ 7.1 ಮತ್ತು ಪೊಕೊ ಎಫ್ 1 ಫೋನ್‌ಗಳಿಗೆ ಸೆಡ್ಡುಹೊಡೆಯುವಂತಿದೆ.


Click it and Unblock the Notifications