'ಗ್ಯಾಲಕ್ಸಿ ಎಂ 40' ಖರೀದಿಸಲು ಸಿಹಿಸುದ್ದಿ ನೀಡಿತು 'ಸ್ಯಾಮ್‌ಸಂಗ್'!

|

ಇತ್ತೀಚಿಗಷ್ಟೇ ಬಿಡುಗಡೆಯಾದ ಜನಪ್ರಿಯ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಂ 40' ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಮುಕ್ತ ಮಾರಾಟದಲ್ಲಿ ಖರೀದಿಗೆ ಲಭ್ಯವಿದೆ. ಅಮೆಜಾನ್ ಆನ್‌ಲೈನ್ ಸ್ಟೋರ್‌ ಫ್ಲಾಶ್‌ಸೇಲ್‌ನಲ್ಲಿ ಭರ್ಜರಿ ಮಾರಾಟ ಕಂಡಿದ್ದರೂ ಸಹ, ಇದೇ ಸಮಯದಲ್ಲೇ ಸ್ಮಾರ್ಟ್‌ಫೋನ್ ಅನ್ನು ತೆರೆದ ಮಾರಾಟದಲ್ಲಿಡಲು ಕಂಪೆನಿ ಮುಂದಾಗಿದೆ ಎಂದು ತಿಳಿದುಬಂದಿದೆ.

'ಗ್ಯಾಲಕ್ಸಿ ಎಂ 40' ಖರೀದಿಸಲು ಸಿಹಿಸುದ್ದಿ ನೀಡಿತು 'ಸ್ಯಾಮ್‌ಸಂಗ್'!

ಹೌದು, ಕೇವಲ ಒಂದು ವಾರದ ಅವಧಿಯಲ್ಲಿ ಕಳೆದ ಎರಡು ಫ್ಲಾಶ್‌ಸೇಲ್‌ಗಳಲ್ಲಿ ಸೋಲ್ಡ್ ಔಟ್ ಆಗಿದ್ದ 'ಗ್ಯಾಲಕ್ಸಿ ಎಂ 40' ಫೋನನ್ನು ಯಾವುದೇ ಸಮಯದಲ್ಲಿ ಅಮೆಜಾನ್.ಇನ್ ಮತ್ತು ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದು ಎಂದು ಕಂಪೆನಿ ದೃಢೀಕರಿಸಿದೆ. ಆದರೆ, ಸಾಮಾನ್ಯ ಸ್ಟೋರ್‌ಗಳಲ್ಲಿ ಫೋನ್ ಲಭ್ಯವಿರುವ ಯಾವುದೇ ಮಾಹಿತಿ ನೀಡಿಲ್ಲ.

ಇನ್ನು ಸ್ಯಾಮ್‌ಸಂಗ್ ಹೊಸ ನಡೆಯ ಪರಿಣಾಮವಾಗಿ 19,990 ರೂಪಾಯಿ ಬೆಲೆಯ ಗ್ಯಾಲಕ್ಸಿ ಎಂ 40 ಬಹುಬೇಗ ನಿಮ್ಮ ಕೈ ಸೇರಲಿದೆ ಎಂದು ಹೇಳಬಹುದು. ಹಾಗಾದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿರುವ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಂ 40' ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಅದರ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ವಿನ್ಯಾಸ!

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ವಿನ್ಯಾಸ!

ಮಾರುಕಟ್ಟೆಗೆ ತರುವ ಮುನ್ನವೇ ಗ್ಯಾಲಕ್ಸಿ M 40 ಫೋನ್ ಅನ್ನು ಅಮೆಜಾನ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದರಂತೆ ಗ್ಯಾಲಕ್ಸಿ M40 ಬಹುತೇಕ ಪೂರ್ಣ ಡಿಸ್‌ಪ್ಲೇ ಹೊಂದಿರುವಂತೆ ಕಾಣುತ್ತಿದೆ. ಡಿಸ್‌ಪ್ಲೇ ಎಡಭಾಗದ ಮೂಲೆಯಲ್ಲಿ ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಯನ್ನು ಫೋನ್ ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಡಿಸ್‌ಪ್ಲೇ

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಡಿಸ್‌ಪ್ಲೇ

ಮೊದಲೇ ತಿಳಿದಂತೆ ಗ್ಯಾಲಕ್ಸಿ M 40 ಫೋನ್ 6.3-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 1080×2340 ಪಿಕ್ಸೆಲ್‌ಗಳ ಸಾಮರ್ಥ್ಯದಲ್ಲಿ ಇನ್ಫಿನಿಟಿ ಓ ಪ್ರದರ್ಶನ ಫಲಕವನ್ನು ನೀಡಿ ಸ್ಯಾಮ್‌ಸಂಗ್ ಗಮನಸೆಳೆದಿದೆ. ಫೋನ್ ಸ್ಕ್ರೀನ್ ಧ್ವನಿ ತಂತ್ರಜ್ಞಾನವನ್ನು ಒಳಗೊಂಡಿರುವ ವಿಶೇಷತೆಯಲ್ಲಿ ಗ್ಯಾಲಕ್ಸಿ M40 ಡಿಸ್‌ಪ್ಲೇ ಅತ್ಯುತ್ತಮವಾಗಿ ಮೂಡಿಬಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಪ್ರೊಸೆಸರ್

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಪ್ರೊಸೆಸರ್

ಗ್ಯಾಲಕ್ಸಿ M 40 ಸ್ಮಾರ್ಟ್‌ಫೋನಿನಲ್ಲಿ 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 675 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 6GB RAM ಮತ್ತು 128GB ಆಂತರಿಕ ಸಂಗ್ರಹಣಾ ಮಾದರಿಯಲ್ಲಿ ಬಿಡುಗಡೆಯಾಗಿರುವ ಫೋನಿನ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದ್ದು, ಅಡ್ರಿನೊ 612 ಜಿಪಿಯು ಇರುವುದು ಗೇಮಿಂಗ್‌ಗೆ ಅತ್ಯುತ್ತಮವಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಕ್ಯಾಮೆರಾ!

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಕ್ಯಾಮೆರಾ!

ಗ್ಯಾಲಕ್ಸಿ ಎಂ 40 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಪ್ರಾಥಮಿಕ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೆ, 8MP ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು 5MP ಆಳ ಸಂವೇದಕಗಳು ಕ್ಯಾಮೆರಾ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಇದರಲ್ಲಿ 4K ರೆಸೊಲ್ಯೂಶನ್ ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಬ್ಯಾಟರಿ

ಗ್ಯಾಲಕ್ಸಿ ಎಂ 40 ಫೋನ್ 3,500 mAh ಬ್ಯಾಟರಿಯನ್ನು ಹೊಂದಿರಲಿದೆ ಎಂ ಎಂಬುದು ನಿಜವಾಗಿದೆ. 15W ಯುಎಸ್ಬಿ-ಸಿ ಚಾರ್ಜರ್ನೊಂದಿಗೆ ಗ್ಯಾಲಕ್ಸಿ M30 ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಮೊದಲಿನ ಲೀಕ್ ವರದಿಗಳಲ್ಲಿ 5000 mAh ಬ್ಯಾಟರಿ ಇರಲಿದೆ ಎಂಬ ಗಾಳಿಸುದ್ದಿ ಇದ್ದವು. ಆದರೆ, ಬ್ಯಾಟರಿ ವಿಷಯದಲ್ಲಿ ಸ್ಯಾಮ್‌ಸಂಗ್ ಸ್ವಲ್ಪ ಹಿಂದುಳಿದಿದೆ ಎನ್ನಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಇತರೆ ಫೀಚರ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ M 40 ಇತರೆ ಫೀಚರ್ಸ್

ಗ್ಯಾಲಕ್ಸಿ M 40 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ದುರದೃಷ್ಟವಶಾತ್, ಹೆಡ್ಫೋನ್ ಜ್ಯಾಕ್ ಫೋನಿನಿಂದ ಕಾಣೆಯಾಗಿದೆ.ಇಯರ್ಪೀಸ್ ಅನ್ನು ಬದಲಿಸಿ ಆಡಿಯೋ ಸೌಂಡ್ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಯಾಗಿದ್ದು, ಒನ್ ಯುಐ ಜೊತೆಗೆ ಆಂಡ್ರಾಯ್ಡ್ ಪೈ ಡಾಲ್ಬಿ ಅಟ್ಮಾಸ್ ಬೆಂಬಲ, ಎನ್ಎಫ್ಸಿ ಮತ್ತು ಬ್ಲೂಟೂತ್ 5.0 ತಂತ್ರಜ್ಞಾನಗಳು ಸೇರಿಕೊಂಡಿವೆ.

Best Mobiles in India

English summary
the Samsung Galaxy M40 ₹ 19,990 can be purchased in India at any time through Amazon.in and Samsung Online Store. Samsung India confirmed the open sale of the smartphone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X