Home
ಮೊಬೈಲ್

Samsung Galaxy M55s 5G ಲಾಂಚ್: ಸ್ಟೈಲಿಶ್ ಲುಕ್.. 50MP ಸೆಲ್ಫಿ ಕ್ಯಾಮೆರಾ.. ಬೆಲೆ?

ಟೆಕ್ ದೈತ್ಯ ಸ್ಯಾಮ್‌ಸಂಗ್‌ ಹೊಸ 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ, ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G (Samsung Galaxy M55s 5G) ಸ್ಮಾರ್ಟ್‌ಫೋನ್. ಈ ಮೂಲಕ ಕಂಪನಿಯು ತನ್ನ 'M' ಸರಣಿಯನ್ನು ಮಾರುಕಟ್ಟೆಯಲ್ಲಿ ವಿಸ್ತರಿಸಿದೆ. ಈ ನೂತನ ಮೊಬೈಲ್ ಇತ್ತೀಚಿನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದೆ. ನೀವು, ಅಮೆಜಾನ್ ಮೂಲಕ ಖರೀದಿಸಬಹುದು. ನಿರೀಕ್ಷೆಯಂತೆಯೇ, ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ನೀವು ಸ್ಯಾಮ್‌ಸಂಗ್‌ನ ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಉತ್ತಮ ಆಯ್ಕೆಯಾಗಿದೆ. ಈ ಫೋನಿನ ವಿಶೇಷತೆಯೆಂದರೆ, ಇದು 50 ಮೆಗಾಪಿಕ್ಸೆಲ್ ಸೆಲ್ಫಿ ಮತ್ತು 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್‌ ಸ್ನಾಪ್‌ಡ್ರಾಗನ್ 7 Gen 1 ಚಿಪ್‌ಸೆಟ್ ಹೊಂದಿದೆ. ಇದರೊಂದಿಗೆ, 5000mAh ಬ್ಯಾಟರಿ, 6.7 ಇಂಚಿನ ಸೂಪರ್ AMOLED ಡಿಸ್ಪ್ಲೇಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Samsung Galaxy M55s 5G ಲಾಂಚ್: 50MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಬೆಲೆ ಮತ್ತು ಆಫರ್‌ಗಳು

ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಅನ್ನು ಕೇವಲ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 17,999 ರೂ. ಆಗಿದೆ. ಇದರಲ್ಲಿ ಬ್ಯಾಂಕ್ ಆಫರ್ ಕೂಡ (2,000 ರೂ.) ಒಳಗೊಂಡಿದೆ. ಈ ಫೋನ್ ಸೆಪ್ಟೆಂಬರ್ 26 ರಿಂದ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್, ಕಂಪನಿಯ ವೆಬ್‌ಸೈಟ್ ಮತ್ತು ಇತರೆ ಚಿಲ್ಲರೆ ಮಳಿಗೆಗಳ ಮೂಲಕ ಮಾರಾಟವಾಗಲಿದೆ. ನೀವು, ಕೋರಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್‌ ಬಣ್ಣಗಳಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 120Hz ರಿಫ್ರೆಶ್ ದರದೊಂದಿಗೆ 1000 ನಿಟ್ಸ್ ಬ್ರೈಟ್‌ನೆಸ್‌ನ ಬೆಂಬಲ ಲಭ್ಯವಿದೆ. ಈ ಡಿಸ್ಪ್ಲೇಯು ಉತ್ತಮ ಗುಣಮಟ್ಟದ ಬಣ್ಣದ ಕಾಂಟ್ರಾಸ್ಟ್ ಅನ್ನು ನೀಡುತ್ತದೆ. ಈ ಫೋನ್ ದೃಷ್ಟಿ ವರ್ಧಕ ತಂತ್ರಜ್ಞಾನವನ್ನು ಸಹ ಹೊಂದಿದೆ.

ಪ್ರೊಸೆಸರ್: ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಅನ್ನು ಸ್ನಾಪ್‌ಡ್ರಾಗನ್ 7 Gen 1 ಚಿಪ್‌ಸೆಟ್‌ನೊಂದಿಗೆ ಪರಿಚಯಿಸಿದೆ. ಇದು ಆಕ್ಟಾ ಕೋರ್ ಪ್ರೊಸೆಸರ್ ಆಗಿದ್ದು, ಗ್ರಾಹಕರಿಗೆ 2.4GHz ವರೆಗೆ ಹೆಚ್ಚಿನ ಗಡಿಯಾರದ ವೇಗವನ್ನು ಒದಗಿಸುತ್ತದೆ. ಇದರ ಸಹಾಯದಿಂದ ನೀವು, ಸಾಮಾನ್ಯ ಮತ್ತು ಭಾರೀ ಕಾರ್ಯಾಚರಣೆಗಳನ್ನು ಸುಲಭವಾಗಿ ನಿರ್ವಹಿಸಬಹುದು. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌: ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಮೊಬೈಲ್‌ನಲ್ಲಿ ಕಂಪನಿಯು 8GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಅನ್ನು ಒದಗಿಸಿದೆ. ಇದರೊಂದಿಗೆ, 8GB ವರ್ಚುವಲ್ RAM ಬೆಂಬಲವೂ ಇದೆ. ಇದರ ಸಹಾಯದಿಂದ ನೀವು 16GB RAM ನ ಶಕ್ತಿಯನ್ನು ಬಳಸಿಕೊಳ್ಳಬಹುದು.

ಈ ಸುದ್ದಿ ಓದಿದ್ದೀರಾ?: Samsung Galaxy F05 ಸೇಲ್ ಶುರು: ಕೇವಲ 8,000 ರೂ.. ಅದೂ Samsung ಫೋನ್‌!

ಕ್ಯಾಮೆರಾ: ಕ್ಯಾಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಅನ್ನು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮೈಕ್ರೋ ಕ್ಯಾಮೆರಾ ಇದೆ. ಇದು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಇದಲ್ಲದೆ, ಡ್ಯುಯಲ್ ರೆಕಾರ್ಡಿಂಗ್ ಮೋಡ್ ಅನ್ನು ಸಹ ನೀಡಲಾಗಿದೆ.

ಬ್ಯಾಟರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 45W ವೇಗದ ಚಾರ್ಜಿಂಗ್ ಅನ್ನು ನೀಡಲಾಗಿದೆ. ದೀರ್ಘ ಬ್ಯಾಕಪ್ ಜೊತೆಗೆ, ನೀವು ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು ಸಹ ಸಾಧ್ಯವಾಗುತ್ತದೆ.

ಇತರೆ ವೈಶಿಷ್ಟ್ಯಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ M55s 5G ಮೊಬೈಲ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸಿಮ್ 5G, 4G, ಬ್ಲೂಟೂತ್ 5.2, ವೈ-ಫೈ 6 ನಂತಹ ಹಲವು ಆಯ್ಕೆಗಳೊಂದಿಗೆ ಬರುತ್ತದೆ.

Best Mobiles in India

English summary
Samsung Galaxy M55s 5G Launched in India at Rs 17,999. Sale Set for September 26: know Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+