Home
ಮೊಬೈಲ್

ನೋಡ್ ಗುರು.. ಸೇಲ್ ಶುರು! 3000 ರಿಯಾಯಿತಿ.. 6 ವರ್ಷ ಬಳಸಬಹುದು.. ಯಾವ ಫೋನ್? ಖರೀದಿ ಎಲ್ಲಿ?

ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಹೊಸ 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G (Samsung Galaxy M56 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು, ಈ ಫೋನ್ ಕಳೆದ ವರ್ಷ ಪರಿಚಯಿಸಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ M55 5G (Samsung Galaxy M55 5G) ಫೋನಿನ ಅಪ್‌ಗ್ರೇಡ್ ಆವೃತ್ತಿಯಾಗಿದೆ. ಅಂದಹಾಗೆ, ಈ ಮೊಬೈಲ್ ಇಂದು ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ ಬೊಂಬಾಟ್ ಆಫರ್ ಘೋಷಿಸಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ ವಿಶೇಷತೆಗಳೆಂದರೆ, ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು Exynos 1480 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ. ಇದರೊಂದಿಗೆ, 8GB RAM + 256GB ಸ್ಟೋರೇಜ್, ಹಲವು ಎಐ (AI) ವೈಶಿಷ್ಟ್ಯಗಳಿವೆ. ಈ ಫೋನಿನ ಬೆಲೆ ಮತ್ತು ಆಫರ್ ತಿಳಿಯಲು ಮುಂದೆ ಓದಿ.

3000 ಡಿಸ್ಕೌಂಟ್‌: 50MP ಕ್ಯಾಮೆರಾ, 5000mAh ಬ್ಯಾಟರಿ.. ಯಾವುದು? ಖರೀದಿ ಎಲ್ಲಿ?

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಬೆಲೆ

8GB RAM + 128GB ಸ್ಟೋರೇಜ್ ಬೆಲೆ = 27,999 ರೂ.

8GB RAM + 256GB ಸ್ಟೋರೇಜ್ ಬೆಲೆ = 30,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಈ ಫೋನ್ ತಿಳಿ ಹಸಿರು ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 27,999 ರೂ. ಆಗಿದೆ. ಕಂಪನಿಯು ಆರಂಭಿಕ ಮಾರಾಟದಲ್ಲಿ, ಈ ಮೊಬೈಲ್ ಮೇಲೆ ಖರೀದಿ ಮೇಲೆ 3,000 ರೂ. ರಿಯಾಯಿತಿ ನೀಡುತ್ತಿದೆ. ಈ ಆಫರ್ ಎಚ್‌ಡಿಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಲಭ್ಯವಿದೆ. ಈ ಸ್ಯಾಮ್‌ಸಂಗ್ 5G ಫೋನ್‌ ಇಂದಿನಿಂದ (ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಗೆ) ಅಮೆಜಾನ್ ಮತ್ತು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಸೂಪರ್ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, ವಿಷನ್ ಬೂಸ್ಟರ್ ಮತ್ತು 36% ತೆಳುವಾದ ಬೆಜೆಲ್‌ಗಳೊಂದಿಗೆ ಬರುತ್ತದೆ. ಈ ಫೋನಿನ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಣೆ ಪಡೆದಿದೆ. ಇದು ಗೀರುಗಳು ಮತ್ತು ಹನಿಗಳಿಂದ ರಕ್ಷಿಸುತ್ತದೆ. ಗೇಮಿಂಗ್ ಮತ್ತು ವಿಡಿಯೋ ಸ್ಟ್ರೀಮಿಂಗ್‌ಗೆ ಈ ಡಿಸ್ಪ್ಲೇ ಅತ್ಯುತ್ತಮವಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಫೋನ್ ಸ್ಯಾಮ್‌ಸಂಗ್‌ನ ಸ್ವಂತ Exynos 1480 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಯಾಮ್‌ಸಂಗ್ 5G ಫೋನ್ ಆಂಡ್ರಾಯ್ಡ್‌ 15 ಆಧಾರಿತ ಒನ್ UI 7 ಓಎಸ್ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 8GB RAM ನೊಂದಿಗೆ ಬರುತ್ತದೆ. ಇದರಲ್ಲಿ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು.

3000 ಡಿಸ್ಕೌಂಟ್‌: 50MP ಕ್ಯಾಮೆರಾ, 5000mAh ಬ್ಯಾಟರಿ.. ಯಾವುದು? ಖರೀದಿ ಎಲ್ಲಿ?

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್‌ ಬೆಂಬಲದೊಂದಿಗೆ ಬರುತ್ತದೆ. ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಇನ್ನು ತೃತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಯಾಮ್‌ಸಂಗ್ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಇದು ಎಐ (AI) ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಸ್ಮಾರ್ಟ್‌ಫೋನ್ ಸ್ಲಿಮ್ ಮತ್ತು ಹಗುರವಾದ ವಿನ್ಯಾಸ ಹೊಂದಿದೆ. ಈ ಫೋನಿನಲ್ಲಿ ಹಲವು ಎಐ (AI) ವೈಶಿಷ್ಟ್ಯಗಳಿವೆ. ಇದರಲ್ಲಿ ಎಐ (ಆಬ್ಜೆಕ್ಟ್) ಎರೇಸರ್, ಎಡಿಟ್ ಸಜೆಶನ್ಸ್ ಮತ್ತು ಇಮೇಜ್ ಕ್ಲಿಪ್ಪರ್ ಸೇರಿದಂತೆ ಇನ್ನಿತರ ಎಐ ವೈಶಿಷ್ಟ್ಯಗಳು ಸೇರಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ಬ್ಲೂಟೂತ್, ಡ್ಯುಯಲ್ ಬ್ಯಾಂಡ್ ವೈ-ಫೈ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Samsung Galaxy M56 5G First Sale Start Today via Amazon: Check Price, Offers, Specifications and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+