Home
ಮೊಬೈಲ್

ಏ.17ಕ್ಕೆ ಲಾಂಚ್! ಭಾರತಕ್ಕೆ ಬರಲಿದೆ Samsung 5G ಫೋನ್.. 50MP ಕ್ಯಾಮೆರಾ.. 5000mAh ಬ್ಯಾಟರಿ.. ಬೆಲೆ ಎಷ್ಟು?

ಟೆಕ್ ದೈತ್ಯ ಸ್ಯಾಮ್‌ಸಂಗ್ ಮತ್ತೊಂದು ಹೊಸ ಮೊಬೈಲ್ ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿಯು ಇತ್ತೀಚೆಗೆ ಕಡಿಮೆ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಫೋನ್‌ಗಳನ್ನು ಪರಿಚಯಿಸಿತ್ತು. ಈ ಮೂಲಕ ಮೂಲಕ ಭಾರತದಲ್ಲಿ ತನ್ನ ಗ್ಯಾಲಕ್ಸಿ 'M' ಸರಣಿಯನ್ನು ವಿಸ್ತರಿಸಿದೆ. ಇದೀಗ ಕಂಪನಿಯು ಈ ಸರಣಿಗೆ ಮತ್ತೊಂದು ಹೊಸ ಫೋನನ್ನು ಸೇರಿಸಲಿದೆ. ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G (Samsung Galaxy M56 5G) ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಘೋಷಿಸಿದೆ. ಈ 5G ಫೋನಿನ ಬಿಡುಗಡೆ ದಿನಾಂಕ, ಫೋಟೋಗಳು ಮತ್ತು ವಿಶೇಷತೆಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್ ಕಡಿಮೆ ಬೆಲೆಯನ್ನು ಹೊಂದಿದ್ದರೂ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿಯು ರಾಜಿ ಮಾಡಿಕೊಂಡಿಲ್ಲ. ಮುಂಬರುವ ಈ ಫೋನ್ Exynos 1480 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿರಲಿದೆ. ಇದರೊಂದಿಗೆ ಈ ಫೋನ್ 5,000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Samsung: ಏ.17ಕ್ಕೆ ಲಾಂಚ್! 50MP ಕ್ಯಾಮೆರಾ.. 5000mAh ಬ್ಯಾಟರಿ.. ಯಾವ ಫೋನ್?

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಬಿಡುಗಡೆ ದಿನಾಂಕ

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್ ಇದೇ ಏಪ್ರಿಲ್ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಈ ಮೊಬೈಲ್‌ನ ಮೈಕ್ರೋ ಸೈಟ್ ಅನ್ನು ಲೈವ್ ಮಾಡಲಾಗಿದೆ. ಇಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಬಿಡುಗಡೆ ದಿನಾಂಕದ ಜೊತೆಗೆ, ಈ 5G ಫೋನಿನ ಎಲ್ಲಾ ವಿವರಗಳನ್ನು ಸಹ ಬಹಿರಂಗಪಡಿಸಲಾಗಿದೆ. ಇನ್ನು ಏಪ್ರಿಲ್ 17 ರಂದು ಮುಂಬರುವ ಸ್ಯಾಮ್‌ಸಂಗ್ ಮೊಬೈಲ್ ಬೆಲೆಯನ್ನು ಘೋಷಿಸಲಾಗುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಫೋನ್ ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ವಿಷನ್ ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಕಂಪನಿಯ ಪ್ರಕಾರ, ಈ ಫೋನ್ ಶೇ.33 ರಷ್ಟು ಹೆಚ್ಚಿನ ಬ್ರೈಟ್‌ನೆಸ್ ಹೊಂದಿರುತ್ತದೆ. ಈ ಮೊಬೈಲ್‌ನ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆ ಹೊಂದಿದೆ. ಇದು ಫೋನನ್ನು ಸುರಕ್ಷಿತವಾಗಿಡುತ್ತದೆ. ಈ ಫೋನಿನ ದಪ್ಪ ಕೇವಲ 7.2 ಮಿಮೀ ಮತ್ತು ತೂಕ ಕೇವಲ 180 ಗ್ರಾಂ ಇದೆ ಎಂದು ಕಂಪನಿ ಹೇಳಿದೆ.

ಪ್ರೊಸೆಸರ್ ಸಾಮರ್ಥ್ಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್‌ನ ಸ್ವಂತ Exynos 1480 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಈ ಸ್ಯಾಮ್‌ಸಂಗ್ 5G ಫೋನ್ ಆಂಡ್ರಾಯ್ಡ್‌ 15 ಓಎಸ್ ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 8GB RAM ನೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿರುತ್ತದೆ.

Samsung: ಏ.17ಕ್ಕೆ ಲಾಂಚ್! 50MP ಕ್ಯಾಮೆರಾ.. 5000mAh ಬ್ಯಾಟರಿ.. ಯಾವ ಫೋನ್?

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಯಾಮ್‌ಸಂಗ್ 5G ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಸೆಲ್ಫಿ ಕ್ಯಾಮೆರಾದಿಂದಲೂ 10 ಬಿಟ್ HDR ವಿಡಿಯೋ ರೆಕಾರ್ಡಿಂಗ್ ಮಾಡಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗುವುದು.

Best Mobiles in India

English summary
Samsung Galaxy M56 5G India launch date announced: Key Specs Revealed via Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+