ಕಣ್ಣುಕುಕ್ಕುವ ಫೀಚರ್ಸ್..! ನಾಳೆ Samsung Galaxy M56 5G ಗ್ರ್ಯಾಂಡ್ ಲಾಂಚ್.. ಬೆಲೆ ಎಷ್ಟು? ಸೇಲ್ ಯಾವಾಗ?
ಟೆಕ್ ದೈತ್ಯ ಸ್ಯಾಮ್‌ಸಂಗ್ ನಾಳೆ ಭಾರತದಲ್ಲಿ ಹೊಚ್ಚ ಹೊಸ ಮೊಬೈಲ್ ಬಿಡುಗಡೆ ಮಾಡಲಿದೆ. ಇದನ್ನು ತನ್ನ ಗ್ಯಾಲಕ್ಸಿ 'M' ಸರಣಿಯ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ. ಹೌದು, ಕಂಪನಿಯು ಇತ್ತೀಚೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಫೋನ್‌ಗಳನ್ನು ಲಾಂಚ್ ಮಾಡಿತ್ತು. ಇದೀಗ ಈ ಸರಣಿಗೆ ಮತ್ತೊಂದು ಹೊಸ ಫೋನ್ ಸೇರ್ಪಡೆಯಾಗಲಿದೆ. ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G (Samsung Galaxy M56 5G) ಎಂಬ ಹೆಸರಿನೊಂದಿಗೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಫೋನಿನ ಬಿಡುಗಡೆ ವಿವರಗಳು ಮತ್ತು ವಿಶೇಷತೆಗಳು ಇಲ್ಲಿವೆ ನೋಡಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್ ಕಡಿಮೆ ಬಜೆಟ್‌ನಲ್ಲಿ ಬಿಡುಗಡೆಯಾಗಲಿದೆ. ಆದಾಗ್ಯೂ, ಈ ಫೋನಿನ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿರಲಿದೆ. ಈ ಫೋನ್ Exynos 1480 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 5,000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ. ಈ ಫೋನಿನ ದಪ್ಪ ಕೇವಲ 7.2 ಮಿಮೀ ಮತ್ತು ತೂಕ ಕೇವಲ 180 ಗ್ರಾಂ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಬಿಡುಗಡೆ ವಿವರ
ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಸ್ಮಾರ್ಟ್‌ಫೋನ್ ನಾಳೆ (ಏಪ್ರಿಲ್ 17) ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಈಗಾಗಲೇ ಅಮೆಜಾನ್‌ನಲ್ಲಿ ಈ ಫೋನಿನ ಮೈಕ್ರೋ ಸೈಟ್ ಲೈವ್ ಆಗಿದೆ. ಈ ಮೂಲಕ ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಮೊಬೈಲ್‌ನ ಎಲ್ಲಾ ವಿವರಗಳನ್ನು ಸಹ ಬಹಿರಂಗಪಡಿಸಲಾಗಿದೆ. ನಾಳೆ ಮುಂಬರುವ ಸ್ಯಾಮ್‌ಸಂಗ್ ಫೋನಿನ ಬೆಲೆ ಮತ್ತು ಮಾರಾಟದ ದಿನಾಂಕವನ್ನು ಪ್ರಕಟಿಸಲಾಗುವುದು. ಮುಂಬರುವ ಫೋನಿನಲ್ಲಿ ಆಬ್ಜೆಕ್ಟ್ ಎರೇಸರ್ ಮತ್ತು ಇಮೇಜ್ ಕ್ಲಿಪ್ಪರ್ ಸೇರಿದಂತೆ ಮುಂತಾದ ಎಐ (AI) ಇಮೇಜಿಂಗ್ ಟೂಲ್‌ಗಳನ್ನು ಅಳವಡಿಸಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಸ್ಮಾರ್ಟ್‌ಫೋನ್ ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ವಿಷನ್ ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಈ ಫೋನ್ ಶೇ.33 ರಷ್ಟು ಹೆಚ್ಚಿನ ಬ್ರೈಟ್‌ನೆಸ್ ಪಡೆದಿದೆ. ಈ ಮೊಬೈಲ್‌ನ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆ ಹೊಂದಿದೆ. ಈ ಮೊಬೈಲ್ ಸ್ಯಾಮ್‌ಸಂಗ್‌ನ ಸ್ವಂತ Exynos 1480 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಯಾಮ್‌ಸಂಗ್ 5G ಫೋನ್ ಆಂಡ್ರಾಯ್ಡ್ 15 ಓಎಸ್ ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 8GB RAM ನೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿರುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M56 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಇನ್ನು ತೃತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಈ ಸ್ಯಾಮ್‌ಸಂಗ್ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ.


Click it and Unblock the Notifications








