ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಮ್ಯೂಸಿಕ್‌ vs ಸೋನಿ ಎಕ್ಸಪೀರಿಯಾ ಜೆ

Posted By: Vijeth

ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಮ್ಯೂಸಿಕ್‌ vs ಸೋನಿ ಎಕ್ಸಪೀರಿಯಾ ಜೆ

ಪ್ರತಿಷ್ಠಿತ ತಾಂತ್ರಕ ಸರಕುಗಳ ತಯಾರಿಕಾ ಸಂಸ್ಥೆಯಾದ ಸ್ಯಾಮ್ಸಂಗ್‌ ಕೇವಲ ಗ್ಯಾಲಾಕ್ಸಿ ಎಸ್‌ 3 ಮಾದರಿಯ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳತ್ತ ಮಾತ್ರವಷ್ಟೇ ಗಮನ ಹರಿಸುತ್ತಿದೆ ಎಂಬುದನ್ನು ತನ್ನಯ ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ ಫೋನ್‌ ಬಿಡುಗಡೆ ಮಾಡುವ ಮೂಲಕ ಮಧ್ಯಮ ವರ್ಘದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳತ್ತ ಕೂಡ ಗಮನ ಹರಿಸುತ್ತಿದೆ ಎಂದು ಸಾಬೀತು ಪಡಿಸಿದೆ.

ವರದಿಗಳ ಪ್ರಕಾರ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಮ್ಯೂಸಿಕ್‌ ಪೋನ್‌ ಅಕ್ಟೋಬರ್‌ 11 ರಂದು ಗ್ಯಾಲಾಕ್ಸ್‌ ಎಸ್‌ 3 ಮಿನಿಯೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದೆ.

ಇತ್ತ ಸ್ಯಾಮ್ಸಂಗ್‌ ತನ್ನಯ ಮ್ಯೂಸಿಕ್‌ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮುಂದಾಗಿದ್ದರೆ ಜಪಾನ್‌ ಮೂಲದ ದಿಗ್ಗಜ ಸಂಸ್ಥೆಯಾದಂತಹ ಸೋನಿ ತನ್ನಯ ನೂತನ ಎಕ್ಸಪೀರಿಯಾ ಜೆ ಮಾದರಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಸಿದ್ದತೆಯಲ್ಲಿ ತೊಡಗಿದೆ.

ಅಂದಹಾಗೆ ಮಾರುಕಟ್ಟೆಗೆ ಕಾಲಿರಿಸಲಿರು ನೂತನ ಮ್ಯೂಸಿಕ್‌ ಫೋನ್‌ಗಳಾದಂತಹ ಗ್ಯಾಲಾಕ್ಸಿ ಮ್ಯೂಸಿಕ್‌ ಹಾಗೂ ಎಕ್ಸ್‌ಪೀರಿಯಾ ಜೆ ಸ್ಮಾರ್ಟ್‌ಫೋನ್ಸ್‌ಗಳು ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ ಎಂಬುದನ್ನು ಎವೆರಡರ ನಡುವಿನ ಹೋಲಿಕೆ ಮೂಲಕ ತಿಳಿದುಕೊಳ್ಳ ಬಹುದಾಗಿದೆ.

ಗಾತ್ರ ಹಾಗು ಸುತ್ತಳತೆ: ಗ್ಯಾಲಾಕ್ಸಿ ಮ್ಯೂಸಿಕ್‌ 110.1 x 59.0 x 12.25 mm ಸುತ್ತಳತೆ ಹಾಗೂ 107 ಗ್ರಾಂ ತೂಕವಿದ್ದರೆ, ಎಕ್ಸಪೀರಿಯಾ J ಸ್ಮಾರ್ಟ್‌ಫೋನ್‌ 124.3 x 61.2 x 9.2 mm ಸುತ್ತಳತೆಯೊಂದಿಗೆ 124 ಗ್ರಾಂ ತೂಕವಿದೆ.

ದರ್ಶಕ: ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ 3 ಟಚ್‌ಸ್ಕ್ರೀನ್‌ ದರ್ಶಕ ಹಾಗೂ 320 x 240 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. ಹಾಗೂ ಎಕ್ಸಪೀರಿಯಾ J ನಲ್ಲಿ 4 ಇಂಚಿನ ಟಚ್‌ ಸ್ಕ್ರೀನ್‌ ದರ್ಶಕ ಹಾಗೂ 480 x 854 ಪಿಕ್ಸೆಲ್‌ ರೆಸೆಲ್ಯೂಷನ್‌ ಹಾಗೂ BRAVIA ಮೊಬೈಲ್‌ ಎಂಜಿನ್‌ ಹೊಂದಿದೆ.

ಪ್ರೊಸೆಸರ್‌:ಗ್ಯಾಲಾಕ್ಸಿ ಮ್ಯೂಸಿಕ್‌ನ ವಿವರಗಳು ಲಭ್ಯವಿಲ್ಲ, ಆದರೆ ಎಕ್ಸಪೀರಿಯಾ J ನಲ್ಲಿ ಸಿಂಗಲ್‌-ಕೋರ್‌ 1GHz ARM ಕಾರ್ಟೆಕ್ಸ್‌ A5 ಪ್ರೊಸೆಸರ್ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಆಂಡ್ರಾಯ್ಡ್ 4.0 ICS ಆಪರೇಟಿಂಗ್‌ ಸಿಸ್ಟಂ ಹೊಂದಿವೆ.

ಕ್ಯಾಮೆರಾ:ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ ಹಿಂಬದಿಯ 3MP ಕ್ಯಾಮೆರಾ ಇದ್ದು ಮುಂಬದಿಯ ಕ್ಯಾಮೆರಾ ಇಲ್ಲ. ಮತ್ತೊಂದೆಡೆ ಎಕ್ಸಪೀರಿಯಾ J ನಲ್ಲಿ ಕೊಂಚ ಉತ್ತಮವಾದ ಹಿಂಬದಿಯ 5MP ಕ್ಯಾಮೆರಾ ಇದ್ದು ವಿಡಿಯೋ ಕರೆಗಾಗಿ ಮುಂಬದಿಯ 0.3MP VGA ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌:ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 4GB ಆಂತರಿಕ ಸ್ಟೋರೇಜ್‌, 512MB RAM ಹಾಗು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ: ಈ ವಿಭಾಗದಲ್ಲಿಯೂ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ Wi-Fi 802.11 b/g/n, ಬ್ಲೂಟೂತ್‌ ಹಾಗೂ ಮೈಕ್ರೋ USB 2.0 ಫೀಚರ್ಸ್‌ ಹೊಂದಿದೆ.

ಬ್ಯಾಟರಿ:ಗ್ಯಾಲಾಕ್ಸಿ ಮ್ಯೂಸಿಕ್‌ 1,300 mAh Li-ion ಬ್ಯಾಟರಿ ಹೊಂದಿದ್ದರೆ, ಎಕ್ಸಪೀರಿಯಾ J ನಲ್ಲಿ 1,750 mAh Li-ion ಬ್ಯಾಟರಿ ಇದ್ದು 7.5 ಗಂಟೆಗಳ ಟಾಕ್‌ಟೈಮ್‌ ಹಾಗೂ 25 ದಿನಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

Read In English...

ಬಜೆಟ್‌ ಸ್ಮಾರ್ಟ್‌ಫೋನ್‌ ಗ್ಯಾಲಾಕ್ಸಿ ಮ್ಯೂಸಿಕ್‌ ಬರಲಿದೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot