39,990 ರೂ. ಬೆಲೆಗೆ ಗ್ಯಾಲಾಕ್ಸಿ ನೋಟ್‌ 2 ಬಿಡುಗಡೆ

By Vijeth Kumar Dn
|

39,990 ರೂ. ಬೆಲೆಗೆ ಗ್ಯಾಲಾಕ್ಸಿ ನೋಟ್‌ 2 ಬಿಡುಗಡೆ
ಸ್ಯಾಮ್ಸಂಗ್‌ನ ಗ್ಯಾಲಾಕ್ಸಿ ನೋಟ್‌ 2 ಬಿಡುಗಡೆಯಾದ ದಿನಂದಿಂದಲೂ, ಭಾರತೀಯ ಮಾರುಕಟ್ಟೆಗೆ ಎಂದು ಆಗಮಿಸುತ್ತದೆಯೋ ಎಂದು ಬಕಪಕ್ಷಿಗಳಂತೆ ಕಾದುಕುಳಿತಿದ್ದ ಭಾರತೀಯ ಗ್ರಾಹಕರಿಗೆ ಒಂದು ಸಿಹಿ ಸಿಹಿ ಸುದ್ಧಿ. ದಕ್ಷಿಣ ಕೊರಿಯಾ ಮೂಲದ ಫೋನ್‌ ತಯಾರಿಕಾ ಸಂಸ್ಥೆಯಾದಂತಹ ಸ್ಯಾಮ್ಸಂಗ್‌ ತನ್ನಯ ನೂತನ 16.GB ಮಾದರಿಯ ಗ್ಯಾಲಾಕ್ಸಿ ನೋಟ್‌ 2 ಅನ್ನು ಕೊನೆಗೂ ಭಾರತೀಯ ಮಾರುಕಟ್ಟೆಗೆ 39,990 ರೂ. ಬೆಲೆಯೊಂದಿಗೆ ಬಿಡುಗಡೆ ಮಾಡಿದೆ.

ಬಾಲಿವುಡ್‌ ನಿರ್ದೇಶಕ ಇಂತಿಯಾಜ್‌ ಅಲಿ ನೂತನ ಗ್ಯಾಲಾಕ್ಸಿ ನೋಟ್‌ 2 ಬಿಡುಗಡೆ ಮಾಡಿದ್ದಾರೆ. ಅಂದಹಾಗೆ ಒಂದುವಾರದ ಬಳಿಕ ಸ್ಯಾಮ್ಸಂಗ್‌ನ ಎಲ್ಲಾ ಅಧಿಕೃತ ಮಳಿಗೆಗಳಲ್ಲಿ ಗ್ಯಾಲಾಕ್ಸಿ ನೋಟ್‌ 2 ಲಭ್ಯವಾಗಲಿದೆ, ವಿಶೇಷ ವೇನೆಂದರೆ 9 ತಿಂಗಳ ಕಂತಿನಲ್ಲಿ ಬಡ್ಡಿ ರಹಿತ ಎಎಮ್‌ಐ ಮೂಲಕ ಗ್ಯಾಲಾಕ್ಸಿ ನೋಟ್‌ 2 ಪಡೆಯಬಹುದಾಗಿದೆ.

ಅಂದಹಾಗೆ ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕಡೆ ಒಮ್ಮೆ ಗಮನ ಹರಿಸೋಣ.

ಗಾತ್ರ ಹಾಗೂ ತೂಕ: ಸ್ಯಾಮ್ಸಂಗ್‌ನ ಗ್ಯಾಲಾಕ್ಸಿ ನೋಟ್‌ 2 ಭಾರತದಲ್ಲಿ 151.1 x 80.5 x 9.4 mm ಸುತ್ತಳತೆ ಹಾಗೂ 180 ಗ್ರಾಂ ತೂಕದೊಂದಿಗೆ ಬಿಡುಗಡೆ ಮಾಡಲಾಗಿದೆ.

ದರ್ಶಕ: 5.5 ಇಂಚಿನ ಸೂಪರ್‌ AMOLED ಸಾಮರ್ತ್ಯದ ಟಚ್‌ಸ್ಕ್ರೀನ್‌ ನೊಂದಿಗೆ 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. ಇದಲ್ಲದೆ ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಗೊರಿಲ್ಲಾ ಗ್ಲಾಸ್‌ 2 ನ ರಕ್ಷಣೆ ಸೇರಿದಂತೆ S-Pen ಹೊಂದಿದೆ.

ಪ್ರೊಸೆಸರ್‌: Exynos 4412 ಕ್ವಾಡ್‌ ಚಿಪ್‌ಸೆಟ್‌ ಪ್ರೊಸೆಸರ್‌ ನಿಂದ ಕೂಡಿದೆ.

ಆಪರೇಟಿಂಗ್‌ ಸಿಸ್ಟಂ: ಗೂಗಲ್‌ನ ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಬೆಂಬಲಿತ ವಾಗಿದೆ.

ಕ್ಯಾಮೆರಾ: ಹಿಂಬದಿಯ 8MP ಕ್ಯಾಮೆರಾ ಇದ್ದು ಆಟೋ ಫೋಕಸ್‌, LED ಫ್ಲಾಷ್‌, ಜಿಯೋ-ಟ್ಯಾಗಿಂಗ್‌, ಟಚ್‌ ಫೋಕಸ್‌, ಫೇಸ್‌ ಹಾಗೂ ಸಮೈಲ್‌ ಡಿಟೆಕ್ಷನ್‌ ಸ್ಟೆಬೆಲೈಸರ್‌ ಹೊಂದಿದೆ. ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ 1.9MP ಕ್ಯಾಮೆರಾ ಕೂಡ ಹೊಂದಿದೆ.

ಸ್ಟೋರೇಜ್‌: 16GB, 32GB ಹಾಗೂ 64GB ಮಾದರಿಗಳಲ್ಲಿ ಲಭ್ಯವಿದ್ದು 2GB RAM ಇದ್ದು ನಂತರ 1GB RAM ನಲ್ಲಿಯೂ ಬರಲಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಣೆ ಮಾಡಬಹುದಾಗಿದೆ.

ಕನೆಕ್ಟಿವಿಟಿ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ HSDPA 21 Mbps, HSUPA 5.76 Mbps, 4G LTE, Wi-Fi 802.11 a/b/g/n, DLNA, Wi-Fi Direct, Wi-Fi ಹಾಟ್‌ಸ್ಪಾಟ್‌, ಬ್ಲೂಟೂತ್‌ 4.0 -A2DP ಹಾಗೂ EDR ಸೇರಿದಂತೆ ಮೈಕ್ರೋ USB 2.0 ಹೊಂದಿದೆ. ಅಂದಹಾಗೆ NFC ಕನೆಕ್ಟಿವಿಟಿ ಪೀಚರ್ಸ್‌ ಕೂಡ ಲಭ್ಯವಿದೆ.

ಬ್ಯಾಟರಿ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ 3,100 mAh Li-ion ಬ್ಯಾಟರಿ ಇದ್ದು ಕ್ಷಮತೆ ಕುರಿತಾದ ವರದಿಗಳು ಅಧಿಕೃತವಾಗಿ ಬಹಿರಂಗ ಗೊಂಡಿಲ್ಲ.

Read In English...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X