ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಫ್ಯಾಬ್ಲೆಟ್

ಗ್ಯಾಲಕ್ಸಿ S3 ಸ್ಮಾರ್ಟ್ ಫೋನ್ ಹಿಟ್ ಆಗಿದ್ದೇ ತಡ, ಸ್ಯಾಮ್ಸಂಗ್ ಗ್ಯಾಲಕ್ಸಿಯ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಎರಡೂ ಫೀಚರುಗಳನ್ನು ಹೊಂದಿರುವ ಫ್ಯಾಬ್ಲೆಟ್ (ಅಸೂಸ್ ಕೂಡ ಇದೇ ರೀತಿಯ ಫ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿತ್ತು) ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ನ ಬಗ್ಗೆ ನಿರೀಕ್ಷೆಗಳು ಮತ್ತಷ್ಟು ಜಾಸ್ತಿಯಾಗಿವೆ.
ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಗಲಿರುವ ಈ ಫ್ಯಾಬ್ಲೆಟ್ ನ ಹಿಂದಿನ ಆವೃತ್ತಿಗಿಂತಲೂ ಉತ್ತಮ ಫೀಚರುಗಳು ಇರುವ ನಿರೀಕ್ಷೆ ಇದ್ದು ಆಂಡ್ರಾಯ್ಡ್ ನ ಲೇಟೇಸ್ಟ್ ಆವೃತ್ತಿ, ಜೆಲ್ಲಿ ಬೀನ್ ತಂತ್ರಾಂಶ ಇರಲಿದೆ ಎನ್ನಲಾಗಿದೆ.
ಈ ಸ್ಮಾರ್ಟ್ ಫ್ಯಾಬ್ಲೆಟ್ ಏನೆಲ್ಲಾ ಫೀಚರುಗಳನ್ನು ಹೊಂದಿರಬಹುದು ಎಂಬುದನ್ನು ಇಲ್ಲಿ ಕೊಡಲಾಗಿದೆ:
- 5.5 ಇಂಚ್ ಡಿಸ್ಪ್ಲೇ
- ಆಂಡ್ರಾಯ್ಡ್ 4.1ಜೆಲ್ಲಿ ಬೀನ್ ತಂತ್ರಾಂಶ
- ಡ್ಯುಯಲ್ ಕೋರ್ ಪ್ರೊಸೆಸರ್, Exynos 5250 ಚಿಪ್ ಸೆಟ್
- 1.5 GB ಸಾಮರ್ಥ್ಯದ ರಾಮ್
- 16 GB ಆಂತರಿಕ ಮೆಮೊರಿ ಹಾಗು 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 8 ಮೆಗಾ ಪಿಕ್ಸೆಲ್ ಕ್ಯಾಮರಾ (ಜಿಯೋಟ್ಯಾಗಿಂಗ್, ಆಟೋಫೋಕಸ್, LED ಫ್ಲಾಶ್ ಜೊತೆಗೆ)
- ವೀಡಿಯೊ ಚಾಟ್ ಮಾಡಬಹುದಾದ ಮುಂಬದಿಯ ಕ್ಯಾಮೆರಾ
- 30 fps ನಲ್ಲಿ 1080p ವಿಡಿಯೋ ರೆಕಾರ್ಡಿಂಗ್
- GPRS, EDGE, ಬ್ಲೂಟೂತ್, USB ಮತ್ತು NFC.
- HTML ಮತ್ತು ಫ್ಲಾಶ್ ಸಹಾಯ ಮಾಡುವ ಬ್ರೌಸೆರ್
- ಗೈರೊ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್ ಹಾಗು ಡಿಜಿಟಲ್ ಕಂಪಾಸ್
- ಸ್ಟೀರಿಯೋ FM ರೇಡಿಯೋ, RDS ನೊಂದಿಗೆ
- 3.5 mm ಆಡಿಯೋ ಜ್ಯಾಕ್
ಈ ಸ್ಮಾರ್ಟ್ ಫ್ಯಾಬ್ಲೆಟ್ ಕಪ್ಪು ಬಣ್ಣದಲ್ಲಿ ಮಾತ್ರ ಬರಲಿದ್ದುಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
Comments
Best Mobiles in India


Click it and Unblock the Notifications