5,000 ರೂ.ಬೆಲೆಗೆ ಪ್ರಿ ಆರ್ಡರ್‌ನಲ್ಲಿ ಗ್ಯಾಲಾಕ್ಸಿ ನೋಟ್‌ 2

Posted By: Staff
5,000 ರೂ.ಬೆಲೆಗೆ ಪ್ರಿ ಆರ್ಡರ್‌ನಲ್ಲಿ ಗ್ಯಾಲಾಕ್ಸಿ ನೋಟ್‌ 2

ದಕ್ಷಿಣ ಕೊರಿಯಾ ಮೂಲದ ಮೊಬೈಲ್‌ ತಯಾರಿಕಾ ಸಂಸ್ಥೆಯಾದ ಸ್ಯಾಮ್ಸಂಗ್‌ ತನ್ನಯ ಬಹು ನಿರೀಕ್ಷಿತ ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಚಾಲಿತ ಗ್ಯಾಲಾಕ್ಸಿ ನೋಟ್‌ 2 ಅನ್ನು ಆಗಸ್ಟ್‌ 29 ರಂದು ಬರ್ಲಿನ್‌ನಲ್ಲಿ ನಡೆದ IFA ವಸ್ತುಪ್ರದರ್ಶನದಲ್ಲಿ ಸಂಸ್ಥೆಯ ಇತರೆ ಸಾಧನಗಳೊಂದಿಗೆ ಅನಾವರಣ ಗೊಳಿಸಿತ್ತು. ಇದೇ ಸಂದರ್ಭದಲ್ಲಿ ಅಕ್ಟೋಬರ್‌ ವೇಳೆಗೆ ನೂತನ ಫಾಬ್ಲೆಟ್‌ ಮಾರುಕಟ್ಟೆಗೆ ಬಿಡುಗಡೆ ಯಾಗುವುದಾಗಿ ಸ್ಯಾಮ್ಸಂಗ್‌ ತಿಳಿಸಿತ್ತು.

ಆದರೆ ಸ್ಯಾಮ್ಸಂಗ್‌ ತನ್ನಯ ಇರಾದೆ ಬದಲಿಸಿದ್ದು ಬಹು ಬೇಗನೇ ಭಾರತೀಯ ಮಾರುಕಟ್ಟೆಗೆ ಗ್ಯಾಲಾಕ್ಸಿ ನೋಟ್‌ 2 ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದು ಸ್ಯಾಮ್ಸಂಗ್‌ ಇಂಡಿಯನ್‌ ಇ ಸ್ಟೋರ್‌ ಮೂಲಕ 5,000 ರೂ ಬೆಲೆಗೆ ಪ್ರಿ ಆರ್ಡರ್‌ ತೆಗೆದು ಕೊಳ್ಳುತ್ತಿದೆ. ಅಲ್ಲದೆ ಗ್ಯಾಲಾಕ್ಸಿ ನೋಟ್‌ 2 ಪ್ರಿ ಬುಕ್‌ ಮಾಡಿದವರು 2,399 ರೂ,ಬೆಲೆಯ ಡೆಸ್ಕ್‌ಟಾಪ್‌ ಡಾಕ್‌ ಜೊತೆಗೆ ಪಡೆಯಲಿದ್ದಾರೆ, ಅಂದಹಾಗೆ ಈ ಸಾಧನದ ನಿಖರ ಬೆಲೆ ಏಷ್ಟೆಂಬುದನ್ನು ಸಂಸ್ಥೆ ಈ ವರೆಗೂ ತಿಳಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot