ಗ್ಯಾಲಾಕ್ಸಿ ನೋಟ್‌ 2 Vs ಅಸೂಸ್‌ ಪ್ಯಾಡ್‌ಫೋನ್‌ 2

By Vijeth Kumar Dn
|

ಗ್ಯಾಲಾಕ್ಸಿ ನೋಟ್‌ 2 Vs ಅಸೂಸ್‌ ಪ್ಯಾಡ್‌ಫೋನ್‌ 2

ಪ್ರಸಕ್ತ ಸಾಲಿನಲ್ಲಿ ಸ್ಯಾಮ್ಸಂಗ್‌ ಹಾಗೂ ಅಸೂಸ್‌ ಎರಡೂ ಸಂಸ್ಥೆಗಳಿಗೂ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ ಎಂದೇ ಹೇಳಬಹುದು. ಅದರಲ್ಲಿಯೂ ಸ್ಯಾಮ್ಸಂಗ್‌ ಮಾರುಕಟ್ಟೆಯಲ್ಲಿ ಆಪಲ್ ಶೇರ್ಸ್‌ನ ಪಾರುಪತ್ಯವನ್ನು ಕಸಿದುಕೊಂಡರೆ, ಅಸೂಸ್‌ ಮಾರುಕಟ್ಟೆಯಲ್ಲಿ ತನ್ನಯ ಗೋಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ನೊಂದಿಗೆ ಉತ್ತಮ ವಿಮರ್ಶೆಯನ್ನು ಪಡೆದಿದೆ. ಅಂದಹಾಗೆ ತಮ್ಮ ಸರಕುಗಳ ಮಾರಾಟದಲ್ಲಿ ಎರಡೂ ಸಂಸ್ಥೆಗಳು ಉತ್ತಮ ಮಾರಾಟ ಗಳಿಸುತ್ತಿರುವ ಹಾದಿಯಲ್ಲಿರುವ ಎರಡೂ ಸಂಸ್ಥೆಗಳು ತಮ್ಮಯ ನೂತನ ಗ್ಯಾಲಾಕ್ಸಿ ನೋಟ್‌ 2 ಹಾಗೂ ಪ್ಯಾಡ್‌ಫೋನ್‌ 2 ಫಾಬ್ಲೆಟ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ವಿಮರ್ಶಕರುಗಳ ಪ್ರಕಾರ ಮಾರುಕಟ್ಟೆಯಲ್ಲಿನ ಈ ಎರಡೂ ನೂತನ ಫಾಬ್ಲೆಟ್‌ಗಳು ಉತ್ತಮ ಪೈಪೋಟಿ ಹೊಂದಲಿದ್ದು ಗ್ರಾಹಕರನ್ನು ತಮ್ಮತ್ತ ಸೆಳೆಯಲಿವೆ ಎಂದು ಲೆಕ್ಕಾಚಾರ ಮಾಡಿದ್ದಾರೆ. ಅಂದಹಾಗೆ ನೀವೂ ಈ ಎರಡೂ ಫಾಬ್ಲೆಟ್‌ಗಳಲ್ಲಿ ಯಾವುದನ್ನಾದರು ಖರೀದಿಸ ಬೇಕೆಂದಿದ್ದೀರ ಹಾಗಿದ್ದಲ್ಲಿ ಅದಕ್ಕೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಒಮ್ಮೆ ಗಮನಿಸಿ ನಂತರ ನಿಮ್ಮ ಆಯ್ಕೆಯ ಫಾಬ್ಲೆಟ್‌ ನೀವೇ ಆಯ್ಕೆ ಮಾಡಿಕೊಳ್ಳಿ.

ಸುತ್ತಳತೆ ಹಾಗೂ ತೂಕ: ಅಸೂಸ್‌ ಪ್ಯಾಡ್‌ಫೋನ್‌ 2 ಮಾಹಿತಿ ಸಂಸ್ಥೆ ಬಹಿರಂಗ ಪಡಿಸಿಲ್ಲ. ಆದರೆ ಗ್ಯಾಲಾಕ್ಸಿ ಎಸ್‌ 2 ಫಾಬ್ಲೆಟ್‌ 151.1 x 80.5 x 9.4 mm ಸುತ್ತಳತೆಯೊಂದಿಗೆ. 180 ಗ್ರಾಂ ತೂಕವಿದೆ.

ದರ್ಶಕ:ಗ್ಯಾಲಾಕ್ಸಿ ಎಸ್‌ 2 ನಲ್ಲಿ 5.5 ಇಂಚಿನ ಸೂಪರ್‌ AMOLED ದರ್ಶಕವಿದ್ದು 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. ಮತ್ತೊಂದೆಡೆ ಅಸೂಸ್‌ ಪ್ಯಾಡ್‌ಫೋನ್‌ 2 ನಲ್ಲಿ 4.7 ಇಂಚಿನ ಸೂಪರ್‌ IPS+ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಹೆಚ್ಚುವರಿಯಾಗಿ, ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಎಸ್‌-ಪೆನ್‌ ಸೌಲಭ್ಯವಿದ್ದು ಟಚ್‌ಸ್ಕ್ರೀನ್‌ನ ಉತ್ತಮ ಅನುಭವ ಪಡೆಯ ಬಹುದಾಗಿದೆ.

ಪ್ರೊಸೆಸರ್‌: ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಸ್ಯಾಮ್ಸಂಗ್‌ Exynos 4412 ಕ್ವಾಡ್‌ ಚಿಪ್‌ಸೆಟ್‌ ಇದ್ದರೆ, ಪ್ಯಾಡ್‌ಫೋನ್‌ 2 ನಲ್ಲಿ ಕ್ವಾಡ್‌ ಕೋರ್‌ ಕ್ವಾಲ್‌ಕಾಮ್‌ APQ8064 SoC ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಗ್ಯಾಲಾಕ್ಸಿ ನೋಟ್‌ 2 ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಚಾಲಿತವಾಗಿದ್ದರೆ. ಪ್ಯಾಡ್‌ಫೋನ್ 2 ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ.

ಕ್ಯಾಮೆರಾ :ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಹಿಂಬದಿಯ 8MP ಕ್ಯಾಮೆರಾದೊಂದಿಗೆ ಆಟೋ ಫೋಕಸ್‌, LED ಫ್ಲಾಷ್‌ ಹಾಗೂ ವಿಡಯೋ ಕರೆಗಾಗಿ 1.9MP ಮುಂಬದಿಯ ಕ್ಯಾಮೆರಾ ಹೊಂದಿದೆ. ಮತ್ತೊಂದೆಡೆ ಅಸೂಸ್‌ ಪ್ಯಾಡ್‌ಫೋನ್‌ 2 ಹಿಂಬದಿಯ 13MP ಕಗಯಾಮೆರಾ ದೊಂದಿಗೆ BSI ಸೆನ್ಸಾರ್ ಹಾಗೂ ವಿಡಿಯೋ ಕರೆಗಾಗಿ 1.2MP ಮುಂಬದಿಯ ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಎರಡೂ ಫಾಬ್ಲೆಟ್‌ಗಳಲ್ಲಿ – 16GB, 32GB ಹಾಗೂ 64GB ಆಂತರಿಕ ಮೆಮೊರಿ ಸ್ಟೋರೇಜ್‌ಗಳಿದ್ದು, 2GB RAM ಹೊಂದಿದೆ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ಚರೆಗೆ ಮೆಮೊರಿ ವಿಸ್ತರಿಸಿ ಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ: ಈ ವಿಚಾರದಲ್ಲಿಯೂ ಕೂಡ ಎರಡೂ ಫಾಬ್ಲೆಟ್‌ಗಳಲ್ಲಿ 3G, Wi-Fi, ಬ್ಲೂಟೂತ್‌ ಹಾಗೂ NFC ಹೊಂದಿವೆ..

ಬ್ಯಾಟರಿ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಕೊಂಚ ದೊಡ್ಡದಾದ 3,100 mAh Li-ion ಬ್ಯಾಟರಿ ಇದ್ದರೆ ಅಸೂಸ್‌ ಪ್ಯಾಡ್‌ಫೋನ್‌ 2 ನಲ್ಲಿ 2,140 mAh Li-ion ಬ್ಯಾಟರಿ ಇದೆ.

ಬೆಲೆ:ಅಸೂಸ್‌ ಪ್ಯಾಡ್‌ಫೋನ್‌ 2 ನ ಬೆಲೆ ಕುರಿತಾಗಿ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ.ಆದರೆ ವಿಮರ್ಶಕರುಗಳ ಪ್ರಕಾರ ನೂತನ ಪ್ಯಾಡ್‌ ಫೋನ್‌ ರೂ. 64,999 ದರದಲ್ಲಿ ಲಭ್ಯವಾಗಲಿದೆ. ಮತ್ತೊಂದೆಡೆ ಗ್ಯಾಲಾಕ್ಸಿ 2 ಭಾರತದಲ್ಲಿ 39,990 ರೂ. ದರದಲ್ಲಿ ಲಭ್ಯವಿದೆ (16GB).

Read In English...

<strong>ಝೆನ್‌ನ ನೂತನ ಅಲ್ಟ್ರಾಟ್ಯಾಬ್‌ ಎ900 ಬಿಡುಗಡೆ</strong>ಝೆನ್‌ನ ನೂತನ ಅಲ್ಟ್ರಾಟ್ಯಾಬ್‌ ಎ900 ಬಿಡುಗಡೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X