Subscribe to Gizbot

ಗ್ಯಾಲಾಕ್ಸಿ ನೋಟ್‌ 2 vs ಗ್ಯಾಲಾಕ್ಸಿ ನೋಟ್‌

Posted By: Vijeth

ಗ್ಯಾಲಾಕ್ಸಿ ನೋಟ್‌ 2 vs ಗ್ಯಾಲಾಕ್ಸಿ ನೋಟ್‌

ಎರಡನೇ ತಲೆಮಾರಿನ ಫಾಬ್ಲೆಟ್‌ ಆದಂತಹ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ ಸೆ.27 ಬುಧವಾರ ಭಾರತೀಯ ಮಾರುಕಟ್ಟೆಗೆ ಕಾಲಿರಿಸಿದೆ. ಅಂದಹಾಗೆ ಈಗಾಗಲೇ ಮಾರುಕಟ್ಟೆಯಲ್ಲಿರು ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ ತನ್ನಯ ಆಕರ್ಷಕ ಪೀಚರ್ಸ್‌ಗಳಿಂದಾಗಿ ಜನಪ್ರಿಯಗೊಂಡಿದ್ದು ಯತ್ತಮ ಬೇಡಿಕೆಯನ್ನೂ ಕೂಡ ಗಳಿಸಿದೆ. ಹಾಗಿದ್ದಲ್ಲಿ ನೂತನ ಗ್ಯಾಲಾಕ್ಸಿ ನೋಟ್‌ 2 ಹಾಗೂ ಗ್ಯಾಲಾಕ್ಸಿ ನೋಟ್‌ ನಡುವಿನ ವೆತ್ಯಾಸವೇನು ಹಾಗೂ ವಿಶೇಷತೆಗಳೇನು ಎಂಬುದರ ಕಡೆ ಗಮನ ಹರಿಸೋಣ.

ಗಾತ್ರ ಹಾಗೂ ತೂಕ: ಗ್ಯಾಲಾಕ್ಸಿ ನೋಟ್‌ 146.9 x 83 x 9.7 mm ಸುತ್ತಳತೆ ಹಾಗೂ 178 ಗ್ರಾಂ ತೂಕವಿದ್ದರೆ, ಗ್ಯಾಲಾಕ್ಸಿ ನೋಟ್‌ 2, 151.1 x 80.5 x 9.4 mm ಸುತ್ತಳತೆ ಯೊಂದಿಗೆ 180 ತೂಕ ಹೊಂದಿದೆ.

ದರ್ಶಕ: ಎರೆಡೂ ಫಾಬ್ಲೆಟ್‌ನಲ್ಲಿ AMOLED ಟಚ್‌ಸ್ಕ್ರೀನನ ಜೊತೆಗೆ ಪೆನ್‌ಟೈಲ್‌ ತಂತ್ರಜ್ಞಾನ ಹೊಂದಿವೆ. ಅಂದಹಾಗೆ ಗ್ಯಾಲಾಕ್ಸಿ ನೋಟ್‌ ನಲ್ಲಿ 5.3 ಇಂಚಿನ ಪರದೆಯೊಂದಿಗೆ 1280 x 720 ಪಿಕ್ಸೆಲ್‌ ಹೊಂದಿದ್ದರೆ, ಗ್ಯಾಲಾಕ್ಸಿ ನೋಟ್‌ 2 ನಲ್ಲಿ 5.5-ಇಂಚಿನ ಪರದೆಯೊಂದಿಗೆ 1280 x 800 ಪಿಕ್ಸೆಲ್‌ ನಿಂದ ಕೂಡಿದೆ.

ಪ್ರೊಸೆಸರ್‌: ಗ್ಯಾಲಾಕ್ಸಿ ನೋಟ್‌ ನಲ್ಲಿ 1.4GHz ARM ಕಾರ್ಟೆಕ್ಸ್‌ A9 ಪ್ರೊಸೆಸರ್‌ ಇದ್ದರೆ, ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಕ್ವಾಡ್‌ ಕೋರ್‌ 1.6GHz ಕಾರ್ಟೆಕ್ಸ್‌ A9 ಪ್ರೊಸೆಸರ್‌ಹೊಂದಿದೆ

ಆಪರೇಟಿಂಗ್‌ ಸಿಸ್ಟಂ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ ನೂತನ ಆಂಡ್ರಾಯ್ಡ್‌ OS – 4.1 ಜೆಲ್ಲಿಬೀನ್‌ ಹೊಂದಿದ್ದರೆ, ಗ್ಯಾಲಾಕ್ಸಿ ನೋಟ್‌ ನಲ್ಲಿ ಆಂಡ್ರಾಯ್ಡ 4.0.4 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ.

ಕ್ಯಾಮೆರಾ: ಎರಡೂ ಫಾಬ್ಲೆಟ್‌ನಲ್ಲಿ 8MP ನ ಹಿಂಬದಿಯ ಕ್ಯಾಮೆರಾ ಇದ್ದು ಜಿಯೋ-ಟ್ಯಾಗಿಂಗ್‌, ಟಚ್‌ಫೋಕಸ್‌, ಫೆಸ್‌ ಹಾಘು ಸ್ಮೈಲ್‌ ಡಿಟೆಕ್ಟರ್‌ ಹೊಂದಿದೆ. ಇದಲ್ಲದೆ ಗ್ಯಾಲಾಕ್ಸಿ ನೋಟ್‌ ಮುಂಬದಿಯ 2MP ಕ್ಯಾಮೆರಾ ಹೊಂದಿದ್ದರೆ, ಗ್ಯಾಲಾಕ್ಸಿ ನೋಟ್‌ 2 ಕೊಂಚ ಕಡಿಮೆಯ 1.9MP ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಗ್ಯಾಲಾಕ್ಸಿ ನೋಟ್‌ 16GB ಹಾಗು 32GB ಮಾದರಿಗಳಲ್ಲಿ 1GB RAM ಹೊಂದಿದೆ, ಗ್ಯಾಲಾಕ್ಸಿ ನೋಟ್‌ 2 16GB, 32GB ಹಾಗು 64GB ಮಾದರಿಗಳಲ್ಲಿ ಲಭ್ಯವಿದ್ದು 2GB RAM ಹೊಂದಿದೆ. ಎರೆಡೂ ಫಾಬ್ಲೆಟ್‌ಗಳನ್ನು 32GB ವರೆಗೂ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ: ಎರಡೂ ಫಾಬ್ಲೆಟ್‌ಗಳು HSDPA 21 Mbps, HSUPA 5.76 Mbps, LTE, Wi-Fi 802.11 a/b/g/n, DLNA, Wi-Fi Direct, Wi-Fi ಹಾಟ್‌ಸ್ಪಾಟ್‌, ಬ್ಲೂಟೂತ್‌ / A2DP ಹಾಗೂ EDR, ಮೈಕ್ರೋ USB 2.0 ಹಾಗೂ USB ಆನ್‌ ದಿ ಗೊ ಹೊಂದಿವೆ.

ಬ್ಯಾಟರಿ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ 3,100 mAh Li-ion ದೊಡ್ಡ ಬ್ಯಾಟರಿ ಇದ್ದು ಇದರ ಕ್ಷಮತೆ ಕುರಿತು ಮಾಹಿತಿ ಲಭ್ಯವಿಲ್ಲ, ಹಾಗೂ ಗ್ಯಾಲಾಕ್ಸಿ ನೋಟ್‌ ನಲ್ಲಿ 2,500 mAh Li-ion ಬ್ಯಾಟರಿ ಇದ್ದು 820 ಸ್ಟಾಂಡ್‌ಬೈ 13.5 ಟಾಕ್‌ ಟೈಮ್‌ ನೀಡುತ್ತದೆ.

Read InEnglish...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot