ಸ್ಯಾಮ್‌ಸಂಗ್ ದುಬಾರಿ ಬೆಲೆಯ ಫ್ಯಾಬ್ಲೆಟ್ ಬಿಡುಗಡೆ
ಸ್ಯಾಮ್‌ಸಂಗ್ ಮಾರುಕಟ್ಟೆಗೆ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಗೆಲಾಕ್ಸಿ ನೋಟ್ 3 ನಿಯೋ ಹೆಸರಿನ ಫ್ಯಾಬ್ಲೆಟ್ ಬಿಡುಗಡೆ ಮಾಡಿದ್ದು40,900 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
ಸಿಂಗಲ್ ಸಿಮ್ ಹಾಕಬಹುದಾದ ಫ್ಯಾಬ್ಲೆಟ್ ಇದಾಗಿದ್ದು ಹೆಕ್ಸಾಕೋರ್(ಆರು ಕೋರ್) ಪ್ರೊಸೆಸರ್‌ನ್ನು ಒಳಗೊಂಡಿದೆ. ಹೆಕ್ಸಾಕೋರ್ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸ್ಯಾಮ್‌ಸಂಗ್ ಸಾಧನವಾಗಿದ್ದು, 3ಜಿ,4ಜಿ,ಎನ್‌ಎಫ್‌ಸಿ,ಬ್ಲೂಟೂತ್,ಜಿಪಿಎಸ್,ಎಜಿಪಿಎಸ್,ಗ್ಲೋನಾಸ್ ಕನಕ್ಟಿವಿಟಿ ವಿಶೇಷತೆ ಒಳಗೊಂಡಿದೆ. ನೋಟ್ 3ಯಲ್ಲಿರುವಂತೆ ಈ ಫ್ಯಾಬ್ಲೆಟ್‌ಗೆ ಸ್ಯಾಮ್‌ಸಂಗ್ ಸ್ಟೈಲಸ್ ಪೆನ್ ನೀಡಿದೆ.
ಫ್ಯಾಬ್ಲೆಟ್ ಆಂಡ್ರಾಯ್ಡ್ 4.3 ಟಚ್‌ವಿಝ್ ಯೂಸರ್ ಇಂಟರ್‌ಫೇಸ್ ಇರುವ ಜೆಲ್ಲಿ ಬೀನ್ ಓಎಸ್, ಎಕ್ಸಲರೋ ಮೀಟರ್,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್ ಸೆನ್ಸರ್, 3100 mAh ಬ್ಯಾಟರಿಯನ್ನುಹೊಂದಿದೆ. 16 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,2 ಜಿಬಿ ರ್‍ಯಾಮ್‌ನ್ನು ಫ್ಯಾಬ್ಲೆಟ್ ಒಳಗೊಂಡಿದೆ.
1
148.4 x 77.4 x 8.6 ಮಿ.ಮೀ ಗಾತ್ರ,162.5 ಗ್ರಾಂ ತೂಕದ ಫ್ಯಾಬ್ಲೆಟ್ 5.5 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(720 x 1280 ಪಿಕ್ಸೆಲ್,267 ಪಿಪಿಐ) ಹೊಂದಿದೆ.
2
ಈ ಫ್ಯಾಬ್ಲೆಟ್ ಹೆಕ್ಸಾಕೋರ್(ಕ್ವಾಡ್ ಕೋರ್ 1.3 GHz ಕ್ವಾರ್ಟೆಕ್ಸ್ ಎ7 ಮತ್ತು ಡ್ಯುಯಲ್ ಕೋರ್ 1.7 GHz ಎ15) ಪ್ರೊಸೆಸರ್,Mali-T624 ಗ್ರಾಫಿಕ್ ಪ್ರೊಸೆಸರ್‌ನ್ನು ಒಳಗೊಂಡಿದೆ.
3

4

5
8 ಎಂಪಿ ಹಿಂದುಗಡೆ ಕ್ಯಾಮೆರಾ,2 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಫ್ಯಾಬ್ಲೆಟ್ ಒಳಗೊಂಡಿದೆ.


Click it and Unblock the Notifications








