Home
ಮೊಬೈಲ್

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್‌ 9ನಲ್ಲಿ ಕಾಣಿಸಿದೆ ಡಿಸ್‌ಪ್ಲೇ ಸಮಸ್ಯೆ..!

By Gizbot Bureau

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಇತ್ತೀಚೆಗೆ ಬಿಡುಗಡೆಗೊಂಡಿರುವ ಅತ್ಯಾಧುನಿಕ ಫ್ಯಾಬ್ಲೆಟ್ ಗಳಲ್ಲಿ ಒಂದೆನಿಸಿದೆ.ಆದರೆ ಕೆಲವು ಖರೀದಿದಾರರು ಈ ಹೊಸ ಸ್ಮಾರ್ಟ್ ಫೋನಿನ ಡಿಸ್ಪ್ಲೇ ಬಗ್ಗೆ ದೂರುಗಳನ್ನು ಹೇಳುತ್ತಿದ್ದಾರೆ. ಆಂಡ್ರಾಯ್ಡ್ ಸೆಂಟ್ರಲ್ ನ ಫೋರಂ ಪೋಸ್ಟ್ ಹೇಳುವ ಪ್ರಕಾರ ಕೆಲವು ಬಳಕೆದಾರರು ಗ್ಯಾಲಕ್ಸಿ ನೋಟ್ 9 ನ ಡಿಸ್ಪ್ಲೆಯ ಬದಿಗಳಲ್ಲಿ ಬೆಳಕು ಲೀಕ್ ಆಗುತ್ತಿದೆ ಎಂದು ದೂರು ಹೇಳುತ್ತಿದ್ದಾರೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್‌ 9ನಲ್ಲಿ ಕಾಣಿಸಿದೆ ಡಿಸ್‌ಪ್ಲೇ ಸಮಸ್ಯೆ..!

ಖರೀದಿದಾರರು ಹೇಳುತ್ತಿರುವುದೇನು?

"ಈ ರೀತಿ ಆಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇವತ್ತಷ್ಟೇ ಹೊಸ ಫೋನ್ ಖರೀದಿ ಮಾಡಿದ್ದೇನೆ. ಎಲ್ಲವನ್ನೂ ಸೆಟ್ ಮಾಡಿದ್ದೇನೆ ಮತ್ತು ಫೋನಿಗೆ ಹೊಸದಾಗಿ ಕೇಸ್( ಫೋನ್ ಕವರ್) ಕೂಡ ಹಾಕಿದ್ದೇನೆ. ಆದರೆ ಸಡನ್ ಆಗಿ ಡಿವೈಸ್ ನ ಬದಿಗಳಲ್ಲಿ ಬೆಳಕು ಬರುವುದನ್ನು ಗಮನಿಸಿದೆ. ಸ್ಕ್ರೀನಿನ ಮೆಟಲ್ ಫ್ರೇಮ್ ಮತ್ತು ಗ್ಲಾಸ್ ಸಂಧಿಸುವ ಜಾಗದಲ್ಲಿ ಈ ಬೆಳಕು ಬರುತ್ತದೆ. ಇದು ಸರಿಯಾದ ಕ್ರಮವಲ್ಲ ಎಂಬ ಬಗ್ಗೆ ನನಗೆ ಖಚಿತತೆ ಇದೆ. ಇತರರು ಯಾರಾದರೂ ಈ ಅನುಭವ ಪಡೆದಿದ್ದೀರಾ?” ಎಂದು ಹೊಸದಾಗಿ ಫೋನ್ ಖರೀದಿಸಿದ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಕುತೂಹಲಕಾರಿ ವಿಚಾರವೇನೆಂದರೆ ಕೆಲವು ಬಳಕೆದಾರರು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ನ ಡಿಸ್ಪ್ಲೇ ಕರ್ವ್ಡ್ ಎಡ್ಜ್ ಆಗಿರುವುದರ ಪರಿಣಾಮವಾಗಿ ಸಣ್ಣದಾದ ಬೆಳಕಿನ ಪ್ರತಿಫಲನವು ಫೋನನ್ನು ಕೆಲವು ಆಂಗಲ್ ನಲ್ಲಿ ತಿರುಗಿಸಿದಾಗ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಈ ಸಮಸ್ಯೆಗೆ ಇನ್ನೊಂದು ಕಾರಣ ಪೇಯಿಟಿಂಗ್ ಪ್ರೊಸೆಸ್ ಕೂಡ ಆಗಿರಬಹುದು ಎನ್ನುತ್ತಿದ್ದಾರೆ. ಕರ್ವ್ಡ್ ಡಿಸ್ಪ್ಲೇ ಆಗಿರುವುದರಿಂದಾಗಿ ಕೆಲವು ಯುನಿಟ್ ಗಳಲ್ಲಿ ಈ ರೀತಿ ಪೇಯಿಂಟ್ ಮಾಡುವಾಗಿನ ಸಮಸ್ಯೆಯಿಂದಾಗಿ ಈ ರೀತಿ ಬೆಳಕು ಲೀಕ್ ಆಗುತ್ತಿರಬಹುದು ಎಂಬುದಾಗಿ ಮತ್ತೊಬ್ಬ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗಂತ ಸ್ಯಾಮ್ ಸಂಗ್ ಇದೇ ಮೊದಲ ಬಾರಿಗೆ ತನ್ನ ಸ್ಮಾರ್ಟ್ ಫೋನ್ ಗಳಲ್ಲಿ ಕರ್ವ್ಡ್ ಗ್ಲಾಸ್ ಫ್ರೇಮ್ ನ್ನು ಬಳಕೆ ಮಾಡುತ್ತಿಲ್ಲ ಬದಲಾಗಿ ಈಗಾಗಲೇ ಗ್ಯಾಲಕ್ಸಿ ನೋಟ್ 8 ನಲ್ಲೂ ಕೂಡ ಇದೇ ರೀತಿಯ ಡಿಸ್ಪ್ಲೇಯನ್ನು ಮಾಡಿ ಯಶಸ್ಸು ಕಂಡಿದೆ. ಬಳಕೆದಾರರು ಗುರುತಿಸಿರುವ ಈ ಸಮಸ್ಯೆಯ ಬಗ್ಗೆ ಇದುವರೆಗೂ ಸ್ಯಾಮ್ ಸಂಗ್ ಸಂಸ್ಥೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್‌ 9ನಲ್ಲಿ ಕಾಣಿಸಿದೆ ಡಿಸ್‌ಪ್ಲೇ ಸಮಸ್ಯೆ..!

ಗ್ಯಾಲಕ್ಸಿ ನೋಟ್ 9 ಬೆಲೆ ಮತ್ತು ಪ್ರಮುಖ ವೈಶಿಷ್ಟ್ಯತೆ:

ಸ್ಯಾಮ್ ಸಂಗ್ ಎರಡು ವೇರಿಯಂಟ್ ನಲ್ಲಿ ಗ್ಯಾಲಕ್ಸಿ ನೋಟ್ 9 ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಒಂದು 6GB RAM ಮತ್ತು 128GB ಸ್ಟೋರೇಜ್ ಇದರ ಬೆಲೆ Rs 67,900 ಮತ್ತು 8GB RAM ಮತ್ತು 512GB ಸ್ಟೋರೇಜ್ ಇದರ ಬೆಲೆ Rs 84,900. ಈ ಫ್ಯಾಬ್ಲೆಟ್ ಮೆಟಲ್ ಫ್ರೇಮ್ ನ ಡಿಸೈನ್ ನ್ನು ಹೊಂದಿದೆ ಮತ್ತು ದೊಡ್ಡದಾದ ಬ್ಯಾಟರಿ ಅಂದರೆ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಗೆ ಅವಕಾಶ ನೀಡುತ್ತದೆ.ಇಷ್ಟು ದೊಡ್ಡ ಬ್ಯಾಟರಿಯೊಂದಿಗೆ ಬರುತ್ತಿರುವ ಮೊದಲ ಗ್ಯಾಲಕ್ಸಿ ನೋಟ್ ಆಗಿದೆ.

ಭಾರತೀಯ ವೇರಿಯಂಟ್ ನ ಗ್ಯಾಲಕ್ಸಿ ನೋಟ್ 9 ಸ್ಯಾಮ್ ಸಂಗ್ ನ ತನ್ನದೇ ಪ್ರೊಸೆಸರ್ Exynos 9810 ನಿಂದ ರನ್ ಆಗುತ್ತದೆ. ಇದೇ ಪ್ರೊಸೆಸರ್ ಕಂಪೆನಿಯ 2018 ರ ಸ್ಮಾರ್ಟ್ ಫೋನ್ ಗಳಾದ ಗ್ಯಾಲಕ್ಸಿ ಎಸ್ 9 ಮತ್ತು ಎಸ್9+ ನಲ್ಲೂ ರನ್ ಆಗುತ್ತದೆ.

Best Mobiles in India

English summary
Samsung Galaxy Note 9 buyers complain of ‘light leak’ issue. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+