ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್ 9 ಲಾಂಚ್‌ಗೆ ಮುಹೂರ್ತ ಫಿಕ್ಸ್..!
ವಿಶ್ವ ಸ್ಮಾರ್ಟ್‌ಫೋನ್ ಲೋಕದಲ್ಲಿ ಸ್ಪರ್ಧೆ ಮುಂದುವರೆದಿದ್ದು, ಮತ್ತೊಂದು ಫ್ಲಾಗ್‌ಶಿಫ್ ಫೋನ್ ಮಾರುಕಟ್ಟೆಗೆ ಕಾಲಿಡಲು ತಯಾರಿ ನಡೆಸಿದೆ. ಹೀಗಾಗಲೇ ಆಪಲ್, ವಿವೋ, ಒನ್‌ಪ್ಲಸ್‌ನಂತಹ ಫ್ಲಾಗ್‌ಶಿಫ್ ಸ್ಮಾರ್ಟ್‌ಪೋನ್ ತಯಾರಕರೊಂದಿಗೆ ಸ್ಪರ್ಧೆಯಲ್ಲಿರುವ ಸ್ಯಾಮ್‌ಸಂಗ್ ಕಂಪನಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ.
ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಆಗಸ್ಟ್ 9 ರಂದು ಸ್ಯಾಮ್‌ಸಂಗ್ ಅನ್‌ಪ್ಯಾಕಡ್ ಇವೆಂಟ್ ಆಯೋಜಿಸಿದ್ದು, ಹೊಸ ಗೆಲಾಕ್ಷಿ ನೋಟ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ವೇದಿಕೆ ಸಜ್ಜುಗೊಳಿಸಿದೆ. ಟ್ವಿಟ್ಟರ್‌ನಲ್ಲಿ ಸ್ಯಾಮ್‌ಸಂಗ್ ವಿಡಿಯೋ ಪೋಸ್ಟ್ ಮಾಡಿದ್ದು, ಗೆಲಾಕ್ಷಿ ನೋಟ್ 9 ಸ್ಮಾರ್ಟ್‌ಫೋನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದೆ.

ಟ್ವಿಟ್ಟರ್ ವಿಡಿಯೋ ಹೆಚ್ಚು ಮಾಹಿತಿಯನ್ನು ನೀಡಿಲ್ಲವೆಂದರೂ ಪರಿಷ್ಕರಿಸಿದ ಎಸ್ ಪೆನ್, ಮತ್ತಿತರ ಅನೇಕ ಫೀಚರ್ಸ್‌ಗಳನ್ನು ನಿರೀಕ್ಷೆ ಮಾಡಲಾಗಿದೆ. ಹಾಗಾದರೆ ಆಗಸ್ಟ್ 9ರಂದು ಲಾಂಚ್ ಆಗುತ್ತಿರುವ ಫೋನ್‌ನಲ್ಲಿ ಏನೆಲ್ಲಾ ಇರಲಿವೆ ಎಂಬುದನ್ನು ತಿಳಿಯಿರಿ.

AMOLED ಡಿಸ್‌ಪ್ಲೇ
ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್ 9 ಸ್ಮಾರ್ಟ್‌ಫೋನ್ ದೊಡ್ಡ್ ಡಿಸ್‌ಪ್ಲೇ ಹೊಂದಿರಲಿದೆ. 6.4 ಇಂಚು QHD+ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು, 18.5:9 ಆಸ್ಪೆಕ್ಟ್ ರೇಷಿಯೋ ಹೊಂದಿರುವ ಸಾಧ್ಯತೆ ಇದೆ. ಅದಲ್ಲದೇ ಗೆಲಾಕ್ಷಿ ನೋಟ್ 8ನಂತೆ ಇನ್ಫಿನಿಟಿ ಡಿಸ್‌ಪ್ಲೇ ಹೊಂದಿರಲಿದೆ ಎಂಬುದು ಸ್ಮಾರ್ಟ್‌ಪೋನ್ ತಜ್ಞರ ಅಭಿಪ್ರಾಯವಾಗಿದೆ.

ಪ್ರೊಸೆಸರ್
ಹೊಸ ಗೆಲಾಕ್ಷಿ ನೋಟ್ 9 ಸ್ಮಾರ್ಟ್‌ಪೋನ್‌ನಲ್ಲಿ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 845 ಪ್ರೊಸೆಸರ್ ಅಥವಾ ತನ್ನದೇ ಆದ ಎಕ್ಸಿನೋಸ್ 9810 SoC ಹೊಂದಿರುವ ಸಾಧ್ಯತೆ ಇದೆ. ಎರಡು ಪ್ರೊಸೆಸರ್‌ಗಳು ಉನ್ನತ ಕಾರ್ಯಮಟ್ಟ ಹೊಂದಿರುವುದರಿಂದ ಕಾರ್ಯನಿರ್ವಹಣೆ ಉತ್ತಮವಾಗಿರುತ್ತದೆ.

ಮೆಮೊರಿ
ಗೆಲಾಕ್ಷಿ ನೋಟ್ 9 ಸ್ಮಾರ್ಟ್‌ಪೋನ್ 6GB ಮತ್ತು 8GB RAM ಹೊಂದಿರಲಿದ್ದು, 512GB ಬಾಹ್ಯ ಸ್ಟೋರೆಜ್ ಹೊಂದಿರುವುದರ ಬಗ್ಗೆ ಸ್ಮಾರ್ಟ್‌ಪೋನ್ ತಜ್ಞರು ಖಾತರಿ ವ್ಯಕ್ತಪಡಿಸಿದ್ದಾರೆ.

ಕ್ಯಾಮೆರಾ
ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್ 9 ಸ್ಮಾರ್ಟ್‌ಪೋನ್ ಹಿಂಭಾಗದಲ್ಲಿ ಉನ್ನತ ಫೀಚರ್ಸ್ ಹೊಂದಿದ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿರಲಿದ್ದು, 8 MP ಫ್ರಂಟ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ.

ಬ್ಯಾಟರಿ ಮತ್ತೀತರ ಫೀಚರ್ಸ್
ಗೆಲಾಕ್ಷಿ ನೋಟ್ 9 ಸ್ಮಾರ್ಟ್‌ಪೋನ್ 4,000 mAh ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ. ಮತ್ತು ಆಂಡ್ರಾಯ್ಡ್ 8.1 ಓರಿಯೋ ಒಎಸ್ ಹೊಂದಿರುವ ಸಾಧ್ಯತೆಗಳಿವೆ.

ಎಲ್ಲೆಲ್ಲಿ ಲಾಂಚ್ ಆಗಲಿದೆ
ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್ 9 ಸ್ಮಾರ್ಟ್‌ಪೋನ್ ಮೊದಲಿಗೆ ದಕ್ಷಿಣ ಕೊರಿಯಾ ಅಥವಾ ಚೀನಾದಲ್ಲಿ ಮೊದಲು ಬಿಡುಗಡೆಗೊಳ್ಳಲಿದ್ದು, ನಂತರ ವಿಶ್ವದ ಎಲ್ಲಾ ಕಡೆ ಸಿಗುವ ಸಾಧ್ಯತೆಯಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಈ ಫೋನ್ ಬರುವುದು ತಡವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಎಫ್‌ಸಿಸಿ ಪ್ರಮಾಣೀಕೃತ ಪತ್ರ
ಇತ್ತೀಚೆಗೆ ತಾನೇ ಯುಎಸ್‌ನ ಎಫ್‌ಸಿಸಿ ಪ್ರಮಾಣೀಕೃತ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್ 9 ಸ್ಥಾನ ಪಡೆದಿದೆ. ಇದರ ಜೊತೆ ಗೆಲಾಕ್ಷಿ ಟ್ಯಾಬ್ ಎಸ್4 ಸಹ ಎಫ್‌ಸಿಸಿಯಿಂದ ಪ್ರಮಾಣಿಕಕರಿಸಿದ್ದು, ಅಂದೇ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications








