ಈ ಮೊಬೈಲ್ ಗಳಲ್ಲಿ ನಿಮ್ಮ ಮೆಚ್ಚುಗೆ ಪಡೆದ ಮೊಬೈಲ್ ಯಾವುದು?

|
ಈ ಮೊಬೈಲ್ ಗಳಲ್ಲಿ ನಿಮ್ಮ ಮೆಚ್ಚುಗೆ ಪಡೆದ ಮೊಬೈಲ್ ಯಾವುದು?

ಸ್ಯಾಮ್ ಸಂಗ್ ಕಂಪನಿಯ ಗೆಲಾಕ್ಸಿ ಮೊಬೈಲ್ ಗಳು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇದೀಗ ಗೆಲಾಕ್ಸಿ ಸರಣಿಯ ಅಡಿಯಲ್ಲಿಯೆ ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ ಬಿಡುಗಡೆ ಮಾಡಿದೆ. ಉತ್ತಮ ಗುಣಮಟ್ಟವನ್ನು ಹೊಂದಿರುವ ಈ ಮೊಬೈಲ್ ಐಫೋನ್ 4ಗೆ ತಕ್ಕ ಪ್ರತಿಸ್ಪರ್ಧಿಯಾಗಿದೆ. ಈ ಮೊಬೈಲ್ ಗಳು ಈ ಕೆಳಗಿನ ಗುಣಲಕ್ಷಣ ಮತ್ತು ವ್ಯತ್ಯಾಸವನ್ನು ಹೊಂದಿವೆ.

1. ಟಚ್ ಸ್ಕ್ರೀನ್: ಸ್ಯಾಮ್ ಸಂಗ್ ಗೆಲಾಕ್ಸಿಯಲ್ಲಿ AMOLED ಟಚ್ ಸ್ಕ್ರೀನ್ ಬಳಸಿದರೆ ಐಫೋನ್ 4ರಲ್ಲಿ LED ಬ್ಯಾಕ್ ಲಿಟ್ TFT ಸ್ಕ್ರೀನ್ ಹೊಂದಿದೆ.

2. ಗಾತ್ರ: ಗೆಲಾಕ್ಸಿ 5.3 ಇಂಚಿನ ಡಿಸ್ ಪ್ಲೇ ಮತ್ತು 800 X 1280 ಪಿಕ್ಸಲ್ ರೆಸ್ಯೂಲೇಶನ್ ಹಾಗೂ ಐಫೋನ್ 4 3.5 ಇಂಚಿನ ಡಿಸ್ ಪ್ಲೇ 640 x 960 ರೆಸ್ಯೂಲೇಶನ್ ಹೊಂದಿದೆ.

3. ಕ್ಯಾಮೆರಾ: ಗೆಲಾಕ್ಸಿ ಮತ್ತು ಐಫೋನ್ 4 8 MP, 3263X2448 ಕ್ಯಾಮೆರಾ ಸಾಮರ್ಥ್ಯವನ್ನು ಹೊಂದಿದೆ.

4. ಸ್ಟೋರೇಜ್ ಸಾಮರ್ಥ್ಯ:16GB/32GB ಸ್ಟೋರೇಜ್ ಮತ್ತು 1 GB RAM ಸಾಮರ್ಥ್ಯವನ್ನು ಗೆಲಾಕ್ಸಿ ಹೊಂದಿದ್ದರೆ, ಐಫೋನ್ 4 16/32/64 GB ಮತ್ತು MB RAM ಹೊಂದಿದೆ.

5.ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯ: ಗೆಲಾಕ್ಸಿ ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯವನ್ನು ಹೊಂದಿದ್ದು, ಐಫೋನ್ 4 ವಿಸ್ತರಿಸಬಹುದಾದ ಸಾಮರ್ಥ್ಯ ಹೊಂದಿಲ್ಲ.

6. ಈ ಎರಡೂ ಮೊಬೈಲ್ GPRS, EDGE, 3G, WLAN ಸೌಲಭ್ಯವನ್ನು ಹೊಂದಿದೆ.

7. ಬ್ಲೂಟೂಥ್: ಗೆಲಾಕ್ಸಿ- 3.0 ಆಯಾಮ

ಐಫೋನ್ 4-v4.0 ಆಯಾಮ

8. ಎರಡರಲ್ಲೂ 2.0 ಆಯಾಮದ USB

9. 2G ಮತ್ತು 3G ನೆಟ್ ವರ್ಕ್ ಸೌಲಭ್ಯ

10. ಬ್ಯಾಟರಿ- ಗೆಲಾಕ್ಸಿಯಲ್ಲಿ ಲಿಯಾನ್ 2500 mAh ಬ್ಯಾಟರಿ

ಐಫೋನ್ 4ನಲ್ಲಿ ಸ್ಟ್ಯಾಂಡರ್ಡ್ ಲಿ-ಪೊ 1432 mAh

11. ಸುತ್ತಳತೆ- ಗೆಲಾಕ್ಸಿ ಮೊಬೈಲ್ 146.9 x 83 x 9.7 ಮಿಮಿ

ಐಫೋನ್ 4 115.2 x 58.6 x 9.3ಮಿಮಿ

12. ತೂಕ: ಗೆಲಾಕ್ಸಿ 178 ಗ್ರಾಂ ತುಕವನ್ನು ಹೊಂದಿದ್ದರೆ ಐಫೋನ್ 4 140 ಗ್ರಾಂ ತೂಕವನ್ನು ಹೊಂದಿದೆ.

13. ಆಪರೇಟಿಂಗ್ ಸಿಸ್ಟಮ್: ಗೆಲಾಕ್ಸಿಯಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್, 3.5 ಆಯಾಮದ ಜಿಂಜರ್ ಬರ್ಡ್ ಹೊಂದಿದ್ದರೆ ಐಫೋನ್ 4 iOS ಹೊಂದಿದೆ.

ಈ ಮೊಬೈಲ್ ಗಳ ಭಾರತೀಯ ಮಾರುಕಟ್ಟೆ ಬೆಲೆ ಇಂತಿವೆ.

ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ - ರು. 31,000

ಐಫೋನ್ 4-ರು. 35,000

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X