Home
ಮೊಬೈಲ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಅಗಸ್ಟ್ 19 ರಿಂದ ಭಾರತದಲ್ಲಿ ಪ್ರೀಬುಕ್ಕಿಂಗ್ ಗೆ ಲಭ್ಯ

By Sushma Charhra

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಅತ್ಯಂತ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಫೋನ್ ಗಳಲ್ಲಿ ಒಂದಾಗಿದೆ. ನ್ಯೂಯಾರ್ಕ್ ನಲ್ಲಿ ಅಗಸ್ಟ್ 9 ರಂದು ಆಯೋಜಿಸಲಾಗಿರುವ ದೊಡ್ಡ ಸಮಾವೇಶದಲ್ಲಿ ಈ ಮೊಬೈಲ್ ಬಿಡುಗಡೆಗೊಳ್ಳಲು ಸಕಲ ರೀತಿಯಲ್ಲೂ ಸಜ್ಜಾಗಿದೆ. ಒಂದು ಸುದ್ದಿಯ ಪ್ರಕಾರ ಅಗಸ್ಟ್ 24 ರಿಂದ ಎಲ್ಲಾ ಸ್ಟೋರ್ ಗಳಲ್ಲೂ ಕೂಡ ಈ ಮೊಬೈಲ್ ಖರೀದಿಗೆ ಲಭ್ಯವಾಗಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಾಗುವ ವಿಚಾರವಾಗಿ ಈಗ ಕುತೂಹಲಕಾರಿ ಸಂಗತಿಯೊಂದು ಚರ್ಚೆಯಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಅಗಸ್ಟ್ 19 ರಿಂದ ಭಾರತದಲ್ಲಿ ಪ್ರೀಬುಕ್ಕಿಂಗ್..!

91 ಮೊಬೈಲ್ ನ ವರದಿಯ ಅನುಸಾರ ಜಾಗತಿಕವಾಗಿ ಗ್ಯಾಲಕ್ಸಿ ನೋಟ್ 9 ಬಿಡುಗಡೆಗೊಳ್ಳುವ ಒಂದು ವಾರಕ್ಕೆ ಮುನ್ನವೇ ಭಾರತದಲ್ಲಿ ಈ ಫೋನ್ ಬಿಡುಗಡೆಗೊಳ್ಳಲಿದೆ. ಅಂದರೆ ಭಾರತದಲ್ಲಿ ಗ್ಯಾಲಕ್ಸಿ ನೋಟ್ 9 ಅಂದಾಜು ಆಗಸ್ಟ್ 12 ರಿಂದ ಆಗಸ್ಟ್ 16 ರ ಸಂದರ್ಬದಲ್ಲೇ ಬಿಡುಗಡೆಯಾಗಲಿದೆ.,

ಈಗ ಬಂದಿರುವ ವರದಿಯ ಪ್ರಕಾರ ಭಾರತದಲ್ಲಿ ಅಗಸ್ಟ್ 19 ರಿಂದಲೇ ಪ್ರಿಬುಕ್ಕಿಂಗ್ ಮಾಡಲು ಗ್ರಾಹಕರಿಗೆ ಅವಕಾಶವಿರುತ್ತದೆ. ಕಮರ್ಷಿಯಲ್ ಮಾರಾಟವು ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭಗೊಳ್ಳಲಿದೆ. ಆದರೆ ಸದ್ಯಕ್ಕೆ ಯಾವಾಗ ರಿಲೀಸ್ ಆಗಲಿದೆ ಎಂಬ ನಿಜವಾದ ದಿನಾಂಕವು ಪ್ರಕಟವಾಗಿಲ್ಲ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ರ ನಿರೀಕ್ಷಿತ ಬೆಲೆ:
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 70,000 ರುಪಾಯಿಯಿಂದ 75 ಸಾವಿರ ರೂಪಾಯಿ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಸ್ಟಿಕ್ಕರ್ ಬೆಲೆಯು 72,990 ರುಪಾಯಿ ಆಗಿರುವ ನಿರೀಕ್ಷೆ ಇದೆ.ಟಾಪ್ ಎಂಡ್ ನ ಮಾಡೆಲ್ ಇದಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಇರುತ್ತದೆ ಎಂಬುದನ್ನು ಮತ್ತೆ ಹೇಳುವ ಅಗತ್ಯವಿಲ್ಲ ಅಲ್ಲವೇ? ಬಹುಶ್ಯಃ ಆಪಲ್ ಐಫೋನ್ ಎಕ್ಸ್ ನ ಬೆಲೆಯಂತೆ ಇದೂ ಕೂಡ ದುಬಾರಿ ಫೋನ್ ಗಳ ಪಟ್ಟಿಯಲ್ಲಿರುವ ಮತ್ತೊಂದು ಫೋನ್ ಆಗಿರಲಿದೆ. ಇತ್ತೀಚೆಗಿನ ವರದಿಯೊಂದು ಹೈ ಎಂಡ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಬೆಲೆ 1 ಲಕ್ಷ ರೂಪಾಯಿ ಇರುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ. ಯಾವುದಕ್ಕೂ ಇನ್ನೂ ಕೆಲವೇ ದಿನಗಳನ್ನು ಕಳೆದರೆ ಸಂಪೂರ್ಣ ಚಿತ್ರಣ ಲಭ್ಯವಾಗುತ್ತದೆ.

ನಿರೀಕ್ಷಿತ ವೈಶಿಷ್ಟ್ಯತೆಗಳು :

ಈಗಾಗಲೇ ಹಬ್ಬಿರುವ ಗಾಳಿಸುದ್ಧಿಗಳ ಪ್ರಕಾರವೇ ಹೇಳುವುದಾದರೆ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 6.4 ಇಂಚಿನ ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 18.5:9 ಅನುಪಾತವನ್ನು ಹೊಂದಿರಲಿದೆ. ಡಿಸ್ಪ್ಲೇಯಲ್ಲಿ Quad HD+ ರೆಸಲ್ಯೂಷನ್ ಇರಲಿದೆ. ಇತ್ತೀಚೆಗಿನ ಮತ್ತು ತುಂಬಾ ಪವರ್ಫುಲ್ ಆಗಿರುವ ಚಿಪ್ ಸೆಟ್ ನ್ನು ಇದು ಹೊಂದಿರುತ್ತದೆ.ಗ್ಯಾಲಕ್ಸಿ ಎಸ್9 ಡುಯೋ ನಂತೆ, ಯುಎಸ್ ವೇರಿಯಂಟ್ ನಲ್ಲಿರುವ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಹೊಂದಿರಲಿದ್ದು, ಇತರೆ ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಫೋನ್ ಗಳಲ್ಲಿ Exynos 98-10 ಸಾಕೆಟ್ ಇರಲಿದೆ. ಪ್ರೊಸೆಸರ್ 6ಜಿಬಿ ಮೆಮೊರಿ ಮತ್ತು 64 ಜಿಬಿ,128ಜಿಬಿ ಅಥವಾ 256ಜಿಬಿ ಸ್ಟೋರೇಜ್ ಅವಕಾಶಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

ಹಿಂಭಾಗದ ಕ್ಯಾಮರಾದಲ್ಲಿ 12 ಎಂಪಿ ಸೆನ್ಸರ್ ಇದ್ದು ಇದು ಡುಯಲ್ ದ್ಯುತಿರಂಧ್ರವನ್ನು ಹೊಂದಿರುವ ಸಾಧ್ಯತೆ ಇದೆ ಒಂದು ದ್ಯುತಿರಂಧ್ರ f/1.5 ಮತ್ತೊಂದು f/2.4 ಆಗಿರಲಿದೆ. ಕಳೆದ ವರ್ಷ ಬಿಡುಗಡೆಗೊಂಡಿರುವ ಗ್ಯಾಲಕ್ಸಿ ಎಸ್ 9 ಮತ್ತು ಗ್ಯಾಲಕ್ಸಿ ಎಸ್ 9 ಪ್ಲಸ್ ನಲ್ಲಿರುವಂತಹ ಕ್ಯಾಮರಾ ಸೆಟ್ ಅಪ್ ನ್ನು ಈ ಫೋನ್ ಕೂಡ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಬ್ಯಾಟರಿ ಸಾಮರ್ಥ್ಯವು 4000mAh ಆಗಿರಲಿದೆ ಎಂಬ ಸುದ್ದಿ ಇದೆ ಮತ್ತು ಹೆಚ್ಚು ಫಂಕ್ಷನಲ್ ಆಗಿರುವ ಜೊತೆಗೆ ಎಸ್ ಪೆನ್ ನಂತೆ ರಿಡಿಸೈನ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ ಇನ್ನೂ ಈ ಫೋನ್ ಬಗೆಗಿನ ಸಂಪೂರ್ಣ ಚಿತ್ರಣ ತಿಳಿದುಬಂದಿಲ್ಲ ಆದರೆ ಗ್ಯಾಲಕ್ಸಿ ಎಸ್ 9 ಒಂದು ಶ್ರೀಮಂತರ ಪಾಲಿನ ಫೋನ್ ಅನ್ನುವುದರಲ್ಲಿ ಎರಡು ಮಾತಿಲ್ಲ. ಬೆಲೆ ಮತ್ತು ಲಭ್ಯತೆಯ ಕುರಿತಾಗಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲದೇ ಇದ್ದರೂ, ಅಲ್ಲಿಇಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೇನೂ ಕೊರತೆ ಇಲ್ಲ. ಸದ್ಯಕ್ಕೆ ಆ ಸುದ್ದಿಗಳನ್ನು ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಟ್ಟು ನಿಜವಾದ ಚಿತ್ರಣ ಸಿಗುವವರೆಗೂ ಕಾಯುವುದು ಒಳಿತು.

Best Mobiles in India

English summary
Samsung Galaxy Note9 pre-order in India to debut on August 19. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+