ರೆಡ್‌ಮಿ ನೋಟ್ 5 ಪ್ರೋ, ರಿಯಲ್‌ಮಿ 1ರ ಎದುರು ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್ ಲಾಂಚ್..!
ಭಾರತೀಯ ಸ್ಮಾರ್ಟ್‌ಫೋನ್ ಜಗತ್ತಿಗೆ ಮತ್ತೊಂದು ಬಹು ನಿರೀಕ್ಷಿತ ಫೋನ್ ಎಂಟ್ರಿ ಕೊಟ್ಟಿದ್ದು, ಕೋರಿಯಾ ಮೂಲದ ಮೊಬೈಲ್ ತಯಾರಿಕಾ ಕಂಪನಿ ಸ್ಯಾಮ್‌ಸಂಗ್ ತನ್ನ ಹೊಸ ಸ್ಮಾರ್ಟ್‌ಫೋನ್‌ನ್ನು ಜುಲೈ 2ರಂದು ಬಿಡುಗಡೆ ಮಾಡಿದೆ. ಹೊಸ ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಸ್ಮಾರ್ಟ್‌ಫೋನ್ ಶಿಯೋಮಿಯ ರೆಡ್‌ಮಿ ನೋಟ್ 5 ಪ್ರೋ ಮತ್ತು ಟಾಪ್ ಎಂಡ್ ಸ್ಮಾರ್ಟ್‌ಫೋನ್ ರಿಯಲ್‌ಮಿ 1ಕ್ಕೆ ಸ್ಪರ್ಧೆ ಒಡ್ಡುವುದಂತೂ ಖಂಡಿತ.

ಹೌದು, ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಸ್ಪೋರ್ಟ್ಸ್ ಇನ್ಫಿನಿಟಿ ಡಿಸ್‌ಪ್ಲೇ ಹೊಂದಿದ್ದು, ಎಲ್ಲಕ್ಕಿಂತಲೂ ವಿಶೇಷವಾಗಿ ಕಾಣುತ್ತಿದೆ. ಅದಲ್ಲದೇ ಕೈಗೆಟಕುವ ದರದಲ್ಲಿ ಅನೇಕ ಉತ್ತಮ ಫೀಚರ್‌ಗಳನ್ನು ನೀಡುತ್ತಿರುವ ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಬಗ್ಗೆ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ. ಹೊಸ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ. ಹೊಸ ಸ್ಮಾರ್ಟ್‌ಪೋನ್‌ನ ಲಾಂಚಿಂಗ್ ಆಫರ್‌ಗಳೇನು? ಎಂಬುದನ್ನು ಮುಂದೆ ನೋಡಿ.

ಸೂಪರ್ AMOLED ಡಿಸ್‌ಪ್ಲೇ
ಹೊಸ ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 5.6 ಇಂಚ್ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. 720x1480 ಪಿಕ್ಸೆಲ್ ಡಿಸ್‌ಪ್ಲೇ ಇದಾಗಿದ್ದು, 18.5:9 ಆಸ್ಪೆಕ್ಟ್ ರೇಟಿಯೋ ಮತ್ತು 293ppi ಪಿಕ್ಸೆಲ್ ಡೆನ್ಸಿಟಿ ಹೊಂದಿದೆ. ಯುವಜನರನ್ನು ಗುರಿಯಾಗಿಸಿಕೊಂಡಿರುವ ಸ್ಯಾಮ್‌ಸಂಗ್ ತೆಳುವಾದ ಬೆಜೆಲ್ ಡಿಸ್‌ಪ್ಲೇ ಹೊಂದಿದೆ. ಅದಲ್ಲದೇ ಸ್ಯಾಮ್‌ಸಂಗ್ ಕಂಪನಿ ಹೇಳಿಕೊಂಡಿರುವಂತೆ ಗಾತ್ರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ.15ರಷ್ಟು ಹೆಚ್ಚು ಡಿಸ್‌ಪ್ಲೇಯನ್ನು ನೀಡಲಾಗಿದೆಯಂತೆ.

ಕಾರ್ಯನಿರ್ವಹಣೆ
ಗೆಲಾಕ್ಷಿ ಆನ್ 6 ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಎಕ್ಸಪಿರಿಯನ್ಸ್ ಯುಕೆ ಜತೆಗೆ ಆಂಡ್ರಾಯ್ಡ್ 8.0 ಒರಿಯೋ ಒಎಸ್‌ನಿಂದ ಕಾರ್ಯನಿರ್ವಹಿಸುತ್ತದೆ. ಒಕ್ಟಾ ಕೋರ್ ಎಕ್ಸಿನೋಸ್ 7870 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, 1.6GHz ವೇಗ ಹೊಂದಿರಲಿದೆ. ಮಾಲಿ T830 MP1 GPU ಹೊಂದಿದ್ದು, ಉತ್ತಮ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸಬಹುದು.

13 MP ಕ್ಯಾಮೆರಾ
ಆನ್ 6 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ LED ಫ್ಲಾಶ್ ಜತೆ 13MP ಕ್ಯಾಮೆರಾ ಹೊಂದಿದ್ದು, ಅನಿಮೇಟೆಡ್ GIF, ಬ್ಯೂಟಿ ಫೇಸ್, ಬೆಸ್ಟ್ ಪೋಟೊ, ಫೇಸ್ ಡಿಟೆಕ್ಷನ್, ಹೆಚ್‌ಡಿಆರ್, ಪನೋರಮಾ ಮತ್ತು ಸ್ಪೋರ್ಟ್ಸ್‌ಗೆ ಬೆಂಬಲಿಸುತ್ತದೆ. LED ಫ್ಲಾಶ್ ಜತೆ 8MP ಫ್ರಂಟ್ ಕ್ಯಾಮೆರಾ ಹೊಂದಿದೆ. ಸ್ಯಾಮ್‌ಸಂಗ್ ಗೆಲಾಕ್ಷಿ ಒನ್ 6 ಎರಡು ಕ್ಯಾಮೆರಾಗಳು f/1.9 ಅಪಾರ್ಚರ್ ಲೆನ್ಸ್ ಹೊಂದಿವೆ. ಅದಲ್ಲದೇ ಫೇಸ್ ಅನ್‌ಲಾಕ್ ಫೀಚರ್‌ನ್ನು ನೀಡಿದೆ.

ಮೆಮೊರಿ
ಹೊಸ ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಸ್ಮಾರ್ಟ್‌ಫೋನ್ 4GB RAM ಮತ್ತು 32GB ಮೆಮೊರಿ ಹೊಂದಿದೆ. ಆದರೆ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಫೋನ್ ಸ್ಮರಣಾ ಸಾಮರ್ಥ್ಯವನ್ನು 256GBಗೆ ಚಿಸ್ತರಿಸುವ ಆಯ್ಕೆ ನೀಡಲಾಗಿದೆ.

ವಿಶಿಷ್ಟ ಫೀಚರ್ಸ್
ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ವಿಶಿಷ್ಟ ಫೀಚರ್ಸ್ ನೀಡಿದ್ದು, ಚಾಟ್ ಒವರ್ ವಿಡಿಯೋ ಎಂಬ ಹೊಸ ಫೀಚರ್ ನೀಡಿದೆ. ಈ ಫೀಚರ್‌ನಲ್ಲಿ ಬಳಕೆದಾರರು ವಿಡಿಯೋ ನೋಡುವಾಗ ಚಾಟ್ ಮಾಡುವ ಆಯ್ಕೆಯನ್ನು ಪಡೆದಿದ್ದಾರೆ. ಅದಲ್ಲದೇ ಮಾರಾಟಕ್ಕೂ ಮೊದಲೇ ಮೈ ಗೆಲಾಕ್ಷಿ ವಿಡಿಯೋ ಆಪ್ ಇನ್ಸ್ಟಾಲ್ ಮಾಡಿದ್ದು, ವಿಡಿಯೋಗಳನ್ನು ವೀಕ್ಷಿಸಲು ಹೊಸ ವೇದಿಕೆ ನೀಡಿದೆ. ಈ ಆಪ್‌ನಲ್ಲಿ ಬಾಲಿವುಡ್ ಸಿನಿಮಾಗಳು, ರಿಯಾಲಿಟಿ ಶೋಗಳು ಮುಂತಾದ ವಿಡಿಯೋಗಳನ್ನು ನೋಡಬಹುದಾಗಿದೆ. ಅದಲ್ಲದೇ ಸ್ಯಾಮ್‌ಸಂಗ್ ಪೇ ಮಿನಿ ಎಂಬ ಆಪ್ ಇನ್ಸ್ಟಾಲ್ ಮಾಡಿದ್ದು, ಸ್ಮಾರ್ಟ್‌ಫೋನ್ ಮೂಲಕ ಸರಳವಾಗಿ ಪೇಮೆಂಟ್ ಮಾಡುವ ಆಯ್ಕೆ ನೀಡಲಾಗಿದೆ.

ಮತ್ತಷ್ಟು
ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಡ್ಯುಯಲ್ ನ್ಯಾನೋ ಸಿಮ್ ಹೊಂದಿದರಲಿದೆ. 4G VoLTE, ವೈ-ಫೈ, ಬ್ಲೂಟೂತ್ v4.2, ಜಿಪಿಎಸ್/ ಎ-ಜಿಪಿಎಸ್, ಮೈಕ್ರೋ-ಯುಎಸ್‌ಬಿ ಮತ್ತು 3.5mm ಹೆಡ್‌ಫೋನ್ ಜಾಖ್ ಹೊಂದಿದೆ. ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಹಾಗೂ 3000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಕೈಗೆಟಕುವ ದರ
ಹೊಸ ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಬೆಲೆ 14,490 ರೂ. ಆಗಿದ್ದು, ಜುಲೈ 5ರಿಂದ ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಆನ್‌ಲೈನ್‌ನಲ್ಲಿ ಲಭ್ಯವಿರಲಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ನ್ನು ಸ್ಯಾಮ್‌ಸಂಗ್ ನೀಡುತ್ತಿದೆ.

ಆಫರ್ಸ್
ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಖರೀದಿಸುವ ಗ್ರಾಹಕರಿಗೆ ಅನೇಕ ಲಾಂಚಿಂಗ್ ಆಫರ್ಸ್‌ಗಳು ಲಭ್ಯವಿವೆ. 49 ರೂ.ಗೆ ಮೊಬೈಲ್ ಸುರಕ್ಷತಾ ಪ್ಲಾನ್, ನೋ ಕಾಸ್ಟ್ ಇಎಂಐ 1,610 ರೂ.ಯಿಂದ ಕಂತುಗಳು ಮತ್ತು ಎಕ್ಸಚೆಂಜ್ ಆಫರ್ ಇದ್ದು, ಗ್ರಾಹಕರು ಆಫರ್‌ಗಳನ್ನು ಪಡೆಯಬಹುದಾಗಿದೆ. ಜಿಯೋ ಚಂದಾದಾರರಾಗಿದ್ದರೆ ಮೈ ಜಿಯೋ ಅಕೌಂಟ್‌ನಿಂದ 198 ಮತ್ತು 299 ರೂ.ಗಳ ಪ್ಯಾಕ್ ರೀಚಾರ್ಜ್ ಮಾಡಿಸಿದರೆ 2,750 ರೂ. ಮೌಲ್ಯದ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇಷ್ಟೇ ಅಲ್ಲದೇ 198 ರೂ. ಮತ್ತು ಅದಕ್ಕಿಂತ ಮೇಲಿನ ಮೊದಲ ನಾಲ್ಕು ರಿಚಾರ್ಜ್‌ಗಳಲ್ಲಿ ಜಿಯೋದ ಡಬಲ್ ಡೇಟಾ ಆಫರ್ ಪಡೆಯಬಹುದು.


Click it and Unblock the Notifications








