Subscribe to Gizbot

ಸ್ಯಾಮ್ಸಂಗ್ ಪಾಕೆಟ್ ಸ್ಮಾರ್ಟ್ ಫೋನ್ ಬಿಡುಗಡೆ

Posted By: Varun
ಸ್ಯಾಮ್ಸಂಗ್ ಪಾಕೆಟ್ ಸ್ಮಾರ್ಟ್ ಫೋನ್ ಬಿಡುಗಡೆ

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಇತ್ತೀಚಿಗೆ ತಾನೇ, ಏಷಿಯಾದಲ್ಲಿ ನೋಕಿಯಾ ಹೊಂದಿದ್ದ 14 ವರ್ಷಗಳ ಮೊಬೈಲ್ ಆಧಿಪತ್ಯವನ್ನು ಕೊನೆಗೊಳಿಸಿತ್ತು. ಸ್ಮಾರ್ಟ್ ಫೋನ್ ಹಾಗು ಕಡಿಮೆ ಬಜೆಟ್ ಫೋನ್ಗಳ ವಿಭಾಗಗಳಲ್ಲೂ ಉತ್ತಮವಾದ ಫೋನುಗಳನ್ನು ಬಿಡುಗಡೆ ಮಾಡುತ್ತಿರುವ ಸ್ಯಾಮ್ಸಂಗ್, ಮೊನ್ನೆ ತಾನೇ ಪಾಕೆಟ್ ಹೆಸರಿನ ಮೊಬೈಲ್ ಒಂದನ್ನು ಬಿಡುಗಡೆ ಮಾಡಿದೆ.

ಕಾಂಪ್ಯಾಕ್ಟ್ ಆದ ಟಚ್ ಸ್ಕ್ರೀನ್ ಹೊಂದಿರುವ ಆಂಡ್ರಾಯ್ಡ್ ಆಧಾರಿತ ಈ, ಪಾಕೆಟ್ ಸ್ಮಾರ್ಟ್ ಫೋನ್ ನ ಇತರೇ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:

  • 2.8 ಇಂಚಿನ QVGA ಟಚ್ ಸ್ಕ್ರೀನ್

  • 240 X 320 ರೆಸಲ್ಯೂಶನ್

  • 2 ಮೆಗಾ ಪಿಕ್ಸೆಲ್ ಕ್ಯಾಮರಾ

  • 15 ಫ್ರೇಮ್/ಸೆಕೆಂಡ್ ವೀಡಿಯೋ ಚಿತ್ರೀಕರಣ ಮಾಡಬಹುದಾದ ಸೌಲಭ್ಯ.

  • ಜಿಯೋ ಟ್ಯಾಗಿಂಗ್ ಫೀಚರ್

  • 3GB ಆಂತರಿಕ ಮೆಮೊರಿ

  • 32 GB ವರೆಗೆ ವಿಸ್ತರಿಸಬಹುದಾದ ಮೈಕ್ರೋ SD ಕಾರ್ಡ್ ಸ್ಲಾಟ್

  • Wi-Fi ಹಾಟ್ ಸ್ಪಾಟ್, Wi-Fi ಟೆತರಿಂಗ್

  • USB ಪೋರ್ಟ್, ಮೈಕ್ರೋ USB.
ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಪಾಕೆಟ್ ಸ್ಮಾರ್ಟ್ ಫೋನ್ ನ ಬೆಲೆ 8.150 ರೂಪಾಯಿ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot