ಸೂಪರ್ ಸ್ಮಾರ್ಟ್ ಫೋನ್ ಗಳಲ್ಲಿ ನಿಮಗ್ಯಾವುದಿಷ್ಟ?

ಸ್ಯಾಮ್ ಸಂಗ್ ಮತ್ತು ಎಲ್ ಜಿ, ಎರಡು ಪ್ರತಿಷ್ಟಿತ ಕಂಪನಿಗಳೂ ಇದೀಗ ಸ್ಪರ್ಧೆಯಲ್ಲಿವೆ. ಎರಡೂ ಕಂಪನಿಗಳು ಅಂಡ್ರಾಯ್ಡ್ ಬೆಂಬಲಿತವಾದ, ತಮ್ಮದೇ ಹೊಸ ಹೊಸ ಶೈಲಿಯ ಹಲವು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿವೆ. ಇದೀಗ ಆ ಸಾಲಿನಲ್ಲಿರುವುದು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಮತ್ತು ಎಲ್ ಜಿ ಆಪ್ಟಿಮಸ್ ಎಂ ಮೊಬೈಲ್ ಗಳು.
ಎರಡೂ ಸ್ಮಾರ್ಟ್ ಫೋನ್ ಗಳ ಗುಣಲಕ್ಷಣವನ್ನು ನೋಡಿ ನಿಮಗಿಷ್ಟವಾದ ಮೊಬೈಲನ್ನು ಕೊಂಡುಕೊಳ್ಳಬಹುದು.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಮೊಬೈಲ್ 2.1 Éclair ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಬೇಕೆಂದರೆ ಪರಿಷ್ಕ್ರತಗೊಳಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಎಲ್ ಜಿ ಆಪ್ಟಿಮಸ್ ಎಂ ಮೊಬೈಲಿನಲ್ಲಿ ಆಂಡ್ರಾಯ್ಡ್ 2.2 ಆಪರೇಟಿಂಗ್ ಸಿಸ್ಟಮ್ ಇದ್ದು, ಇದನ್ನೂ ಕೂಡ ಪರಿಷ್ಕ್ರತಗೊಳಿಸಿಕೊಳ್ಳಬಹುದಾಗಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಮೊಬೈಲ್:
* 4.0 ಇಂಚಿನ ಡಿಸ್ಪ್ಲೇ
* ಟಚ್ ಸ್ಕ್ರೀನ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಒಟ್ಟು 32 ಜಿಬಿವರೆಗೂ ಮೆಮೊರಿ ಶೇಖರಣಾ ಸಾಮರ್ಥ್ಯ
* 1500 mAh ಬ್ಯಾಟರಿ 769 ನಿಮಿಷ ಟಾಕ್ ಟೈಂ, 750 ಗಂಟೆ ಸ್ಟ್ಯಾಂಡ್ ಬೈ ಟೈಂ
ಎಲ್ ಜಿ ಆಪ್ಟಿಮಸ್ ಎಂ ವಿಶೇಷತೆ:
* 3.2 ಇಂಚಿನ ಡಿಸ್ಪ್ಲೇ
* ಟಚ್ ಸ್ಕ್ರೀನ್
* 3.2 ಮೆಗಾ ಪಿಕ್ಸಲ್ ಕ್ಯಾಮೆರಾ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 1500 mAh ಬ್ಯಾಟರಿ, 7.05 ಗಂಟೆ ಟಾಕ್ ಟೈಂ, 337 ಗಂಟೆ ಸ್ಟ್ಯಾಂಡ್ ಬೈ ಟೈಂ
ಎರಡು ಮೊಬೈಲ್ ಗಳ ಬೆಲೆಯಲ್ಲೂ ವ್ಯತ್ಯಾಸವಿದೆ. ಎರಡೂ ಸ್ಮಾರ್ಟ್ ಫೋನ್ ಗಳೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿರುವುದರಿಂದ ಎರಡೂ ಸಮಾನ ಅಂಶವೆನ್ನಬಹುದು.
ಆದರೆ ಕಡಿಮೆ ಬೆಲೆಗೆ ಉತ್ತಮ ಫೋನ್ ಬಯಸುವುದಾದರೆ ಎಲ್ ಜಿ ಆಪ್ಟಿಮಸ್ ಎಂ ಉತ್ತಮ ಆಯ್ಕೆಯಾಗಲಿದೆ. ಆದರೆ ಒಳ್ಳೆ ಕ್ಯಾಮೆರಾ ಮತ್ತು ವಿಸ್ತಾರವಾದ ಸ್ಕ್ರೀನ್ ಬಯಸುವುದಾದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಮೊಬೈಲ್ ನಿಮಗೆ ಉತ್ತಮ ಆಯ್ಕೆ.
ಎಲ್ ಜಿ ಆಪ್ಟಿಮಸ್ ಎಂ ಬೆಲೆ 12,000 ರು ಅಥವಾ ಅದಕ್ಕಿಂತ ಕಡಿಮೆ ಎನ್ನಲಾಗಿದ್ದು, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಬೆಲೆ 20,000 ರು ಎಂದು ಅಂದಾಜಿಸ ಲಾಗಿದೆ.


Click it and Unblock the Notifications








