ಸ್ಯಾಮ್ ಸಂಗ್ ಡ್ಯೂಯೊಸ್ ಗೆ ಸರಿಸಾಟಿ ಯಾವುದು?

Posted By: Staff
ಸ್ಯಾಮ್ ಸಂಗ್ ಡ್ಯೂಯೊಸ್ ಗೆ ಸರಿಸಾಟಿ ಯಾವುದು?

ಸ್ಯಾಮ್ ಸಂಗ್ ಈ ಹಿಂದೆ ಬಿಡುಗಡೆಗೊಳಿಸಿದ ಸ್ಯಾಮ್ ಸಂಗ್ ಗ್ಯಾಲಕ್ಸಿ S2 ಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ಹೆಸರು ಗಳಿಸಿದೆ. ಆದ್ದರಿಂದ ಈ ಮೊಬೈಲನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕಂಪನಿ ಚಿಂತನೆ ನಡೆಸಿದೆ. ಡ್ಯೂಯಲ್ ಸಿಮ್ ಅಳವಡಿಕೆಯಿಂದ ಪರಿಷ್ಕರಿತಗೊಳ್ಳಲಿರುವ ಮೊಬೈಲ್ ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಿತವಾಗಲಿದೆ.

ಸ್ಯಾಮ ಸಂಗ್ ಗ್ಯಾಲಕ್ಸಿ S II ಮೊಬೈಲಿನ ಪರಿಷ್ಕ್ರತ ರೂಪ ಸ್ಯಾಮ್ ಸಂಗ್ ಗ್ಯಾಲಕ್ಸಿ S II ಡ್ಯೂಯೊಸ್ ಎಂಬ ಹೆಸರಿನಿಂದ ತೆರೆಕಾಣಲಿದೆ. ಈ ಮೊಬೈಲನ್ನು ಸ್ಯಾಮ್ ಸಂಗ್ I929 ಎಂದೂ ಕರೆಯಲಾಗುತ್ತೆ.

ಡ್ಯೂಯಲ್ ಕೋರ್ ಪ್ರೊಸೆಸರ್ ಪಡೆದುಕೊಂಡಿರುವ ಈ ಮೊಬೈಲ್ 1.2 GHz ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಈ ಮೊಬೈಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು, CDMA2000 ಮತ್ತು GSM ಫ್ರಿಕ್ಷೆನ್ಸಿ ಬ್ಯಾಂಡ್ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಮೊಬೈಲಿನ ಗುಣಲಕ್ಷಣಗಳನ್ನು ಇಲ್ಲಿ ತಿಳಿಯೋಣ.

ಸ್ಯಾಮ್ ಸಂಗ್ ಗ್ಯಾಲಕ್ಸಿ SII ಡ್ಯೂಯೊಸ್:

* 4.52 ಇಂಚಿನ ಸೂಪರ್ ಅಮೊಲೆಡ್ ಪ್ಲಸ್ WVGA ಡಿಸ್ಪ್ಲೇ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* 2 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

* 16 ಜಿಬಿ ಆಂತರಿಕ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊSD ಕಾರ್ಡ್ ಸ್ಲಾಟ್

* ವೈ-ಫೈ, ಬ್ಲೂಟೂಥ್ 3.0, GPS

* MHL ವಿಡಿಯೋ ಔಟ್ ಪುಟ್ ಬೆಂಬಲಿತ

ಮನರಂಜನೆಗೆಂದು ಹಲವು ಆಯ್ಕೆಗಳು ಮೊಬೈಲಿನಲ್ಲಿದ್ದು, ಈ ಮೊಬೈಲಿನ 1800 mAh ಬ್ಯಾಟರಿ ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಸ್ಯಾಮ್ ಸಂಗ್ ಗ್ಯಾಲಕ್ಸಿ SII ಡ್ಯೂಯೊಸ್ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಇನ್ನಿತರ ಡ್ಯೂಯಲ್ ಸಿಮ್ ಮೊಬೈಲಿನಂತೆಯೇ ಈ SII ಮೊಬೈಲ್ ಬೆಲೆಯೂ ಇರುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot