Subscribe to Gizbot

ಇವೆರಡರಲ್ಲಿ ಅತ್ಯುತ್ತಮ ಮೊಬೈಲ್ ಯಾವುದು?

Posted By: Staff
ಇವೆರಡರಲ್ಲಿ ಅತ್ಯುತ್ತಮ ಮೊಬೈಲ್ ಯಾವುದು?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಮತ್ತು ಮೊಟೊರೊಲಾ ಕಂಪನಿಗಳೆರಡೂ ಉತ್ತಮ ಸ್ಥಾನ ಪಡೆದುಕೊಂಡಿದೆ. ತಮ್ಮ ಅತ್ಯುತ್ತಮ ಗುಣಮಟ್ಟದಿಂದ ಈ ಕಂಪನಿಯ ಮೊಬೈಲ್ ಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.

ಈ ಕಂಪನಿಗಳ ಸ್ಯಾಮ್ ಸಂಗ್ ಗ್ಯಾಲಕ್ಸಿ S2 ಮತ್ತು ಮೊಟೊರೊಲಾ ರೇಝರ್ XT910 ಮೊಬೈಲ್ ಗಳು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸ್ಪರ್ಧೆಯಲ್ಲಿವೆ.

ಗ್ಯಾಲಕ್ಸಿ S2 ಮತ್ತು ಮೊಟೊರೊಲಾ ರೇಝರ್ XT910 ಎರಡೂ ಮೊಬೈಲ್ ಗಳು ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಗ್ಯಾಲಕ್ಸಿ ಮೊಬೈಲ್ ಡ್ಯೂಯಲ್ ಕೋರ್ ಅಪ್ಲಿಕೇಶನ್ ಪ್ರೊಸೆಸರ್ ಬಳಸಿಕೊಂಡರೆ ರೇಝರ್ ಮೊಬೈಲ್ 1.2 GHz ಡ್ಯೂಯಲ್ ಕೋರ್ ಕಾರ್ಟ್ ಕ್ಸ್ A9 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ S2 ಮೊಬೈಲ್ ವಿಶೇಷತೆ:

* 4.3 ಇಂಚಿನ WVGA ಸೂಪರ್ ಅಮೊಲೆಡ್ ಪ್ಲಸ್ ಡಿಸ್ಪ್ಲೇ

* 125.3 x 66.1 x 8.49 ಎಂಎಂ ಸುತ್ತಳತೆ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* 2 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ, LED ಫ್ಲಾಶ್

ಮೊಟೊರೊಲಾ ರೇಝರ್ XT910 ಮೊಬೈಲ್:

* 4.3 ಇಂಚಿನ ಡಿಸ್ಪ್ಲೇ, 540 x 960 ಪಿಕ್ಸಲ್ ರೆಸೊಲ್ಯೂಷನ್

* 130.7 x 68.9 x 7.1 ಎಂಎಂ ಸುತ್ತಳತೆ

* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

ಎರಡೂ ಸ್ಮಾರ್ಟ್ ಫೋನ್ ಗಳಲ್ಲಿ 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ ಮತ್ತು 16 ಜಿಬಿವರೆಗೂ ಆಂತರಿಕ ಮೆಮೊರಿ ಸಾಮರ್ಥ್ಯವಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿS2 ಮೊಬೈಲ್ 1650 mAh ಬ್ಯಾಟರಿ ಹೊಂದಿದ್ದರೆ, ಮೊಟೊರೊಲಾ ರೇಝರ್ XT910 ಮೊಬೈಲ್ 1780 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 9 ಗಂಟೆ ಟಾಕ್ ಟೈಂ ಮತ್ತು 304 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಎರಡೂ ಮೊಬೈಲ್ ಗಳಲ್ಲಿ ಮನರಂಜನೆಗೆಂದು ಆಡಿಯೋ, ವಿಡಿಯೋ ಪ್ಲೇಯರ್ ಗಳಿದ್ದು MP3, MP4, MPEG4, AAC+ ಮುಂತಾದ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ.

ಎರಡರಲ್ಲೂ ಸಂಪರ್ಕಕ್ಕೆಂದು ಬ್ಲೂಟೂಥ್, USB, 802.11 b/ g/ n ವೈ-ಫೈ ಇದೆ. ಇದರೊಂದಿಗೆ A-GPS ಸೌಲಭ್ಯವೂ ಇದ್ದು, 3.5 ಎಂಎಂ ಆಡಿಯೋ ಜ್ಯಾಕ್ ಇದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಮೊಬೈಲ್ ಬೆಲೆ ಸುಮಾರು 30,000ರೂ ಇರಬಹುದೆಂದು ಅಂದಾಜಿಸಲಾಗಿದ್ದು, ಮೊಟೊರೊಲಾ ರೇಝರ್ XT910 ಬೆಲೆ ಗ್ಯಾಲಕ್ಸಿ ಮೊಬೈಲ್ ಗಿಂತ 2,000 ರಿಂದ 3,000 ರು ಹೆಚ್ಚಿರಬಹುದೆಂದು ತಿಳಿದುಬಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot