Home
ಮೊಬೈಲ್

ಬರ್ತಿದೆ ಹೊಸ Samsung ಫೋನ್! ಬಿಡುಗಡೆ ಟೈಮ್‌ಲೈನ್ ಬಹಿರಂಗ; ವಿಶೇಷತೆಗಳೇನು?

ಸ್ಯಾಮ್‌ಸಂಗ್‌ ಪ್ರಿಯರಿಗೆ ದೊಡ್ಡ ಉಡುಗೊರೆ ಇದೆ. ಹೊಸ ಸ್ಯಾಮ್‌ಸಂಗ್ ಫೋನ್ ಖರೀದಿಸುವ ಮನಸ್ಸು ಹೊಂದಿರುವ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಲು ಕಂಪನಿ ಸಿದ್ಧವಾಗಿದೆ. ಶೀಘ್ರದಲ್ಲೇ ಸ್ಯಾಮ್‌ಸಂಗ್‌ನ ಹೊಚ್ಚ ಹೊಸ ಫೋನ್ ಮಾರುಕಟ್ಟೆಗೆ ಭಾರತಕ್ಕೆ ಲಗ್ಗೆ ಇಡಲಿದೆ. ಹೌದು, ಸ್ಯಾಮ್‌ಸಂಗ್‌ನ ಮುಂಬರುವ ಹೊಸ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌24 ಎಫ್‌ಈ (Samsung Galaxy S24 FE) ಹಲವು ದಿನಗಳಿಂದ ಭಾರೀ ಸುದ್ದಿಯಲ್ಲಿದೆ. ಇದೀಗ ಬಿಡುಗಡೆ ಮಾಹಿತಿ ಸೋರಿಕೆಯಾಗಿದೆ. ಈ ಮೂಲಕ ಹೊಸ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕೆಲವು ದಿನಗಳ ಹಿಂದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಫೋನಿನ ವಿಶೇಷತೆಗಳು ಮತ್ತು ಪ್ರೋಮೋ ಸೋರಿಕೆಗಳ ಮೂಲಕ ಬಹಿರಂಗಗೊಂಡಿವೆ. ಈ ಮಧ್ಯಯೇ, ಇದೀಗ ಜಾಗತಿಕ ಬಿಡುಗಡೆ ಟೈಮ್‌ಲೈನ್ ಅನ್ನು ಹೊಸ ವರದಿಯಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿಂದೆ ಮೊಬೈಲ್ ಬೆಂಬಲ ಪುಟವು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಮಾಹಿತಿಯ ಪ್ರಕಾರ, ಇದು ಕಂಪನಿಯಿಂದ ಮುಂದಿನ ದೊಡ್ಡ ಉಡುಗೊರೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಫೋನ್‌ ಕುರಿತ ಇತ್ತೀಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ.

ಬರ್ತಿದೆ ಹೊಸ Samsung ಫೋನ್! ಬಿಡುಗಡೆ ಟೈಮ್‌ಲೈನ್ ಬಹಿರಂಗ; ವಿಶೇಷತೆಗಳೇನು?

Samsung Galaxy S24 FE ಲಾಂಚ್ ಟೈಮ್‌ಲೈನ್

ಸ್ಯಾಮ್‌ಸಂಗ್ ಕಂಪನಿಯು ಈವರೆಗೆ Samsung Galaxy S24 FE ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ವರದಿಯ ಪ್ರಕಾರ ಮುಂಬರುವ FE ಮಾದರಿಯನ್ನು ಅಧಿಕೃತವಾಗಿ ಅಕ್ಟೋಬರ್ ತಿಂಗಳಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಬಹುದು. ಈ ಸಮಯವನ್ನು ಖಚಿತವಾಗಿ ಪರಿಗಣಿಸಬಹುದು. ಏಕೆಂದರೆ, ಈ ಹಿಂದೆ Samsung Galaxy S23 FE ಫೋನನ್ನು ಸಹ ಕಳೆದ ವರ್ಷ ಇದೇ ಸಮಯದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು.

Samsung Galaxy S24 FE ವೈಶಿಷ್ಟ್ಯಗಳು (ನಿರೀಕ್ಷಿತ)

ಮೊದಲೇ ಹೇಳಿದಂತೆ, Galaxy S24 FE ಫೋನಿನ ಕುರಿತು ಕಂಪನಿಯು ಈವರೆಗೆ ಏನನ್ನೂ ಬಹಿರಂಗಪಡಿಸಿಲ್ಲ. ಆದರೂ, ಇತ್ತೀಚಿನ ದಿನಗಳಲ್ಲಿ ಈ ಫೋನಿನ ಬಗ್ಗೆ ಅನೇಕ ಸೋರಿಕೆಗಳು ಹೊರಹೊಮ್ಮಿವೆ. ಇದರಿಂದಾಗಿ ಮುಂಬರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನ ಡಿಸ್ಪ್ಲೇ ವೈಶಿಷ್ಟ್ಯಗಳು, ಚಿಪ್‌ಸೆಟ್, ಬ್ಯಾಟರಿ ಮತ್ತು ಲಾಂಚ್ ಟೈಮ್ ಲೈನ್ ವಿವರಗಳು ಸೋರಿಕೆಯಾಗಿವೆ.

ಡಿಸ್‌ಪ್ಲೇ: ಸೋರಿಕೆಯ ಪ್ರಕಾರ, ಸ್ಯಾಮ್‌ಸಂಗ್‌ನ ಹೊಸ ಫೋನ್ 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರ ಮತ್ತು 1,900nits ಗರಿಷ್ಠ ಬ್ರೈಟ್‌ನೆಸ್ ಹೊಂದಿರಬಹುದು. ಈ ಡಿಸ್ಲ್ಪೇಯನ್ನು ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಬೆಂಬಲಿಸಬಹುದು.

ಪ್ರೊಸೆಸರ್: ಈ ಹೊಸ ಫೋನನ್ನು Exynos 2400 ಚಿಪ್‌ಸೆಟ್‌ನೊಂದಿಗೆ ಪರಿಚಯಿಸಬಹುದು. ಈ ಹಿಂದೆ ಬಿಡುಗಡೆಯಾದ Galaxy S24 ಮತ್ತು S24+ ನಲ್ಲಿ ಸಹ ಅಳವಡಿಸಲಾಗಿದೆ. ಆಪರೇಟಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, Samsung Galaxy S24 FE ಮೊಬೈಲ್ Android 14 ಆಧಾರಿತ One UI 6.1.1 ನೊಂದಿಗೆ ಬರಬಹುದು.

ಬರ್ತಿದೆ ಹೊಸ Samsung ಫೋನ್! ಬಿಡುಗಡೆ ಟೈಮ್‌ಲೈನ್ ಬಹಿರಂಗ; ವಿಶೇಷತೆಗಳೇನು?

ಕ್ಯಾಮೆರಾ: Samsung Galaxy S24 FE ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಬಹುದು. ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 8MP ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 10MP ಕ್ಯಾಮೆರಾ ಇರಲಿದೆ.

ಬ್ಯಾಟರಿ: ಮುಂಬರುವ Galaxy S24 FE ಫೋನ್‌ 4,565mAh ಬ್ಯಾಟರಿಯೊಂದಿಗೆ ಬರಬಹುದು. ಇದು 29 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಮತ್ತು 78 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಸಮಯವನ್ನು ಬ್ಯಾಕಪ್ ಮಾಡಬಹುದು ಎಂದು ಹೇಳಲಾಗಿದೆ.

ಇತರೆ ಫೀಚರ್ಸ್‌: Samsung Galaxy S24 FE ಫೋನಿನಲ್ಲಿ ಗ್ಯಾಲಕ್ಸಿ ಎಐ (Galaxy AI) ವೈಶಿಷ್ಟ್ಯಗಳನ್ನು ಕಾಣಬಹುದು. ಇದರಲ್ಲಿ ಪೋರ್ಟ್ರೇಟ್ ಸ್ಟುಡಿಯೋ, ಸರ್ಕಲ್ ಟು ಸರ್ಚ್, ಜನರೇಟಿವ್ ಎಡಿಟ್, ಸ್ಕೆಚ್ ಟು ಇಮೇಜ್ ಮತ್ತು ಲೈವ್ ಟ್ರಾನ್ಸ್‌ಲೇಟ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಕಾಣಬಹುದು.

Best Mobiles in India

English summary
Samsung Galaxy S24 FE Launch Timeline Leaked: Know Expected Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+