Samsung Galaxy S24 FE vs Samsung Galaxy S23 FE: ಹೊಸ ಮತ್ತು ಹಳೆಯ ಫೋನ್.. ಯಾವುದು ಬೆಸ್ಟ್?
Samsung Galaxy S24 FE vs Samsung Galaxy S23 FE: ಸ್ಯಾಮ್‌ಸಂಗ್ (Samsung) ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE (Samsung Galaxy S24 FE) ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದನ್ನು ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (Samsung Galaxy S23 FE) ಫೋನಿನ ಉತ್ತರಾಧಿಕಾರಿಯಾಗಿದೆ.
ಗ್ರಾಹಕರು ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಫೋನ್ ಖರೀದಿಸಬೇಕೆ? ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಮೊಬೈಲ್ ಕೊಳ್ಳಬೇಕೆ? ಎಂಬ ಗೊಂದಲದಲ್ಲಿದ್ದಾರೆ. ಕಂಪನಿಯು ನೂತನ ಫೋನಿನಲ್ಲಿ ಯಾವ ಬದಲಾವಣೆ ಮಾಡಿದೆ ಎಂಬ ಕುತೂಹಲವೂ ಇದೆ. ಹೀಗಾಗಿ, ನಾವು ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ನಡುವಿನ ವ್ಯತ್ಯಾಸಗಳನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಈ ಮೂಲಕ ನಿಮ್ಮಲ್ಲಿರುವ ಗೊಂದಲ ನಿವಾರಣೆ ಮಾಡಲಾಗುವುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಮತ್ತು ಗ್ಯಾಲಕ್ಸಿ S23 FE ಬೆಲೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 59,999 ರೂ. ಆಗಿದೆ. 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 69,999 ರೂ. ಇದೆ. ಕಂಪನಿಯು ಹೊಸ ಫೋನ್ ಮತ್ತು ಹಳೆಯ ಫೋನಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಮಾಡಿಲ್ಲ. ಎರಡೂ ಮಾದರಿಗಳನ್ನು 59,999 ರೂ. ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಮತ್ತು ಗ್ಯಾಲಕ್ಸಿ S23 FE ನಡುವಿನ ವ್ಯತ್ಯಾಸ
ಡಿಸ್ಪ್ಲೇ: ಗ್ಯಾಲಕ್ಸಿ S24 FE ಫೋನ್ 6.7 ಇಂಚಿನ FHD+ ಡೈನಾಮಿಕ್ AMOLED 2x ಡಿಸ್ಪ್ಲೇಯನ್ನು ಹೊಂದಿದೆ. ಇದು 1900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಪ್ಯಾನೆಲ್‌ಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಒದಗಿಸಲಾಗಿದೆ. ಗ್ಯಾಲಕ್ಸಿ S23 FE ಫೋನ್ 6.3 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬರುತ್ತದೆ.
ಪ್ರೊಸೆಸರ್: ಗ್ಯಾಲಕ್ಸಿ S24 FE ಫೋನ್ Samsung Exynos 2400e ಪ್ರೊಸೆಸರ್‌ನೊಂದಿಗೆ ಬರುತ್ತದೆ. ಈ ಫೋನ್ Android 14 ಆಧಾರಿತ One UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು AI ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಈ ಫೋನ್ 7 ವರ್ಷಗಳ ಭದ್ರತಾ ನವೀಕರಣಗಳನ್ನು ಹೊಂದಿದೆ. ಗ್ಯಾಲಕ್ಸಿ S23 FE ಮೊಬೈಲ್ ಎರಡು ಪ್ರೊಸೆಸರ್ ಆಯ್ಕೆಗಳೊಂದಿಗೆ Samsung Exynos 2200 ಮತ್ತು Qualcomm Snapdragon 8 Gen 1 ಅನ್ನು ಬಿಡುಗಡೆ ಮಾಡಿದೆ. ಇದು Android 13 ಆಧಾರಿತ One UI 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4 ವರ್ಷಗಳ Android ನವೀಕರಣ ಮತ್ತು 5 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಹೊಂದಿದೆ.
ಕ್ಯಾಮೆರಾ: ಗ್ಯಾಲಕ್ಸಿ S24 FE ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ವೈಡ್ ಆಂಗಲ್ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 10 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಇದೆ.
ಗ್ಯಾಲಕ್ಸಿ S23 FE ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಈ ಫೋನ್ ಸೆಲ್ಫಿ ಪ್ರಿಯರಿಗಾಗಿ 10 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಕಂಪನಿಯು ಹಳೆ ಫೋನಿನ ಕ್ಯಾಮೆರಾಗಳು ಮತ್ತು ಹೊಸ ಫೋನಿನ ಕ್ಯಾಮೆರಾ ಸೆಟಪ್‌ನಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ.
ಬ್ಯಾಟರಿ: ಗ್ಯಾಲಕ್ಸಿ S24 FE ಫೊನ್ 4,700mAh ಬ್ಯಾಟರಿಯನ್ನು ಹೊಂದಿದೆ. ಇದು ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಗ್ಯಾಲಕ್ಸಿ S23 FE 4500mAh ಬ್ಯಾಟರಿಯನ್ನು ಹೊಂದಿದೆ. ಇದು 25W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 15W ವೈರ್‌ಲೆಸ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಸಹ ಹೊಂದಿದೆ.
ಇತರ ವೈಶಿಷ್ಟ್ಯಗಳು: ಗ್ಯಾಲಕ್ಸಿ S24 FE ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಇದು ಡ್ಯುಯಲ್ ಸಿಮ್ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಭೌತಿಕ ಡ್ಯುಯಲ್ eSIM ಅನ್ನು ಸಹ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ Wi-Fi 6E, ಬ್ಲೂಟೂತ್ v5.3, NFC, Navic ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ.
ಗ್ಯಾಲಕ್ಸಿ S23 FE ಮೊಬೈಲ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, IP68 ರೇಟಿಂಗ್, ಡ್ಯುಯಲ್ ಸಿಮ್ ಪೋರ್ಟ್, Dolby Atmos ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








