Home
ಮೊಬೈಲ್

Samsungನ ಈ ಫೋನ್ ಹೊಸ ಕಲರ್‌ನಲ್ಲಿ ಲಾಂಚ್: 200MP ಕ್ಯಾಮೆರಾ, ಭಾರತದಲ್ಲಿ ಬೆಲೆ ಎಷ್ಟು?

ಸ್ಯಾಮ್‌ಸಂಗ್ ಮೊಬೈಲ್ ಪ್ರಿಯರಿಗೆ ಖುಷಿ ಸುದ್ದಿ! ಕಂಪನಿಯು Samsung Galaxy S24 Ultra ಅನ್ನು ಹೊಸ ಕಲರ್‌ನಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಹೊಸ ಟೈಟಾನಿಯಂ ಹಳದಿ ಬಣ್ಣವನ್ನು ನೀಡಲಾಗಿದೆ. ಇನ್ಮುಂದೆ ಈ ಸ್ಮಾರ್ಟ್‌ಫೋನ್ 7 ಬಣ್ಣಗಳಲ್ಲಿ ಲಭ್ಯವಿರಲಿದೆ. ಟೈಟಾನಿಯಂ ಗ್ರೇ, ಟೈಟಾನಿಯಂ ಕಪ್ಪು, ಟೈಟಾನಿಯಂ ವೈಲೆಟ್, ಟೈಟಾನಿಯಂ ಬ್ಲೂ, ಹಸಿರು ಮತ್ತು ಕಿತ್ತಳೆ ಕಲರ್‌ಗಳಲ್ಲಿ ಖರೀದಿಸಬಹುದು. Galaxy S24 Ultra ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, ಆರಂಭಿಕ ಬೆಲೆ 1,29,999 ರೂ. ಇದೆ. ಇದು ಶಕ್ತಿಯುತ ಬ್ಯಾಟರಿ, ದೊಡ್ಡ ಡಿಸ್ಲ್ಪೇನೊಂದಿಗೆ ಅನೇಕ ಅದ್ಭುತ ವಿಶೇಷತೆಗಳನ್ನು ಹೊಂದಿದೆ. ಈ ಕಾರಣಕ್ಕಾಗಿ ಈ ಮೊಬೈಲ್‌ನ ಬೆಲೆ ದುಬಾರಿಯಾಗಿದೆ.

ಹೌದು, ಸ್ಯಾಮ್‌ಸಂಗ್ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ತನ್ನ ವಿಭಿನ್ನವಾದ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಸ್ಯಾಮ್‌ಸಂಗ್ ಯಶಸ್ವಿಯಾಗಿವೆ. ಜನವರಿಯಲ್ಲಿ Samsung Galaxy S24 Ultra ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಆಗ ಟೈಟಾನಿಯಂ ಹಳದಿ, ಟೈಟಾನಿಯಂ ಕಪ್ಪು, ಟೈಟಾನಿಯಂ ಗ್ರೇ ಮತ್ತು ಟೈಟಾನಿಯಂ ಪರ್ಪಲ್ ಕಲರ್‌ನಲ್ಲಿ ಪರಿಚಯಿಸಲಾಗಿತ್ತು. ಇದೀಗ, ಹೊಸ ಟೈಟಾನಿಯಂ ಹಳದಿ ಬಣ್ಣದ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ ಬನ್ನಿ.

Samsungನ ಈ ಫೋನ್ ಹೊಸ ಕಲರ್‌ನಲ್ಲಿ ಲಾಂಚ್: 200MP ಕ್ಯಾಮೆರಾ, ಬೆಲೆ ಎಷ್ಟು?

ಗ್ಯಾಲಕ್ಸಿ S24 ಅಲ್ಟ್ರಾ ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 3120 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದಿದೆ. ಇದು 505 PPI ಪಿಕ್ಸೆಲ್‌ ಸಾಂದ್ರತೆಯೊಂದಿಗೆ, 2600nits ಬ್ರೈಟ್‌ನೆಸ್‌ ಹೊಂದಿದೆ. 1Hz ನಿಂದ 120Hz ರಿಫ್ರೆಶ್ ದರ ಮತ್ತು ಬೂಸ್ಟರ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಜೊತೆಗೆ ಇದು ನೋಟ್-ಟೇಕಿಂಗ್, ಡ್ರಾಯಿಂಗ್ ಮತ್ತು ಡಾಕ್ಯುಮೆಂಟ್ ಎಡಿಟಿಂಗ್‌ಗಾಗಿ ಎಸ್ ಪೆನ್ ಅನ್ನು ಬೆಂಬಲಿಸುತ್ತದೆ.

ಗ್ಯಾಲಕ್ಸಿ S24 ಅಲ್ಟ್ರಾ ಪ್ರೊಸೆಸರ್‌ ಏನು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ Qualcomm Snapdragon 8 Gen 3(4nm) SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 12 GB RAM ಮತ್ತು 256GB, 512GB, ಹಾಗೂ 1TB ವರೆಗೆ ಇಂಟರ್ನಲ್ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಈ ಫೋನ್ ಹೊಸ Galaxy AI ವೈಶಿಷ್ಟ್ಯವನ್ನು ಹೊಂದಿದೆ. ಕರೆ ಅನುವಾದ ಮತ್ತು AI ಫೋಟೋ ವಿಡಿಯೋ ಎಡಿಟಿಂಗ್ ಅನ್ನು ಸಹ ಮಾಡಬಹುದು.

Samsungನ ಈ ಫೋನ್ ಹೊಸ ಕಲರ್‌ನಲ್ಲಿ ಲಾಂಚ್: 200MP ಕ್ಯಾಮೆರಾ, ಬೆಲೆ ಎಷ್ಟು?

ವಾವ್ ಎನಿಸುವ ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು ಹಿಂಭಾಗದಲ್ಲಿ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿ ಮೊದಲನೆ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ. ನಾಲ್ಕನೇ ಕ್ಯಾಮೆರಾ 10 ಮೆಗಾಪಿಕ್ಸೆಲ್‌ ಸೆನ್ಸಾರ್‌ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಈ ಫೋನ್‌ನ ಬ್ಯಾಟರಿ ಸೂಪರ್

ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 45W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ. 2.0 ತಂತ್ರಜ್ಞಾನ ಮತ್ತು ವೈರ್‌ಲೆಸ್ ಪವರ್ ಹಂಚಿಕೆಯನ್ನು ಒಳಗೊಂಡಿದೆ. ಕೇವಲ 30 ನಿಮಿಷದಲ್ಲಿ 65% ಚಾರ್ಜಿಂಗ್‌ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, Wi-Fi ಡೈರೆಕ್ಟ್, ಬ್ಲೂಟೂತ್ 5.3 ಮತ್ತು USB ಟೈಪ್-C ಪೋರ್ಟ್ ಇದೆ. ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು Samsung Knox, Knox Vault ಮತ್ತು ಪಾಸ್‌ಕೀಗಳನ್ನು ಒಳಗೊಂಡಿದೆ.

Samsungನ ಈ ಫೋನ್ ಹೊಸ ಕಲರ್‌ನಲ್ಲಿ ಲಾಂಚ್: 200MP ಕ್ಯಾಮೆರಾ, ಬೆಲೆ ಎಷ್ಟು?

ಈ ಫೋನ್‌ನ ವಿಶೇಷವೆಂದರೆ ಅದರ ಗ್ಯಾಲಕ್ಸಿ AI. ಈ ಸ್ಮಾರ್ಟ್‌ಫೋನ್ ಸರ್ಕಲ್ ಟು ಸರ್ಚ್, ಜೆನ್ ಟೆಕ್ಸ್ಟ್, ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಲೈವ್ ಟ್ರಾನ್ಸ್‌ಲೇಶನ್ ಮುಂತಾದ ಹಲವು AI ವೈಶಿಷ್ಟ್ಯಗಳನ್ನು ಹೊಂದಿದೆ. ಸರ್ಕಲ್ ಟು ಸರ್ಚ್ ವೈಶಿಷ್ಟ್ಯವನ್ನು ಇಲ್ಲಿಯವರೆಗೆ ಹುಡುಕಲು ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಬಣ್ಣದ Samsung Galaxy S24 Ultra ಚಿತ್ರವನ್ನು ನೋಡಬಹುದು. ಅಲ್ಲದೆ, ಈ ಹೊಸ ಬಣ್ಣವು ಖರೀದಿದಾರರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಈ ಫೋನ್‌ನ ಬೆಲೆ ಎಷ್ಟು? ಎಲ್ಲಿ ಖರೀದಿಸಬಹುದು?

ಸ್ಯಾಮ್ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಹಳದಿ ಬಣ್ಣದೊಂದಿಗೆ 3 ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಈ ಫೋನ್‌ನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 1,29,999 ರೂ. ಇದೆ. 12GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ 1,39,999 ರೂ. ಇದೆ. ಟಾಪ್ ವೇರಿಯಂಟ್ 12GB RAM+1TB ಸ್ಟೋರೇಜ್‌ನ ಬೆಲೆ 1,59,999 ರೂ. ಇದೆ. ನೀವು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್‌ನ ಅಧಿಕೃತ ಸ್ಟೋರ್‌ಗಳಲ್ಲಿ ಖರೀದಿಸಬಹುದು.

Best Mobiles in India

English summary
Samsung Galaxy S24 Ultra introduced in a new color variant. Check availability and details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+