Home
ಮೊಬೈಲ್

Samsung Galaxy S25 Edge ರಿಲೀಸ್: 5.8mm ನಷ್ಟು ತೆಳುವಾದ ಫೋನ್ ಫೀಚರ್ಸ್ ನೋಡಿ!

ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Samsung Galaxy S25 Edge ಸ್ಮಾರ್ಟ್‌ಫೋನ್ ಇಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. Samsung ತನ್ನ Galaxy S ಸರಣಿಗೆ ಹೊಸ ಸೇರ್ಪಡೆಯಾಗಿ Galaxy S25 Edge ಅನ್ನು ಘೋಷಿಸಿದ್ದು, ಮಂಗಳವಾರ ತಡರಾತ್ರಿ ಅನಾವರಣಗೊಂಡ ಈ ಸ್ಮಾರ್ಟ್‌ಫೋನ್, ಕೇವಲ 5.8mm ದಪ್ಪವನ್ನು ಹೊಂದಿದ್ದು, Samsung ಇದುವರೆಗೆ ಬಿಡುಗಡೆ ಮಾಡಿದ ಅತ್ಯಂತ ತೆಳುವಾದ ಫೋನ್‌ಗಳಲ್ಲಿ ಒಂದಾಗಿದೆ. ಜೊತೆಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಫಾರ್ ಗ್ಯಾಲಕ್ಸಿ ಚಿಪ್, 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 3,900mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾದರೆ, ಹೊಸ Samsung Galaxy S25 Edge ಸ್ಮಾರ್ಟ್‌ಫೋನ್ ಹೊಂದಿರುವ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Samsung Galaxy S25 Edge ವೈಶಿಷ್ಟ್ಯಗಳು,
Samsung Galaxy S25 Edge ಸ್ಮಾರ್ಟ್‌ಫೋನ್ 6.7-ಇಂಚಿನ Quad-HD+ (3,120×1,440 ಪಿಕ್ಸೆಲ್‌ಗಳು) Infinity-O Dynamic AMOLED 2X ಡಿಸ್ಪ್ಲೇ ಹೊಂದಿದೆ. ಈ ಡಿಸ್‌ಪ್ಲೆಯು 120Hz ವರೆಗಿನ ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್ 2 ರಕ್ಷಣೆಯನ್ನು ಹೊಂದಿದ್ದು, ಇದು ಉತ್ತಮ ವೀಕ್ಷಣೆಯ ಅನುಭವ ಮತ್ತು ಬಾಳಿಕೆಯನ್ನು ನೀಡುತ್ತದೆ. ಕಾರ್ಯಕ್ಷಮತೆಗೆ ಬಂದರೆ, Galaxy S25 Edge ಫೋನ್ 12GB RAM ನೊಂದಿಗೆ ಜೋಡಿಸಲಾದ ಕಸ್ಟಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಫಾರ್ ಗ್ಯಾಲಕ್ಸಿ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 256GB ಮತ್ತು 512GB ಆಯ್ಕೆಗಳಲ್ಲಿ ಲಭ್ಯವಿರುತ್ತದೆ, ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಈ ಫೋನ್ ಡ್ಯುಯಲ್-ಸಿಮ್ (ನ್ಯಾನೋ+ನ್ಯಾನೋ) ಸ್ಲಾಟ್‌ಗಳನ್ನು ಹೊಂದಿದೆ ಮತ್ತು Samsung ನ One UI 7 ಸ್ಕಿನ್‌ನೊಂದಿಗೆ Android 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Samsung Galaxy S25 Edge ರಿಲೀಸ್: 5.8mm ನಷ್ಟು ತೆಳುವಾದ ಫೋನ್ ಫೀಚರ್ಸ್ ನೋಡಿ!

ಕ್ಯಾಮೆರಾ ವಿಭಾಗದಲ್ಲಿ, Samsung Galaxy S25 Edge ಗಮನಾರ್ಹವಾದ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ, 12-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಸಂಯೋಜನೆಯು ಬಳಕೆದಾರರಿಗೆ ಅದ್ಭುತವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಇನ್ನು ಈ ಫೋನ್ 3,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು ಇದು 25W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ, ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯೂ ಲಭ್ಯವಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹೆಚ್ಚುವರಿಯಾಗಿ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ, ಇದು ಅದರ ಬಾಳಿಕೆಯನ್ನು ಹೆಚ್ಚಿಸುತ್ತದೆ. ಇದರ ಅಳತೆ 158.2×75.6×5.8mm ಮತ್ತು ತೂಕ 163g ಆಗಿದೆ.

Samsung Galaxy S25 Edge ಬೆಲೆ ಎಷ್ಟು?
ಲಭ್ಯತೆ ಮತ್ತು ಬೆಲೆಯ ಕುರಿತು ನೋಡುವುದಾದರೆ, Samsung Galaxy S25 Edge ಸ್ಮಾರ್ಟ್‌ಪೋನ್ ಇದೇ ಮೇ 30 ರಿಂದ ಟೈಟಾನಿಯಂ ಐಸಿಬ್ಲೂ, ಟೈಟಾನಿಯಂ ಜೆಟ್‌ಬ್ಲ್ಯಾಕ್ ಮತ್ತು ಟೈಟಾನಿಯಂ ಸಿಲ್ವರ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು Samsung ತಿಳಿಸಿದೆ. 12GB RAM ಮತ್ತು 256GB ಸಂಗ್ರಹಣೆಯ ಮೂಲ ಮಾದರಿಯ ಬೆಲೆ $1,099 (ಸುಮಾರು ರೂ. 93,300) ಆಗಿದ್ದು, 512GB ಸ್ಟೋರೇಜ್ ಮಾದರಿಯ ಬೆಲೆ $1,219 (ಸುಮಾರು ರೂ. 1,03,500). ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಇದರ ಬೆಲೆ ಮತ್ತು ಲಭ್ಯತೆಯ ಕುರಿತಾದ ಮಾಹಿತಿಯನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದು. ಒಟ್ಟಾರೆಯಾಗಿ, Samsung Galaxy S25 Edge ತೆಳುವಾದ ಮತ್ತು ಸೊಗಸಾದ ವಿನ್ಯಾಸ, ಪ್ರಬಲ ಕಾರ್ಯಕ್ಷಮತೆ ಮತ್ತು ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳನ್ನು ಬಯಸುವವರಿಗೆ ಆಕರ್ಷಕ ಸಾಧನವಾಗಿ ಬಿಡುಗಡೆಯಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Samsung Galaxy S25 Edge was introduced on Tuesday as the newest member of the Galaxy S25 smartphone series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+