Galaxy S25 FE ಫ್ಯಾನ್ ಎಡಿಷನ್: ನಾಳೆ ಬಿಡುಗಡೆಗೆ ಕ್ಷಣಗಣನೆ, ವಿವರಗಳು ಸೋರಿಕೆ!
ಸೆಪ್ಟೆಂಬರ್ 4 ರಂದು, ಅಂದರೆ ನಾಳೆ ನಡೆಯಲಿರುವ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಬಹುನಿರೀಕ್ಷಿತ Samsung Galaxy S25 FE ಸ್ಮಾರ್ಟ್‌ಫೋನ್ ಅನಾವರಣಗೊಳ್ಳಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಕಳೆದ ಕೆಲವು ವಾರಗಳಿಂದಲೇ ಈ ಸ್ಮಾರ್ಟ್‌ಫೋನ್ ಕುರಿತು ಹಲವು ಮಾಹಿತಿ ಸೋರಿಕೆಯಾಗಿದೆ. ಹೊಸ ಮಾದರಿಯ ವಿನ್ಯಾಸ, ಬೆಲೆ ಶ್ರೇಣಿ ಮತ್ತು ವೈಶಿಷ್ಟ್ಯಗಳ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದ್ದು, ಫ್ಯಾನ್ ಎಡಿಷನ್ ಬಿಡುಗಡೆಗೆ ಕೌಂಟ್‌ಡೌನ್ ಆರಂಭವಾಗಿದೆ.' ಇದೀಗ Galaxy S25 FE ಗಾಗಿ ಹಲವು ಅಧಿಕೃತ ಪರಿಕರಗಳ ಚಿತ್ರಗಳು ಹಾಗೂ ಬೆಲೆಗಳು ಹೊರಬಿದ್ದಿವೆ.!
ಟಿಪ್‌ಸ್ಟರ್ ಸುಧಾಂಶು ಅಂಬೋರೆ ಹಂಚಿಕೊಂಡ ಮಾಹಿತಿಯ ಪ್ರಕಾರ, Galaxy S25 FE ಗಾಗಿ ಹಲವು ಅಧಿಕೃತ ಪರಿಕರಗಳ ಚಿತ್ರಗಳು ಹಾಗೂ ಬೆಲೆಗಳು ಹೊರಬಿದ್ದಿವೆ. ಲೀಕ್ ಆದ ಚಿತ್ರಗಳಲ್ಲಿ ಫೋನ್ ಹಿಂಭಾಗದ ಮೇಲಿನ ಎಡ ಮೂಲೆಯಲ್ಲಿ ಲಂಬವಾಗಿ ಹೊಂದಿಸಲಾದ ಮಾತ್ರೆ-ಆಕಾರದ ಕ್ಯಾಮೆರಾ ಮಾಡ್ಯೂಲ್ ಸ್ಪಷ್ಟವಾಗಿ ಕಾಣುತ್ತದೆ. ಆಕ್ಸೆಸರಿಗಳಲ್ಲಿ, ಕ್ಲಿಯರ್ ಕೇಸ್ EUR 30 (ಸುಮಾರು ₹3,100), ಸಿಲಿಕೋನ್ ಕೇಸ್ EUR 40 (ಸುಮಾರು ₹4,100) ಹಾಗೂ ರಗಡ್ ಕೇಸ್ EUR 49 (ಸುಮಾರು ₹5,000) ದರದಲ್ಲಿ ಲಭ್ಯವಾಗಬಹುದು. ಇದಲ್ಲದೆ, ಸ್ಟ್ಯಾಂಡಿಂಗ್ ಗ್ರಿಪ್ ಕೇಸ್ EUR 55 (ಸುಮಾರು ₹5,600) ಮತ್ತು ಕಿಂಡ್‌ಸೂಟ್ ಕೇಸ್ EUR 60 (ಸುಮಾರು ₹6,100) ಗೆ ಮಾರಾಟವಾಗಲಿದೆ. ಅಧಿಕೃತ ಆಂಟಿ-ರಿಫ್ಲೆಕ್ಟಿಂಗ್ ಫಿಲ್ಮ್ ಬೆಲೆ EUR 30 (ಸುಮಾರು ₹3,100) ಎಂದು ವರದಿಯಾಗಿದೆ.
Samsung Galaxy S25 FE: ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಬೆಲೆ
ಮುಂಬರುವ Galaxy S25 FE ಫೋನಿನ ಹಲವಾರು ವೈಶಿಷ್ಟ್ಯದ ವಿವರಗಳು ಸೋರಿಕೆಯಾಗಿವೆ. ಈ ಫೀನ್ 6.7 ಇಂಚಿನ 120Hz ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆ ನೀಡಲಿದೆ. ಈ ಫೋನ್ Exynos 2400 SoC ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 8GB RAM ಜೊತೆಗೆ ಬರಬಹುದು. ಸಾಫ್ಟ್‌ವೇರ್‌ನಲ್ಲಿ, ಇದು ಆಂಡ್ರಾಯ್ಡ್ 15 ಆಧಾರಿತ One UI 7 ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, Galaxy S25 FE ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್, 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು 8 ಮೆಗಾಪಿಕ್ಸೆಲ್ 3x ಟೆಲಿಫೋಟೋ ಲೆನ್ಸ್ ಸೇರಿವೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಾಗಿ 12 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಒದಗಿಸಲಾಗಿದೆ ಎನ್ನಲಾಗಿದ್ದರೆ, 4,900mAh ಬ್ಯಾಟರಿ ಮತ್ತು ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಇದೆ ಎನ್ನಲಾಗಿದೆ.
Galaxy S25 FE ಫೋನ್ ಯುಎಸ್ ಮಾರುಕಟ್ಟೆಯಲ್ಲಿ 128GB ಸ್ಟೋರೇಜ್ ರೂಪಾಂತರ $649.99 (ಸುಮಾರು ₹57,000) ಮತ್ತು 256GB ರೂಪಾಂತರ $709.99 (ಸುಮಾರು ₹62,300) ದರದಲ್ಲಿ ಬರಬಹುದೆಂದು ತಿಳಿಸಲಾಗಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಮೂಲ 128GB ಮಾದರಿಯ ಬೆಲೆ EUR 789.99 (ಸುಮಾರು ₹81,000) ಇರಬಹುದು. ಆದರೆ ದಕ್ಷಿಣ ಕೊರಿಯಾದಲ್ಲಿ, ಇದು KRW 1 ಮಿಲಿಯನ್ (ಸುಮಾರು ₹63,200) ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ಒಟ್ಟಾರೆ, Samsung Galaxy S25 FE ತನ್ನ ಶ್ರೇಣಿಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ವಿನ್ಯಾಸವನ್ನು ನೀಡುವ ನಿರೀಕ್ಷೆಯಿದೆ. ನಿರೀಕ್ಷಿತ ಅನಾವರಣವು ಕೆಲವೇ ಗಂಟೆಗಳಲ್ಲಿ ನಡೆಯಲಿರುವುದರಿಂದ, ಅಭಿಮಾನಿಗಳು ಈ ಸ್ಮಾರ್ಟ್‌ಫೋನ್‌ಗಾಗಿ ಉತ್ಸುಕರಾಗಿದ್ದಾರೆ ಎನ್ನಬಹುದು. ಹೊಸ Galaxy S25 FE ಫೋನ್ ಆಗಮನಕ್ಕೆ ನೀವು ಕೂಡ ಕಾಯುತ್ತಿದ್ದರೆ ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








