ಭಾರತದಲ್ಲಿ Galaxy S25 FE ಬಿಡುಗಡೆ: ಬೆಲೆ, ಫೀಚರ್ಸ್ ಮತ್ತು ಎಲ್ಲಾ ಮಾಹಿತಿ!
ಟೆಕ್ ದೈತ್ಯ Samsung ತನ್ನ ಬಹುನಿರೀಕ್ಷಿತ Galaxy S25 FE (Fan Edition) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇದೀಗ ಅಧಿಕೃತವಾಗಿ ಬಿಡುಗಡೆ ಮಾಡಿದೆ.! ಕಳೆದ ವಾರವೇ ಭಾರತ ಸೇರಿದಂತೆ ಜಾಗತಿಕವಾಗಿ Galaxy S25 FE ಫೋನ್ ಅನ್ನು ಪರಿಚಯಿಸಲಾಗಿತ್ತು. ಜಾಗತಿಕವಾಗಿ ಈ ಫೋನ್ ಬೆಲೆಯ ಬಗ್ಗೆ ಕಂಪೆನಿ ಮಾಹಿತಿ ನೀಡಿತ್ತು, ಆದರೆ ಇದೀಗ ಭಾರತದಲ್ಲಿ Galaxy S25 FE ಬೆಲೆಯು ಬಹಿರಂಗವಾಗಿದೆ. ಭಾರತೀಯ ಗ್ರಾಹಕರಿಗಾಗಿ ವಿಶೇಷ ಬೆಲೆಗಳು ಮತ್ತು ಆಕರ್ಷಕ ಕೊಡುಗೆಗಳೊಂದಿಗೆ Galaxy S25 FE ಫೋನ್ ಮಾರುಕಟ್ಟೆಗೆ ಬಂದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ!
Galaxy S25 FE: ಪ್ರಮುಖ ವೈಶಿಷ್ಟ್ಯಗಳು
ಹೊಸ Galaxy S25 FE ಫೋನ್ 6.7 ಇಂಚಿನ Full HD+ Dynamic AMOLED 2X ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1,900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು Vision Booster ತಂತ್ರಜ್ಞಾನವನ್ನು ಒಳಗೊಂಡಿದೆ. ಇದರ ಡಿಸ್‌ಪ್ಲೇಗೆ Gorilla Glass Victus+ ರಕ್ಷಣೆ ನೀಡಲಾಗಿದೆ.
ಕಾರ್ಯಕ್ಷಮತೆಗಾಗಿ, Galaxy S25 FE ನಲ್ಲಿ 8GB RAM ಮತ್ತು 512GB ವರೆಗೆ ಜೋಡಿಸಲಾದ Exynos 2400 ಪ್ರೊಸೆಸರ್ ಇದೆ. ಈ ಫೋನ್ ಆಂಡ್ರಾಯ್ಡ್ 16 ಆಧಾರಿತ One UI 8 ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು 7 ವರ್ಷಗಳ ಆಂಡ್ರಾಯ್ಡ್ ಹಾಗೂ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ಪಡೆಯಲಿದೆ.

ಈ Galaxy S25 FE ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50MP ಪ್ರಾಥಮಿಕ ಲೆನ್ಸ್, 8MP ಟೆಲಿಫೋಟೋ ಕ್ಯಾಮೆರಾ ಮತ್ತು 12MP ಅಲ್ಟ್ರಾವೈಡ್ ಸೆನ್ಸರ್. ಸೆಲ್ಫಿಗಾಗಿ 12MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಈ ಫೋನ್ Generative Edit ಸೇರಿದಂತೆ AI-ಆಧಾರಿತ ಫೋಟೋ ಎಡಿಟಿಂಗ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.
ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 4,900mAh ಬ್ಯಾಟರಿ ಹೊಂದಿದ್ದು, ಇದು 45W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಫೋನ್‌ನ ಬಾಳಿಕೆಯನ್ನು ಹೆಚ್ಚಿಸಲು Armor Aluminum ಫ್ರೇಮ್ ಮತ್ತು IP68 ಡಸ್ಟ್ ಹಾಗೂ ವಾಟರ್ ರೆಸಿಸ್ಟೆಂಟ್ ಸೌಲಭ್ಯವನ್ನು ಅಳವಡಿಸಲಾಗಿದೆ. ಇದರ ತೆಳು ವಿನ್ಯಾಸ (7.4mm) ಮತ್ತು 190 ಗ್ರಾಂ ತೂಕವು ಇದನ್ನು ಹಗುರ ಮತ್ತು ಬಳಸಲು ಸುಲಭವಾಗಿಸಿದೆ.
Galaxy S25 FE: ಬೆಲೆ ಮತ್ತು ಲಾಂಚ್ ಕೊಡುಗೆಗಳು
ದೇಶದಲ್ಲಿ Galaxy S25 FE ಮೂರು ವಿಭಿನ್ನ ಮಾದರಿಗಳಲ್ಲಿ ಲಭ್ಯವಿರಲಿದೆ,
8GB + 128GB: ₹59,999
8GB + 256GB: ₹65,999
8GB + 512GB: ₹77,999
Galaxy S25 FE ಫೋನ್‌ಗಳು ಸೆಪ್ಟೆಂಬರ್ 29 ರಿಂದ Samsung India ವೆಬ್‌ಸೈಟ್, ಎಕ್ಸ್‌ಕ್ಲೂಸಿವ್ ಸ್ಯಾಮ್ಸಂಗ್ ಸ್ಟೋರ್‌ಗಳು, ಆಯ್ದ ರಿಟೇಲ್ ಮಳಿಗೆಗಳು ಮತ್ತು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿವೆ. ಈ ಫೋನ್ ಐಸಿಬ್ಲೂ, ಜೆಟ್‌ಬ್ಲಾಕ್, ನೇವಿ ಮತ್ತು ವೈಟ್ ಬಣ್ಣಗಳಲ್ಲಿ ದೊರೆಯಲಿದೆ. ಇನ್ನು ಬಿಡುಗಡೆ ಕೊಡುಗೆಯಾಗಿ, 256GB ಮಾದರಿ ಫೋನ್ ಖರೀದಿಸುವ ಗ್ರಾಹಕರು ಉಚಿತವಾಗಿ 512GB ಅಪ್‌ಗ್ರೇಡ್ ಪಡೆಯಲಿದ್ದಾರೆ. ಇದರ ಜೊತೆಗೆ, ₹5,000 ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು 24 ತಿಂಗಳವರೆಗೆ ನೋ-ಕಾಸ್ಟ್ EMI ಸೌಲಭ್ಯ ಕೂಡ ಲಭ್ಯವಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.


Click it and Unblock the Notifications








