ಯೋಗೇಶ್ ಬ್ರಾರ್ ಅವರಿಂದ Galaxy S25 FE ಫೋನ್ ಬೆಲೆ ಲೀಕ್!
ಟೆಕ್ ದೈತ್ಯ ಸ್ಯಾಮ್‌ಸಂಗ್ ಇತ್ತೀಚೆಗಷ್ಟೇ ತನ್ನ ಹೊಸ 'ಅಫೋರ್ಡಬಲ್ ಫ್ಲ್ಯಾಗ್‌ಶಿಪ್' ಸ್ಮಾರ್ಟ್‌ಫೋನ್ Galaxy S25 FE (ಫ್ಯಾನ್ ಎಡಿಷನ್) ಅನ್ನು ಅನಾವರಣಗೊಳಿಸಿದೆ. ಈ ಹೊಸ ಫೋನ್ ಸೆಪ್ಟೆಂಬರ್ 4, 2025 ರಂದು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆಯಾಗಿದ್ದರೂ, ಭಾರತದಲ್ಲಿ ಅದರ ಬೆಲೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಆದಾಗ್ಯೂ, ಕೆಲವು ಮೂಲಗಳ ಪ್ರಕಾರ, ಇದರ ಬೆಲೆಯು ಹಿಂದಿನ ಮಾದರಿಯಂತೆಯೇ ಇರಲಿದೆ ಎಂದು ಹೇಳಲಾಗಿದೆ.
ಜನಪ್ರಿಯ ಟಿಪ್‌ಸ್ಟಾರ್ ಯೋಗೇಶ್ ಬ್ರಾರ್ ಅವರ ಪ್ರಕಾರ, Galaxy S25 FE ಯ 8GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಆರಂಭಿಕ ಮಾದರಿಯ ಬೆಲೆ ರೂ. 59,999 ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ನಿಜವಾಗಿದ್ದರೆ, ಈ ಫೋನ್ ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ ಬಲವಾದ ಸ್ಪರ್ಧೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ.! ಹಾಗಾದರೆ, ಹೊಸ Galaxy S25 FE ಫೋನ್ ಹೇಗಿದೆ?, ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.
Galaxy S25 FE: ವಿನ್ಯಾಸ, ಕಾರ್ಯಕ್ಷಮತೆ ಮತ್ತು ಬ್ಯಾಟರಿ
Galaxy S25 FE ಸ್ಮಾರ್ಟ್‌ಫೋನ್ 6.7-ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದು ದೃಶ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಪ್ರದರ್ಶಿಸುತ್ತದೆ. ದೀರ್ಘಕಾಲಿಕ ಬಾಳಿಕೆಗಾಗಿ, ಫೋನ್ ಆರ್ಮರ್ ಅಲ್ಯೂಮಿನಿಯಂ ಫ್ರೇಮ್ ಮತ್ತು IP68 ರೇಟಿಂಗ್‌ಗಳನ್ನು ಹೊಂದಿದ್ದು, ನೀರು ಮತ್ತು ಧೂಳು ನಿರೋಧಕವಾಗಿದೆ.
ಕಾರ್ಯಕ್ಷಮತೆಗೆ, ಇದು ಎಕ್ಸಿನೋಸ್ 2400 (4nm) ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಈ ಶಕ್ತಿಯುತ ಚಿಪ್‌ಸೆಟ್ ಗೇಮಿಂಗ್ ಮತ್ತು ಮಲ್ಟಿ-ಟಾಸ್ಕಿಂಗ್‌ಗೆ ಸೂಕ್ತವಾಗಿದೆ. ಬ್ಯಾಟರಿ ವಿಷಯದಲ್ಲಿ, ಇದು 4,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕೇವಲ 30 ನಿಮಿಷಗಳಲ್ಲಿ 65% ವರೆಗೆ ಚಾರ್ಜ್ ಆಗುವ ಭರವಸೆ ನೀಡಲಾಗಿದೆ. ಸ್ಯಾಮ್‌ಸಂಗ್ ಈ ಫೋನ್‌ಗೆ 7 ವರ್ಷಗಳ ಓಎಸ್ ಮತ್ತು ಭದ್ರತಾ ಅಪ್‌ಡೇಟ್‌ಗಳ ಭರವಸೆಯನ್ನು ನೀಡಿರುವುದು ಮತ್ತೊಂದು ಪ್ರಮುಖ ಅಂಶ.

Galaxy S25 FE: ನವೀನ AI ತಂತ್ರಜ್ಞಾನ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳು
Galaxy S25 FE ಯ ಪ್ರಮುಖ ಆಕರ್ಷಣೆಯೆಂದರೆ ಅದರ ಅತ್ಯಾಧುನಿಕ AI ತಂತ್ರಜ್ಞಾನ. ಈ ಫೋನ್ ಗ್ಯಾಲಕ್ಸಿ AI ಮತ್ತು One UI 8 ರೊಂದಿಗೆ ಬರುತ್ತಿದ್ದು, ಸೃಜನಶೀಲತೆ, ಉತ್ಪಾದಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು AIಯನ್ನು ಬಳಸಿಕೊಳ್ಳುತ್ತದೆ. ಗೂಗಲ್‌ನೊಂದಿಗೆ ಸಹಭಾಗಿತ್ವದಲ್ಲಿ, ಇದು ಜೆಮಿನಿ ಲೈವ್, ನೌ ಬಾರ್ ಮತ್ತು ನೌ ಬ್ರೀಫ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಜೆಮಿನಿ ಲೈವ್ ಕ್ಯಾಮರಾ ಮೂಲಕ ಯಾವುದೇ ವಸ್ತುವನ್ನು ಗುರುತಿಸಿ ಅದರ ಬಗ್ಗೆ ಮಾಹಿತಿ ನೀಡಿದರೆ, ಸರ್ಕಲ್ ಟು ಸರ್ಚ್ ಆಟಗಳಲ್ಲಿ ಸಲಹೆಗಳನ್ನು ಹುಡುಕಲು ಸಹಾಯ ಮಾಡುತ್ತದೆ.
ಕ್ಯಾಮರಾ ವಿಭಾಗದಲ್ಲಿ, 50MP ವೈಡ್, 12MP ಅಲ್ಟ್ರಾ-ವೈಡ್, ಮತ್ತು 8MP ಟೆಲಿಫೋಟೋ ಲೆನ್ಸ್‌ನೊಂದಿಗೆ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಬಹುದು. ಜೆನೆರೇಟಿವ್ ಎಡಿಟ್ ಮತ್ತು ಪೋರ್ಟ್ರೇಟ್ ಸ್ಟುಡಿಯೊದಂತಹ ವೈಶಿಷ್ಟ್ಯಗಳು ವೃತ್ತಿಪರ ಸಂಪಾದನೆಗೆ ಅವಕಾಶ ನೀಡುತ್ತವೆ. 12MP ಸೆಲ್ಫಿ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
Galaxy S24 FE vs Galaxy S25 FE: ಒಂದು ಸಣ್ಣ ಹೋಲಿಕೆ
ಹೊಸ Galaxy S25 FE ಮತ್ತು ಅದರ ಹಿಂದಿನ ಮಾದರಿಯಾದ Galaxy S24 FE ಎರಡೂ ಫೋನ್‌ಗಳು ಒಂದು ಬಿಡುಗಡೆಯನ್ನು ಹೊಂದಿರಲಿದೆ ಎಂದು ಟಿಪ್‌ಸ್ಟಾರ್‌ಗಳು ಹೇಳುತ್ತಿದ್ದಾರೆ. ಅದರ ಜೊತೆಗೆ ಈ ಎರಡೂ ಫೋನ್‌ಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳನ್ನು ಸಹ ನೋಡೊಣ.
ಡಿಸ್‌ಪ್ಲೇ: ಎರಡೂ ಮಾದರಿಗಳು 6.7-ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದರೂ, S25 FE ಯಲ್ಲಿನ ಡಿಸ್‌ಪ್ಲೇ ಸುಧಾರಿತ ಗುಣಮಟ್ಟವನ್ನು ಹೊಂದಿದೆ.
ಪ್ರೊಸೆಸರ್: Galaxy S24 FE ಎಕ್ಸಿನೋಸ್ 2300 (ಅಥವಾ ಸ್ನಾಪ್‌ಡ್ರಾಗನ್ 8 ಜನ್ 3) ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತಿತ್ತು, ಆದರೆ Galaxy S25 FE ಹೆಚ್ಚು ಶಕ್ತಿಶಾಲಿ ಮತ್ತು ದಕ್ಷ ಎಕ್ಸಿನೋಸ್ 2400 (4nm) ಚಿಪ್‌ಸೆಟ್ ಅನ್ನು ಬಳಸುತ್ತದೆ
AI ವೈಶಿಷ್ಟ್ಯಗಳು: Galaxy S25 FE ಯ ಪ್ರಮುಖ ಅಪ್‌ಗ್ರೇಡ್ ಅದರ ಗ್ಯಾಲಕ್ಸಿ AI ತಂತ್ರಜ್ಞಾನ. ಇದು ಗೂಗಲ್‌ನೊಂದಿಗೆ ಸಹಭಾಗಿತ್ವದಲ್ಲಿ ಹೊಸ ವೈಶಿಷ್ಟ್ಯಗಳಾದ ಜೆಮಿನಿ ಲೈವ್, ನೌ ಬಾರ್ ಮತ್ತು ನೌ ಬ್ರೀಫ್‌ಗಳನ್ನು ಪರಿಚಯಿಸಿದೆ. ಇದು Galaxy S24 FE ಯಲ್ಲಿ ಲಭ್ಯವಿರಲಿಲ್ಲ.
ಕ್ಯಾಮರಾ: Galaxy S25 FE ಕ್ಯಾಮರಾ ಸೆಟಪ್ Galaxy S24 FE ಗಿಂತ ಉತ್ತಮವಾಗಿದೆ. ಹೊಸ ಮಾದರಿಯು ಪ್ರೊವಿಶುವಲ್ ಎಂಜಿನ್ ಮತ್ತು ಜೆನೆರೇಟಿವ್ ಎಡಿಟ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ, ಇದು ಫೋಟೋ ಎಡಿಟಿಂಗ್ ಮತ್ತು ವೀಡಿಯೋಗೆ ಉತ್ತಮ ಅನುಭವ ನೀಡುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್: Galaxy S25 FE ಫೋನ್ 4,900mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಹಿಂದಿನ ಮಾದರಿಯು ಸ್ವಲ್ಪ ಕಡಿಮೆ ಸಾಮರ್ಥ್ಯದ ಬ್ಯಾಟರಿ ಮತ್ತು ಚಾರ್ಜಿಂಗ್ ಬೆಂಬಲವನ್ನು ಹೊಂದಿತ್ತು.


Click it and Unblock the Notifications








