Home
ಮೊಬೈಲ್

Samsung Galaxy S25: ಸದ್ದಿಲ್ಲದೆ ಮೂರು ಸೊಗಸಾದ ಫೋನ್‌ಗಳ ಸೇಲ್ ಶುರು! ಭರ್ಜರಿ ಆಫರ್‌, ಬೆಲೆ ಎಷ್ಟು?

ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಗ್ಯಾಲಕ್ಸಿ S25 (Samsung Galaxy S25) ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅವುಗಳೇ, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25), ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ (Samsung Galaxy S25+) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಮೊಬೈಲ್‌ಗಳು. ಅಂದಹಾಗೆ, ಇವು ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಬನ್ನಿ, ಈ ಮೂರು ಫೋನ್‌ಗಳ ಬೆಲೆ, ಆಫರ್‌ಗಳನ್ನು ತಿಳಿಯೋಣ.

ಹೊಸ ಮೂರು ಸ್ಮಾರ್ಟ್‌ಫೋನ್‌ಗಳು Samsung.com, ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್ ಅಂಗಡಿಗಳ ಮೂಲಕ ಮುಂಗಡ ಮುಂಗಡ ಬುಕಿಂಗ್‌ಗೆ ಲಭ್ಯವಿದ್ದವು. ಪ್ರಸ್ತುತ, ಈ ಮೂರು ಮೊಬೈಲ್‌ಗಳು ಅಮೆಜಾನ್ ಮೂಲಕ ಮಾರಾಟವಾಗಲಿವೆ. ಫೆಬ್ರವರಿ 3 ರಿಂದ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಮಾತ್ರ ಮಾರಾಟಕ್ಕೆ ಬರಲಿವೆ ಎಂದು ಹೇಳಲಾಗಿತ್ತು. ಆದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಫೆಬ್ರವರಿ 7 ರಂದು ಮಾರಾಟವಾಗಲಿದೆ.

Samsung Galaxy S25: ಮೂರು ಫೋನ್‌ಗಳ ಮಾರಾಟ ಶುರು; ಬೆಲೆ, ಆಫರ್‌ ಏನಿದೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಫೋನ್ ಐಸಿಬ್ಲೂ, ಸಿಲ್ವರ್ ಶ್ಯಾಡೋ, ನೇವಿ ಮತ್ತು ಮಿಂಟ್ ಬಣ್ಣಗಳಲ್ಲಿ ಮಾರಾಟವಾಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಸ್ಮಾರ್ಟ್‌ಫೋನ್ ಸಿಲ್ವರ್ ಶ್ಯಾಡೋ ಮತ್ತು ಬ್ಲೂಬ್ಲಾಕ್, ಕೋರಲ್ರೆಡ್ ಮತ್ತು ಪಿಂಕ್‌ಗೋಲ್ಡ್ ಸೇರಿದಂತೆ ನೇವಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಟೈಟಾನಿಯಂ ಸಿಲ್ವರ್‌ಬ್ಲೂ, ಟೈಟಾನಿಯಂ ಬ್ಲಾಕ್, ಟೈಟಾನಿಯಂ ವೈಟ್‌ಸಿಲ್ವರ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಮಾರಾಟವಾಗಲಿದೆ. ಈ ಮೂರು ಫೋನ್‌ಗಳ ಬೆಲೆ ತಿಳಿಯಲು ಮುಂದೆ ಓದಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬೆಲೆ

12GB RAM + 256GB ಸ್ಟೋರೇಜ್ ಬೆಲೆ = 80,999 ರೂ.
12GB RAM + 512GB ಸ್ಟೋರೇಜ್ ಬೆಲೆ = 92,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಫೋನನ್ನು ಮುಂಗಡ ಬುಕಿಂಗ್ ಮಾಡುವಾಗ ಈ ವಿಷಯ ತಿಳಿದಿರಲಿ. ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪೂರ್ಣ ಪಾವತಿ ಮಾಡಿದರೆ ಬರೋಬ್ಬರಿ 10,000 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ ಇಎಂಐ ಪಾವತಿ ಮೇಲೆ ನಿಮಗೆ 7,000 ರೂ.ಗಳ ಕ್ಯಾಶ್‌ಬ್ಯಾಕ್ ಸಿಗುತ್ತದೆ. ನಿಮ್ಮ ಹಳೆಯ ಫೋನ್‌ ಎಕ್ಸ್‌ಚೇಂಜ್‌ ಮಾಡಿ ಈ ಹೊಸ ಸ್ಯಾಮ್‌ಸಂಗ್ ಫೋನ್ ಖರೀದಿಸಿದರೆ, 11000 ರೂ. ವರೆಗಿನ ಅಪ್‌ಗ್ರೇಡ್ ಬೋನಸ್ ಸಹ ಸಿಗುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಬೆಲೆ

12GB RAM + 256GB ಸ್ಟೋರೇಜ್ ಬೆಲೆ = 99,999 ರೂ.
12GB RAM + 512GB ಸ್ಟೋರೇಜ್ ಬೆಲೆ = 1,11,999 ರೂ.

ನೀವು, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳು ಫೆಬ್ರವರಿ 7 ರಿಂದ ಖರೀದಿಸಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಫೋನನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರು ಬಂಪರ್ ಆಫರ್‌ ಪಡೆಯಬಹುದು. ಕಂಪನಿಯು ಸುಮಾರು 15 ದಿನಗಳವರೆಗೆ ಡಬಲ್ ಸ್ಟೋರೇಜ್ ಅಪ್‌ಗ್ರೇಡ್ ಆಫರ್ ನೀಡುತ್ತಿದೆ. ನೀವು 512GB ಸ್ಟೋರೇಜ್ ಹೊಂದಿರುವ ಮೊಬೈಲ್‌ ಅನ್ನು 256GB ಸ್ಟೋರೇಜ್ ದರದಲ್ಲಿ ಪಡೆಯಬಹುದು. ಅಂದರೆ 512GB ಹೊಂದಿರುವ ಗ್ಯಾಲಕ್ಸಿ S25+ ಮೊಬೈಲ್ 12,000 ರೂ.ಗಳಷ್ಟು ಅಗ್ಗವಾಗಿ ಖರೀದಿಗೆ ಲಭ್ಯವಿದೆ. ಎಚ್‌ಡಿಎಫ್‌ಸಿ ಕಾರ್ಡ್‌ನಲ್ಲಿ ಈ ರಿಯಾಯಿತಿ ಲಭ್ಯವಿದೆ.

Samsung Galaxy S25: ಮೂರು ಫೋನ್‌ಗಳ ಮಾರಾಟ ಶುರು; ಬೆಲೆ, ಆಫರ್‌ ಏನಿದೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಬೆಲೆ

12GB RAM + 256GB ಸ್ಟೋರೇಜ್ ಬೆಲೆ = 1,29,999 ರೂ.
12GB RAM + 512GB ಸ್ಟೋರೇಜ್ ಬೆಲೆ = 1,41,999 ರೂ.
12GB RAM + 1TB ಸ್ಟೋರೇಜ್ ಬೆಲೆ = 1,65,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮೇಲೆಯೂ ಸಖತ್ ಆಫರ್‌ ಲಭ್ಯವಿದೆ. ನೀವು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಸಿದರೆ, ಸಂಪೂರ್ಣ ಪಾವತಿಯ ಮೇಲೆ 8,000 ರೂ. ಮತ್ತು ಇಎಂಐನಲ್ಲಿ 7,000 ರೂ.ಗಳ ರಿಯಾಯಿತಿ ಪಡೆಯಬಹುದು. ಈ ಫೋನ್ ಡಬಲ್ ಸ್ಟೋರೇಜ್ ಅಪ್‌ಗ್ರೇಡ್ ಆಫರ್ ಸಹ ಪಡೆದಿದೆ. ನೀವು 512GB ರೂಪಾಂತರವನ್ನು 12 ಸಾವಿರ ರೂ. ಅಗ್ಗವಾಗಿ ಅಂದರೆ, 256GB ರೂಪಾಂತರದ ಬೆಲೆಯಲ್ಲಿ ಖರೀದಿಸಬಹುದು. ಕಂಪನಿಯು ಈ ಫೋನ್‌ ಖರೀದಿ ಮೇಲೆ 9,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ನೀಡುತ್ತಿದೆ.

Best Mobiles in India

English summary
Samsung Galaxy S25, Galaxy S25 Plus and Galaxy S25 Ultra India sale started in amazon: check price, offers and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+