Samsung Galaxy S25: ಮೂರು ದೈತ್ಯ ಫೋನ್‌ಗಳ ಅಬ್ಬರ ಶುರು! ಬೆಲೆ, ಆಫರ್‌ಗಳೇನು? ಸೇಲ್ ಯಾವಾಗ?
ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S25 (Samsung Galaxy S25) ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25), ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ (Samsung Galaxy S25+) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ಬನ್ನಿ, ಕಂಪನಿಯು ಈ ಮೂರು ಮೊಬೈಲ್‌ಗಳನ್ನು ಯಾವೆಲ್ಲಾ ವಿಶೇಷತೆಗಳೊಂದಿಗೆ ಲಾಚ್ ಮಾಡಿದೆ? ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಮಾರಾಟದ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಫೋನನ್ನು ಐಸಿಬ್ಲೂ, ಸಿಲ್ವರ್ ಶ್ಯಾಡೋ, ನೇವಿ ಮತ್ತು ಮಿಂಟ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮೊಬೈಲ್ ಫೋನ್ ಸಿಲ್ವರ್ ಶ್ಯಾಡೋ ಮತ್ತು ಬ್ಲೂಬ್ಲಾಕ್, ಕೋರಲ್ರೆಡ್ ಮತ್ತು ಪಿಂಕ್‌ಗೋಲ್ಡ್ ಸೇರಿದಂತೆ ನೇವಿ ಬಣ್ಣಗಳಲ್ಲಿ ಮಾರಾಟವಾಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್ ಟೈಟಾನಿಯಂ ಸಿಲ್ವರ್‌ಬ್ಲೂ, ಟೈಟಾನಿಯಂ ಬ್ಲಾಕ್, ಟೈಟಾನಿಯಂ ವೈಟ್‌ಸಿಲ್ವರ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಖದೀದಿಗೆ ಲಭ್ಯವಿದೆ. ಈ ಮೂರು ಫೋನ್‌ಗಳ ಬೆಲೆ ತಿಳಿಯಲು ಮುಂದೆ ಓದಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಬೆಲೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬೆಲೆ
12GB RAM + 256GB ಸ್ಟೋರೇಜ್ ಬೆಲೆ = 80,999 ರೂ.
12GB RAM + 512GB ಸ್ಟೋರೇಜ್ ಬೆಲೆ = 92,999 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಬೆಲೆ
12GB RAM + 256GB ಸ್ಟೋರೇಜ್ ಬೆಲೆ = 99,999 ರೂ.
12GB RAM + 512GB ಸ್ಟೋರೇಜ್ ಬೆಲೆ = 1,11,999 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಬೆಲೆ
12GB RAM + 256GB ಸ್ಟೋರೇಜ್ ಬೆಲೆ = 1,29,999 ರೂ.
12GB RAM + 512GB ಸ್ಟೋರೇಜ್ ಬೆಲೆ = 1,41,999 ರೂ.
12GB RAM + 1TB ಸ್ಟೋರೇಜ್ ಬೆಲೆ = 1,65,999 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಆಫರ್‌ಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ S25, ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಇಂದಿನಿಂದ (ಜನವರಿ 23) ಭಾರತದಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿವೆ. ನೀವು ಫೆಬ್ರವರಿ 7 ರಿಂದ ಈ ಫೋನ್‌ಗಳನ್ನು ಖರೀದಿಸಬಹುದು.

10,000 ರೂ.ಗಳ ಕ್ಯಾಶ್‌ಬ್ಯಾಕ್ ಸಿಗುತ್ತೆ!
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮೊಬೈಲ್ ಅನ್ನು ಮುಂಗಡ ಬುಕಿಂಗ್ ಮಾಡುವಾಗ ಈ ವಿಷಯ ತಿಳಿದಿರಲಿ. ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪೂರ್ಣ ಪಾವತಿ ಮಾಡಿದರೆ ಬರೋಬ್ಬರಿ 10,000 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಹಾಗೆಯೇ ಇಎಂಐ ಪಾವತಿ ಮೇಲೆ ನಿಮಗೆ 7,000 ರೂ.ಗಳ ಕ್ಯಾಶ್‌ಬ್ಯಾಕ್ ಸಿಗುತ್ತದೆ. ನಿಮ್ಮ ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡಿ ಈ ಹೊಸ ಸ್ಯಾಮ್‌ಸಂಗ್ ಫೋನ್ ಖರೀದಿಸಿದರೆ, 11000 ರೂ. ವರೆಗಿನ ಅಪ್‌ಗ್ರೇಡ್ ಬೋನಸ್ ಸಹ ಸಿಗುತ್ತದೆ.
12,000 ರೂ.ಗಳಷ್ಟು ಅಗ್ಗವಾಗಿ ಖರೀದಿಸಿಬಹುದು
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಫೋನನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರು ಬಂಪರ್ ಆಫರ್ ಪಡೆಯಬಹುದು. ಕಂಪನಿಯು ಸುಮಾರು 15 ದಿನಗಳವರೆಗೆ ಡಬಲ್ ಸ್ಟೋರೇಜ್ ಅಪ್‌ಗ್ರೇಡ್ ಆಫರ್ ನೀಡುತ್ತಿದೆ. ನೀವು 512GB ಸ್ಟೋರೇಜ್ ಹೊಂದಿರುವ ಮೊಬೈಲ್ ಅನ್ನು 256GB ಸ್ಟೋರೇಜ್ ದರದಲ್ಲಿ ಪಡೆಯಬಹುದು. ಅಂದರೆ 512GB ಹೊಂದಿರುವ ಗ್ಯಾಲಕ್ಸಿ S25+ ಮೊಬೈಲ್ 12,000 ರೂ.ಗಳಷ್ಟು ಅಗ್ಗವಾಗಿ ಖರೀದಿಗೆ ಲಭ್ಯವಿದೆ. ಎಚ್‌ಡಿಎಫ್‌ಸಿ ಕಾರ್ಡ್‌ನಲ್ಲಿ ಈ ರಿಯಾಯಿತಿ ಲಭ್ಯವಿದೆ.
8,000 + 7,000 ರೂ.ಗಳ ಭಾರೀ ರಿಯಾಯಿತಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮೇಲೆಯೂ ಸಖತ್ ಆಫರ್ ಲಭ್ಯವಿದೆ. ನೀವು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಸಿದರೆ, ಸಂಪೂರ್ಣ ಪಾವತಿಯ ಮೇಲೆ 8,000 ರೂ. ಮತ್ತು ಇಎಂಐನಲ್ಲಿ 7,000 ರೂ.ಗಳ ರಿಯಾಯಿತಿ ಪಡೆಯಬಹುದು. ಈ ಫೋನ್ ಡಬಲ್ ಸ್ಟೋರೇಜ್ ಅಪ್‌ಗ್ರೇಡ್ ಆಫರ್ ಸಹ ಪಡೆದಿದೆ. ನೀವು 512GB ರೂಪಾಂತರವನ್ನು 12 ಸಾವಿರ ರೂ. ಅಗ್ಗವಾಗಿ ಅಂದರೆ, 256GB ರೂಪಾಂತರದ ಬೆಲೆಯಲ್ಲಿ ಖರೀದಿಸಬಹುದು. ಕಂಪನಿಯು ಈ ಫೋನ್ ಖರೀದಿ ಮೇಲೆ 9,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ನೀಡುತ್ತಿದೆ.
ಕಂಪನಿಯು Samsung Galaxy Watch7, Samsung Watch Ultra ಅಥವಾ Samsung Galaxy Buds3 ನೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೆ, 18000 ರೂ. ಹೆಚ್ಚುವರಿ ರಿಯಾಯಿತಿ ನೀಡುತ್ತದೆ.


Click it and Unblock the Notifications








