Home
ಮೊಬೈಲ್

Samsung: ಬರಲಿವೆ ನಾಲ್ಕು ದೈತ್ಯ ಫೋನ್; ಡಿಸೈನ್‌, ಫೀಚರ್ಸ್‌ ಎಲ್ಲವೂ ಸೂಪರ್.. ಯಾವಾಗ ಲಾಂಚ್?

ಭಾರತದಲ್ಲಿ ಮತ್ತೆ ಸ್ಯಾಮ್‌ಸಂಗ್‌ ಅಬ್ಬರ ಶುರು. ಒಂದೇ ದಿನ ಮೂರು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ. ಹೌದು, ಸ್ಯಾಮ್‌ಸಂಗ್ ಕಂಪನಿಯು ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25) ಸರಣಿ ಬಿಡುಗಡೆಗೆ ಸಜ್ಜಾಗಿದೆ. ಇದು Samsung Galaxy S24 ಸರಣಿಯ ಮುಂದುವರಿದ ಭಾಗವಾಗಿದೆ. ಈ ಮಧ್ಯೆ, ಮುಂಬರುವ ಹೊಸ ಫೋನ್‌ಗಳ ವಿನ್ಯಾಸ, ಬಣ್ಣ ಮತ್ತು ಪ್ರೊಸೆಸರ್‌ ಮಾಹಿತಿ ಬಹಿರಂಗವಾಗಿತ್ತು. ಇದೀಗ, ಮುಂಬರುವ ಗ್ಯಾಲಕ್ಸಿ ಅನ್ಪ್ಯಾಕ್ಡ್ (Galaxy Unpacked 2025) ಈವೆಂಟ್‌ನ ದಿನಾಂಕವೂ ಸೋರಿಕೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S25 ಸರಣಿಯನ್ನು 2025ರ ಜನವರಿಯಲ್ಲಿ ಬಿಡುಗಡೆಯಾಗಬಹುದು. ಹೊಸ ಮೊಬೈಲ್‌ಗಳು ಕಳೆದ ಬಾರಿಗಿಂತ ಬೇರೆ ದಿನಾಂಕದಂದು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಕಂಪನಿಯು ದಕ್ಷಿಣ ಕೊರಿಯಾಕ್ಕಿಂತ ಮೊದಲೇ, ಜಾಗತಿಕ ಮಾರುಕಟ್ಟೆಗಳಲ್ಲಿ ಗ್ಯಾಲಕ್ಸಿ S25 ಸರಣಿಯನ್ನು ರಿಲೀಸ್ ಮಾಡುವ ಸಾಧ್ಯತೆಯಿದೆ. ಮುಂಬರುವ ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರಲಿವೆ. ಜೊತೆಗೆ, 200 ಮೆಗಾಪಿಕ್ಸೆಲ್ ಕ್ಯಾಮೆರಾ, 6.17 ಇಂಚಿನ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಬರ್ತಿವೆ 4 Samsung ಫೋನ್; ಡಿಸೈನ್‌, ಫೀಚರ್ಸ್‌ ಎಲ್ಲವೂ ಸೂಪರ್.. ಯಾವಾಗ ಲಾಂಚ್‌?

ಗ್ಯಾಲಕ್ಸಿ S25 ಸರಣಿ ಬಿಡುಗಡೆ ದಿನಾಂಕ (ನಿರೀಕ್ಷಿತ)

ವರದಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯು ಜನವರಿ 23 ರಂದು ಬಿಡುಗಡೆಯಾಗಲಿದೆ. ಟಿಪ್‌ಸ್ಟರ್ ಪ್ರಕಾರ, ಜನವರಿ 22 ರಂದು ಹೊಸ ಸರಣಿ ಲಾಂಚ್ ಆಗಲಿದೆ. ಕ್ಯಾಲಿಫೋರ್ನಿಯಾದಲ್ಲಿ ಜಾಗತಿಕ ಬಿಡುಗಡೆ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಈ ಹಿಂದೆ, ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಗ್ಯಾಲಕ್ಸಿ S24 ಸರಣಿಯ ಬಿಡುಗಡೆ ಸಮಾರಂಭ ನಡೆದಿತ್ತು. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗ್ಯಾಲಕ್ಸಿ S23 ಸರಣಿಯ ಈವೆಂಟ್ ಜರುಗಿತ್ತು.

ಗ್ಯಾಲಕ್ಸಿ S25 ಸರಣಿಯ ಫೋನ್‌ಗಳು

ಕಂಪನಿಯು ತನ್ನ ಹೊಸ ಗ್ಯಾಲಕ್ಸಿ S25 ಸರಣಿಯಲ್ಲಿ ಮೂರು ಮೊಬೈಲ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇವು Samsung Galaxy S25, Samsung Galaxy S25 Plus ಮತ್ತು Samsung Galaxy S25 Ultra ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ವರದಿಯ ಪ್ರಕಾರ, Samsung Galaxy S25 Slim Edition ಸಹ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕಂಪನಿಯು ಜನವರಿ 5 ರಿಂದ ಮುಂಗಡ ಬುಕಿಂಗ್‌ಗೆ ಅವಕಾಶ ಕಲ್ಪಿಸಲಿದೆ.

ಗ್ಯಾಲಕ್ಸಿ S25 ಸರಣಿಯ ಬಣ್ಣಗಳು (ನಿರೀಕ್ಷಿತ)

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಗ್ಯಾಲಕ್ಸಿ S25+ ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಸ್ಪಾರ್ಕ್ಲಿಂಗ್ ಬ್ಲೂ, ಸ್ಪಾರ್ಕ್ಲಿಂಗ್ ಗ್ರೀನ್, ಪಿಂಕ್ ಗೋಲ್ಡ್, ಕೋರಲ್ ರೆಡ್ ಮತ್ತು ಬ್ಲೂ ಅಥವಾ ಬ್ಲಾಕ್ ಸೇರಿವೆ. ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಟೈಟಾನಿಯಂ ಗ್ರೇ, ಟೈಟಾನಿಯಂ ಸಿಲ್ವರ್, ಟೈಟಾನಿಯಂ ಬ್ಲೂ ಮತ್ತು ಟೈಟಾನಿಯಂ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನ್ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮೊಬೈಲ್ 6.17 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಗ್ಯಾಲಕ್ಸಿ S25 ಪ್ಲಸ್ ಫೋನ್ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿರಬಹುದು. ಗ್ಯಾಲಕ್ಸಿ S25 ಅಲ್ಟ್ರಾ ಫೋನಿನಲ್ಲಿ 6.9 ಇಂಚಿನ ಡಿಸ್ಪ್ಲೇ ಇರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S25, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್‌ ಅನ್ನು ಬಿಡುಗಡೆ ಮಾಡಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಮೊಬೈಲ್‌ಗಳು ಆಂಡ್ರಾಯ್ಡ್‌ 15 ಆಧಾರಿತ ಒನ್‌ ಯುಐ 7 ನಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ.

ಕ್ಯಾಮೆರಾ ಸೆಟಪ್

ಮುಂಬರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಆದರೆ, ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್‌ನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ, 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇರಲಿದೆ.

Best Mobiles in India

English summary
Samsung Galaxy S25 series india launch date leaked: know design, specs and details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+