Home
ಮೊಬೈಲ್

Samsung Galaxy S25: ನಾಳೆ 3 ಹೊಸ ಫೋನ್ ಬಿಡುಗಡೆ; ಲೈವ್ ವೀಕ್ಷಣೆ, ಬೆಲೆ, ವಿಶೇಷತೆಗಳೇನು?

ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25) ಸರಣಿಯು ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿಯ ನಾಳೆ (ಜನವರಿ 22) ಮೂರು ಸೊಗಸಾದ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಹೌದು, ಈ ಸರಣಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25), ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ (Samsung Galaxy S25+) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಫೋನ್‌ಗಳನ್ನು ಲಾಂಚ್ ಮಾಡಲಾಗುವುದು. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯು ಆಫಲ್‌ ಐಫೋನ್‌ಗೆ (Apple iPhone) ಭಾರೀ ಪೈಪೋಟಿ ನೀಡುತ್ತದೆ. ಹೀಗಾಗಿ ಇಡೀ ಟೆಕ್ ಜಗತ್ತಿನ ಕಣ್ಣುಗಳು ಈ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ (Galaxy Unpacked Event 2025) ಮೇಲೆ ನೆಟ್ಟಿದೆ. ಈ ಸಮಾರಂಭ ನಾಳೆ (ಜನವರಿ 22, ಭಾರತೀಯ ಕಾಲಮಾನ ರಾತ್ರಿ 11.30) ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ. ನೀವು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಸೇರಿದಂತೆ ಕಂಪನಿಯ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಈ ಕೆಳಗಿನ ಲಿಂಕ್‌ ಮೂಲಕ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ವೀಕ್ಷಿಸಬಹುದು.

Samsung Galaxy S25: ನಾಳೆ 3 ಹೊಸ ಫೋನ್ ಬಿಡುಗಡೆ; ಲೈವ್ ವೀಕ್ಷಣೆ, ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸ್ಮಾರ್ಟ್‌ಫೋನ್ 6.2 ಇಂಚಿನ ಡಿಸ್ಪ್ಲೇ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್ 6.86 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್‌ಗಳು QHD+ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿರುವ ಸಾಧ್ಯತೆಯಿದೆ.

ಪ್ರೊಸೆಸರ್ ಸಾಮರ್ಥ್ಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ. OnePlus 13, Xiaomi 15, iQOO 13 ಮತ್ತು Realme GT 7 Pro ಸ್ಮಾರ್ಟ್‌ಫೋನ್‌ಗಳಲ್ಲಿ ಈ ಪ್ರೊಸೆಸರ್ ಲಭ್ಯವಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 + ಸ್ಮಾರ್ಟ್‌ಫೋನ್‌ಗ Exynos 2500 ಪ್ರೊಸೆಸರ್ ಹೊಂದಿದುವ ನಿರೀಕ್ಷೆಯಿದೆ.

ಸ್ಟೋರೇಜ್ ಆಯ್ಕೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಮೂರು ಫೋನ್‌ಗಳು 12GB RAM ಮತ್ತು 16GB RAM ಹೊಂದಿರುತ್ತವೆ. ಮೂಲ ರೂಪಾಂತರವು 128GB ಸ್ಟೋರೇಜ್ ಮತ್ತು ಟಾಪ್ ವೇರಿಯಂಟ್ 1 TB ಸ್ಟೋರೇಜ್ ಆಯ್ಕೆ ಹೊಂದಿರುವ ಸಾಧ್ಯತೆಯಿದೆ.

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಹೊಂದಿರಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನ್ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್, 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಮತ್ತು ಟೆಲಿಫೋಟೋ ಕ್ಯಾಮೆರಾ ಹೊಂದಿರುತ್ತದೆ. ಹಾಗೆಯೇ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನ್ 5,500mAh ಬ್ಯಾಟರಿ ಹೊಂದಿರುತ್ತದೆ. ಇದು ಸಿಲಿಕಾನ್ ಕಾರ್ಬನ್ ಬ್ಯಾಟರಿ ಆಗಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 45W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

Samsung Galaxy S25: ನಾಳೆ 3 ಹೊಸ ಫೋನ್ ಬಿಡುಗಡೆ; ಲೈವ್ ವೀಕ್ಷಣೆ, ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಬೆಲೆ (ನಿರೀಕ್ಷಿತ)

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬೆಲೆ

8GB RAM + 256GB ಸ್ಟೋರೇಜ್ ಬೆಲೆ = 60,000 ರೂ.
12GB RAM + 256GB ಸ್ಟೋರೇಜ್ ಬೆಲೆ = 68,800 ರೂ.

ಈ ಸರಣಿಯ ಮೂಲ ರೂಪಾಂತರ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಫೋನ್ 12GB RAM ಹೊಂದಿರಲಿದೆ. ಈ ಫೋನಿನ ಆರಂಭಿಕ ಬೆಲೆ 80 ಸಾವಿರ ರೂ. ಇರುವ ಸಾಧ್ಯತೆಯಿದೆ. ಈ ಗ್ಯಾಲಕ್ಸಿ S25 ಫೋನ್ ಫೋನಿನ ಟಾಪ್ ವೇರಿಯಂಟ್ ಬೆಲೆ ಸುಮಾರು 90 ಸಾವಿರ ರೂ. ಇರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಬೆಲೆ

12GB RAM + 256GB ಸ್ಟೋರೇಜ್ ಬೆಲೆ = 84,250 ರೂ.
12GB RAM + 512GB ಸ್ಟೋರೇಜ್ ಬೆಲೆ = 94,350 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಸ್ಮಾರ್ಟ್‌ಫೋನ್ ಸಹ 12GB RAM ನೊಂದಿಗೆ ಬಿಡುಗಡೆಯಾಗಲಿದೆ. ಫೋನಿನ 256GB ಸ್ಟೋರೇಜ್ ರೂಪಾಂತರದ ಬೆಲೆಯು ಸುಮಾರು 90 ಸಾವಿರ ರೂ. ಎಂದು ಹೇಳಲಾಗುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಫೋನಿನ 512GB ಸ್ಟೋರೇಜ್ ರೂಪಾಂತರದ ಬೆಲೆ 1 ಲಕ್ಷ ರೂ. ಇರುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಬೆಲೆ

12GB RAM + 256GB ಸ್ಟೋರೇಜ್ ಬೆಲೆ = 1,09,500 ರೂ.
12GB RAM + 512GB ಸ್ಟೋರೇಜ್ ಬೆಲೆ = 1,19,650 ರೂ.
16GB RAM + 1TB ಸ್ಟೋರೇಜ್ ಬೆಲೆ = 1,39,890 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನನ್ನು 1 ಲಕ್ಷ ರೂ.ಗಿಂತ ಹೆಚ್ಚು ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದು. ಈ ಫೋನನ್ನು 12GB RAM ಮತ್ತು 16GB RAM ನೊಂದಿಗೆ ಪರಿಚಯಿಸಲಾಗುವುದು. ಇದು 1 TB ಸ್ಟೋರೇಜ್‌ ಆಯ್ಕೆ ಹೊಂದಿರುತ್ತದೆ. ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನಿನ ಟಾಪ್ ವೇರಿಯಂಟ್ 1.5 ಲಕ್ಷ ರೂ. ಬೆಲೆ ಹೊಂದಿರಲಿದೆ.

Best Mobiles in India

English summary
samsung galaxy s25 series launch in india tommorrow: How to Watch it Live? What to Expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+