Home
ಮೊಬೈಲ್

Samsung Galaxy S25 Ultra ವಿನ್ಯಾಸ್ ಲೀಕ್! 200MP ಕ್ಯಾಮೆರಾ.. ದೊಡ್ಡ ಡಿಸ್ಪ್ಲೇ ಖಚಿತ; ಲಾಂಚ್ ಯಾವಾಗ?

ಟೆಕ್ ದೈತ್ಯ ಸ್ಯಾಮ್‌ಸಂಗ್ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ನೀಡಲು ಸಜ್ಜಾಗಿದೆ. 2025ರ ಆರಂಭದಲ್ಲಿ ಹೊಸ ಮೊಬೈಲ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೌದು, ಇಡೀ ಟೆಕ್ ಜಗತ್ತು ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಸ್ಮಾರ್ಟ್‌ಫೋನ್‌ಗಾಗಿ ಕಾಯುತ್ತಿದೆ. ಇದು ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ Samsung Galaxy S24 Ultra ಫೋನಿನ ಉತ್ತರಾಧಿಕಾರಿಯಾಗಿರಲಿದೆ. ಈಗಾಗಲೇ ಮುಂಬರು ಫೋನಿನ ಕೆಲವು ಪ್ರಮುಖ ಮಾಹಿತಿ ಸೋರಿಕೆಯಾಗಿದೆ. ಬನ್ನಿ, ಈ ಹೊಸ ಮೊಬೈಲ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ತಿಳಿಯೋಣ.

ಕಂಪನಿಯು ಆರಂಭದಲ್ಲಿ ಜನವರಿಯಲ್ಲಿ ತನ್ನ ಗ್ಯಾಲಕ್ಸಿ S25 (Samsung Galaxy S25) ಸರಣಿಯನ್ನು ಬಿಡುಗಡೆ ಮಾಡಲಿದೆ. ಮುಂಬರುವ ಸರಣಿಯ ವಿನ್ಯಾಸ, ಕ್ಯಾಮೆರಾ ಸೆಟಪ್ ಅನ್ನು ಬಹಿರಂಗಪಡಿಸಲಾಗಿದೆ. ಈ ಪೈಕಿ ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್ ಅನೇಕ ಎಐ (ಕೃತಕ ಬುದ್ಧಿಮತ್ತೆ) ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಟಿಪ್‌ಸ್ಟಾರ್ ತನ್ನ ಎಕ್ಸ್‌ ಖಾತೆಯಲ್ಲಿ ಫೋನಿನ ವಿನ್ಯಾಸ ಮತ್ತು ಬಣ್ಣಗಳ ಆಯ್ಕೆಯನ್ನು ಹಂಚಿಕೊಂಡಿದೆ. ಈ ಫೋನ್ ಹೊಸ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರುತ್ತದೆ.

ಬರ್ತಿವೆ 3 ದೈತ್ಯ Samsung ಫೋನ್; 200MP ಕ್ಯಾಮೆರಾ, ದೊಡ್ಡ ಡಿಸ್ಪ್ಲೇ.. ಯಾವಾಗ?

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಫೋನ್‌ಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯಲ್ಲಿ ಮೂರು ಫೋನ್‌ಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಇವು Samsung Galaxy S25, Samsung Galaxy S25 Plus ಮತ್ತು Samsung Galaxy S25 Ultra ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕಡಲಿವೆ.

ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯ

ವರದಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಇದು ಟೈಟಾನಿಯಂ ಗ್ರೇ, ಟೈಟಾನಿಯಂ ಸಿಲ್ವರ್, ಟೈಟಾನಿಯಂ ಬ್ಲೂ ಮತ್ತು ಟೈಟಾನಿಯಂ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಈ ಮೊಬೈಲ್‌ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದೆ. ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ.

ಫೋನಿನಲ್ಲಿವೆ ಹಲವು ಎಐ ಫೀಚರ್ಸ್‌

ಮಾಹಿತಿಯ ಪ್ರಕಾರ, ಮುಂಬರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನ್ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಫೋನಿನಲ್ಲಿ ಹಲವು ಎಐ (ಗ್ಯಾಲಕ್ಸಿ ಎಐ) ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷಿಯಿದೆ. ಜೊತೆಗೆ, ಈ ಸ್ಮಾರ್ಟ್‌ಫೋನ್ ಎಸ್ ಪೆನ್ ಹೊಂದಿರುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ವೈಶಿಷ್ಟ್ಯಗಳು (ನಿರೀಕ್ಷೆ)

ಡಿಸ್ಪ್ಲೇ ವಿವರ

ಮಾಹಿತಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ 6.86 ಇಂಚಿನ ದೊಡ್ಡ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಈ ಹಿಂದೆ ಬಿಡುಗಡೆ ಮಾಡಿರುವ ಫೋನ್‌ಗಳಿಗಿಂತ ತೆಳುವಾದ ಬೆಜೆಲ್‌ಗಳೊಂದಿಗೆ ಫೋನನ್ನು ಪರಿಚಯಿಸುವ ನಿರೀಕ್ಷೆಯಿದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನ್ ಹೊಸ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವುದು ಖಚಿತವಾಗಿದೆ. ಫೋನಿನಲ್ಲಿ 12GB RAM ಲಭ್ಯವಿರಲಿದೆ.

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. 3X ಝೂಮಿಂಗ್ ಸಾಮರ್ಥ್ಯದೊಂದಿಗೆ 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 5X ಝೂಮಿಂಗ್ ಸಾಮರ್ಥ್ಯದೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಸಹ ಹೊಂದಿರುವ ಸಾಧ್ಯತೆಯಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ.

Best Mobiles in India

English summary
Samsung Galaxy S25 Ultra design leaked: know details. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನಿನ ಡಿಸೈನ್ ಮತ್ತು ಕಲರ್ ಸೋರಿಕೆಯಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+