ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE ಭಾರತದಲ್ಲಿ ಲಾಂಚ್: ಬೆಲೆ ಮತ್ತು ಫೀಚರ್ಸ್ ಬಗ್ಗೆ ಇಲ್ಲಿದೆ ಅಪ್‌ಡೇಟ್!
ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ 'ಗ್ಯಾಲಕ್ಸಿ S26 FE' ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಸೆಪ್ಟೆಂಬರ್ 18 ರಿಂದ ಸೇಲ್‌ಗೆ ತರಲು ಸಜ್ಜಾಗಿದೆ. ಈಗಾಗಲೇ ಆಗಸ್ಟ್ 28 ರಿಂದ ಅಮೆಜಾನ್ ಇಂಡಿಯಾದಲ್ಲಿ ಇದರ ಮೈಕ್ರೋಸೈಟ್ ಲೈವ್ ಆಗಿದ್ದು, ಸ್ಯಾಮ್‌ಸಂಗ್ ಅಧಿಕೃತ ವೆಬ್‌ಸೈಟ್‌ನ ರಜಿಸ್ಟ್ರೇಶನ್ ಪೇಜ್‌ನಲ್ಲೂ ಸೇಲ್ ದಿನಾಂಕ ಖಚಿತವಾಗಿದೆ. ಆದರೆ, ಕಂಪನಿ ಇನ್ನೂ ಬೆಲೆಯನ್ನು ಬಹಿರಂಗಪಡಿಸಿಲ್ಲ. ಗ್ರಾಹಕರು ಸದ್ಯ ಇದರ ಭಾರತದ ವೇರಿಯೆಂಟ್‌ಗಳು, ಆಫರ್‌ಗಳು ಮತ್ತು ಫೈನಲ್ ಬೆಲೆ ತಿಳಿದುಕೊಳ್ಳಲು ಕಾತರರಾಗಿದ್ದಾರೆ. ಫೋನ್ ಲಾಂಚ್ ಮಾಹಿತಿ ಮತ್ತು ಅಲರ್ಟ್‌ಗಳನ್ನು ತಕ್ಷಣ ಪಡೆಯಲು ಅಮೆಜಾನ್‌ನಲ್ಲಿ 'Notify-me' ಆಯ್ಕೆ ಮಾಡಿಕೊಳ್ಳಬಹುದು.
ಭಾರತದ ಲಿಸ್ಟಿಂಗ್‌ನಲ್ಲಿ ಫೋನ್‌ನ ಹಲವು ಪ್ರಮುಖ ಫೀಚರ್‌ಗಳು ಈಗಾಗಲೇ ಬಹಿರಂಗವಾಗಿವೆ. ಈ ಫೋನ್ 8GB RAM ನೊಂದಿಗೆ 128GB, 256GB ಹಾಗೂ 512GB ಸ್ಟೋರೇಜ್ ಆಯ್ಕೆಗಳಲ್ಲಿ ಸಿಗಲಿದೆ. ಪಿಸ್ತಾಶಿಯೋ, ಗ್ರ್ಯಾಫೈಟ್ ಮತ್ತು ಬ್ಲೂಬೆರ್ರಿ ಕಲರ್‌ಗಳಲ್ಲಿ ಬರಲಿರುವ ಈ ಡಿವೈಸ್‌ನಲ್ಲಿ IP68 ರೇಟಿಂಗ್ ಮತ್ತು ಎಕ್ಸಿನೋಸ್ 2500 ಪ್ರೊಸೆಸರ್ ಇರುವುದು ಖಚಿತವಾಗಿದೆ. ನೆಟ್‌ವರ್ಕ್ ವಿಷಯಕ್ಕೆ ಬಂದರೆ, ಜಿಯೋ ಮತ್ತು ಏರ್‌ಟೆಲ್ ಬೆಂಬಲಿಸುವ n3, n28, n77 ಹಾಗೂ n78 5G ಬ್ಯಾಂಡ್‌ಗಳನ್ನು ನೀಡಲಾಗಿದೆ. ಮಾದರಿ ಸಂಖ್ಯೆ SM-S741B/DS ಗಾಗಿ ಸ್ಯಾಮ್‌ಸಂಗ್ SAR ಪೇಜ್ ಸಹ ಲೈವ್ ಆಗಿದೆ. ಸ್ಯಾಮ್‌ಸಂಗ್‌ನ ಪ್ರಮುಖ S26 ಸರಣಿಯಂತೆಯೇ ಈ FE ಮಾಡೆಲ್ ಜೊತೆಗೂ ಬಾಕ್ಸ್‌ನಲ್ಲಿ ಚಾರ್ಜಿಂಗ್ ಅಡಾಪ್ಟರ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಗ್ಯಾಲಕ್ಸಿ S26 FE ಭಾರತದ ಸೇಲ್ ಮತ್ತು ಅಮೆಜಾನ್ ಮೈಕ್ರೋಸೈಟ್
ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಪ್ರಕಾರ, ಸೆಪ್ಟೆಂಬರ್ 18 ರಿಂದ ಸೇಲ್ ಶುರುವಾಗಲಿದ್ದು, ಆಗಸ್ಟ್ 27 ರಿಂದ ಸೆಪ್ಟೆಂಬರ್ 17 ರವರೆಗೆ ರಿಜಿಸ್ಟ್ರೇಶನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಮೆಜಾನ್ ಮೈಕ್ರೋಸೈಟ್‌ನಲ್ಲಿ ಫೋನ್‌ನ ಫೀಚರ್‌ಗಳು ಮತ್ತು 'Notify-me' ಆಯ್ಕೆ ನೀಡಲಾಗಿದೆಯಾದರೂ, ಸೇಲ್ ಪ್ರಾರಂಭವಾಗುವ ನಿಖರ ಸಮಯವನ್ನು ನೀಡಲಾಗಿಲ್ಲ. ಪ್ರಮುಖ ನಗರಗಳ ಗ್ರಾಹಕರಿಗೆ ಸೇಲ್ ಆರಂಭವಾದ ಒಂದೆರಡು ದಿನಗಳಲ್ಲಿ ಅಥವಾ ಅದೇ ದಿನವೇ ಡೆಲಿವರಿಯಾಗುವ ಸಾಧ್ಯತೆಯಿದೆ.
ಗ್ಯಾಲಕ್ಸಿ S26 FE ಬೆಲೆ, ವೇರಿಯೆಂಟ್ಸ್ ಮತ್ತು ಬ್ಯಾಂಕ್ ಆಫರ್‌ಗಳು
ಭಾರತದಲ್ಲಿ ಈ ಫೋನ್‌ನ ಅಧಿಕೃತ ಬೆಲೆಯನ್ನು ಕಂಪನಿ ಇನ್ನೂ ಗುಟ್ಟಾಗಿಟ್ಟಿದೆ. ಯುಎಸ್ (US) ಮಾರುಕಟ್ಟೆಯಲ್ಲಿ 8GB/128GB ಮಾಡೆಲ್‌ಗೆ $699 ಹಾಗೂ 8GB/256GB ಆವೃತ್ತಿಗೆ $799 ನಿಗದಿಪಡಿಸಲಾಗಿದೆ. ಭಾರತದಲ್ಲಿ ಅಮೆಜಾನ್ ಸೇಲ್ ವೇಳೆ HDFC ಅಥವಾ SBI ಕಾರ್ಡ್‌ಗಳ ಮೇಲೆ ಶೇಕಡಾ 10 ರಷ್ಟು ಇನ್‌ಸ್ಟೆಂಟ್ ಡಿಸ್ಕೌಂಟ್ ಮತ್ತು ನೋ-ಕಾಸ್ಟ್ EMI ಆಫರ್‌ಗಳು ಸಿಗುವ ಸಾಧ್ಯತೆಯಿದೆ. ಸ್ಯಾಮ್‌ಸಂಗ್ ಎಕ್ಸ್‌ಚೇಂಜ್ ಆಫರ್ ಬ್ಯಾನರ್ ಲೈವ್ ಆಗಿದೆಯಾದರೂ, ಉಚಿತ ಗಿಫ್ಟ್ ಅಥವಾ ಮೆಮೊರಿ ಅಪ್‌ಗ್ರೇಡ್ ಆಫರ್‌ಗಳ ಬಗ್ಗೆ ಕಂಪನಿ ಇನ್ನೂ ಮಾಹಿತಿಯನ್ನ ನೀಡಬೇಕಿದೆ.
ಭಾರತದಲ್ಲಿ ಗ್ಯಾಲಕ್ಸಿ S26 FE ನ ಪ್ರಮುಖ ಫೀಚರ್‌ಗಳು
ಭಾರತದ ವೇರಿಯೆಂಟ್ ಫೀಚರ್‌ಗಳನ್ನು ಗಮನಿಸುವುದಾದರೆ, ಇದರಲ್ಲಿ 6.7-ಇಂಚಿನ FHD+ ಡೈನಾಮಿಕ್ AMOLED 2X ಡಿಸ್‌ಪ್ಲೇ ನೀಡಲಾಗಿದೆ. ಫೋನ್‌ನ ಹಿಂಭಾಗದಲ್ಲಿ 50MP ಪ್ರೈಮರಿ, 12MP ಅಲ್ಟ್ರಾ-ವೈಡ್ ಹಾಗೂ 3x ಆಪ್ಟಿಕಲ್ ಝೂಮ್ ಹೊಂದಿರುವ 8MP ಟೆಲಿಫೋಟೋ ಲೆನ್ಸ್ ನೀಡಲಾಗಿದೆ. ಸೆಲ್ಫಿಗಾಗಿ 12MP ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 45W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುವ 4,900mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ವಿಶೇಷವೆಂದರೆ, ಸ್ಯಾಮ್‌ಸಂಗ್ ಈ ಫೋನ್‌ಗೆ ಭರ್ಜರಿ 7 ವರ್ಷಗಳ ಆಂಡ್ರಾಯ್ಡ್ ಓಎಸ್ ಅಪ್‌ಡೇಟ್ ಹಾಗೂ 7 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳ ಭರವಸೆ ನೀಡಿದೆ.


Click it and Unblock the Notifications