ಸ್ಯಾಮ್‌ಸಂಗ್ S26 FE vs ಮೊಟೊರೊಲಾ ಸಿಗ್ನೇಚರ್ 27: ಯಾವುದು ಬೆಸ್ಟ್? ಈಗಲೇ ಖರೀದಿಸಬೇಕಾ ಅಥವಾ ಕಾಯಬೇಕಾ?
ಇಂದು (ಸೆಪ್ಟೆಂಬರ್ 22) ಮೊಟೊರೊಲಾ ಸಂಸ್ಥೆ ತನ್ನ ಹೊಸ 'ಸಿಗ್ನೇಚರ್ 27' ಸ್ಮಾರ್ಟ್‌ಫೋನ್‌ನ ಟೀಸರ್ ಬಿಡುಗಡೆ ಮಾಡಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ S26 FE ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆಕರ್ಷಕ ಬೆಲೆ ಮತ್ತು ರಿಯಾಯಿತಿ ಆಫರ್‌ಗಳೊಂದಿಗೆ ಮಾರಾಟಕ್ಕೂ ಸಿಗುತ್ತಿದೆ. ಹಬ್ಬದ ಸೀಸನ್‌ನ ಡೀಲ್‌ಗಳು ಹಾಗೂ ಬ್ಯಾಂಕ್ ಆಫರ್‌ಗಳು ಬದಲಾಗುವ ಮುನ್ನ ಕ್ಯಾಮೆರಾ, ಬ್ಯಾಟರಿ ಮತ್ತು ಗೇಮಿಂಗ್ ವಿಷಯದಲ್ಲಿ ಯಾವುದು ಬೆಸ್ಟ್? ಈಗಲೇ ಸ್ಯಾಮ್‌ಸಂಗ್ ಖರೀದಿಸಬೇಕಾ ಅಥವಾ ಮೊಟೊರೊಲಾಗಾಗಿ ಕಾಯಬೇಕಾ? ಈ ಎರಡು ಪ್ರೀಮಿಯಂ ಫೋನ್‌ಗಳ ನಡುವಿನ ಸ್ಪಷ್ಟ ಹೋಲಿಕೆ ಇಲ್ಲಿದೆ.
ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಕ್ಸಿ AI ತಂತ್ರಜ್ಞಾನ ಮತ್ತು ಅತ್ಯುತ್ತಮ ಕ್ಯಾಮೆರಾ ಫೀಚರ್‌ಗಳನ್ನು ನೆಚ್ಚಿಕೊಂಡಿದೆ. ಇದರಲ್ಲಿ OIS ಬೆಂಬಲವಿರುವ 50MP ಪ್ರೈಮರಿ, 12MP ಅಲ್ಟ್ರಾವೈಡ್ ಹಾಗೂ 3x ಆಪ್ಟಿಕಲ್ ಜೂಮ್ ಜೊತೆಗೆ OIS ಹೊಂದಿರುವ 8MP ಟೆಲಿಫೋಟೋ ಕ್ಯಾಮೆರಾ ಇದೆ. ಜೊತೆಗೆ ಹಾರಿಜಾಂಟಲ್ ಲಾಕ್‌ನೊಂದಿಗೆ ಸೂಪರ್ ಸ್ಟೆಡಿ, ನೈಟೋಗ್ರಫಿ ಮತ್ತು ಫೋಟೋ ಅಸಿಸ್ಟ್ ಫೀಚರ್‌ಗಳಿವೆ. ಮತ್ತೊಂದೆಡೆ, ಮೊಟೊರೊಲಾ 200MP ಸೋನಿ ಲಿಟಿಯಾ (Sony Lytia) ಸೆನ್ಸರ್ ಮತ್ತು ಬ್ಯಾಂಗ್ & ಒಲುಫ್ಸನ್ (Bang & Olufsen) ಆಡಿಯೋ ನೀಡುತ್ತಿರುವುದಾಗಿ ಟೀಸರ್‌ನಲ್ಲಿ ಹೇಳಿಕೊಂಡಿದೆ. ಆದರೆ ಕತ್ತಲಿನಲ್ಲಿ (Low-light) ಇದರ ಕ್ಯಾಮೆರಾ ಪರ್ಫಾರ್ಮೆನ್ಸ್ ಮತ್ತು ವಿಡಿಯೋ ಕ್ವಾಲಿಟಿ ಹೇಗಿರಲಿದೆ ಎಂಬುದನ್ನು ಪರೀಕ್ಷಿಸಬೇಕಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE vs ಮೊಟೊರೊಲಾ ಸಿಗ್ನೇಚರ್ 27: ಭಾರತದಲ್ಲಿ ಬೆಲೆ ಮತ್ತು ಆಫರ್‌ಗಳು
ಭಾರತದಲ್ಲಿ ಗ್ಯಾಲಕ್ಸಿ S26 FE (8GB/256GB) ಆವೃತ್ತಿಯ ಬೆಲೆ ₹79,999 ಆಗಿದೆ. ಸದ್ಯ ಲಭ್ಯವಿರುವ ಆಫರ್‌ಗಳೆಂದರೆ: ₹7,000 ಬ್ಯಾಂಕ್ ಕ್ಯಾಶ್‌ಬ್ಯಾಕ್, ಅಥವಾ ಗರಿಷ್ಠ ₹8,000 ವರೆಗಿನ ಎಕ್ಸ್‌ಚೇಂಜ್ ಬೋನಸ್, ಅಥವಾ ಆಯ್ದ NBFC ಪಾಲುದಾರರ ಮೂಲಕ ದೀರ್ಘಾವಧಿಯ ನೋ-ಕಾಸ್ಟ್ ಇಎಂಐ ಜೊತೆಗೆ ₹3,000 ಅಪ್‌ಗ್ರೇಡ್ ಬೋನಸ್ ಪಡೆಯಬಹುದು. (ಆದರೆ ಈ ಆಫರ್‌ಗಳಲ್ಲಿ ಯಾವುದಾದರೂ ಒಂದನ್ನಷ್ಟೇ ಬಳಸಲು ಸಾಧ್ಯ). ಸರಳವಾಗಿ ಹೇಳಬೇಕೆಂದರೆ, ಬ್ಯಾಂಕ್ ಕಾರ್ಡ್ ಬಳಸಿದರೆ ಫೋನ್ ₹72,999 ಕ್ಕೆ ಸಿಗಲಿದೆ. ಇನ್ನು ಗರಿಷ್ಠ ಎಕ್ಸ್‌ಚೇಂಜ್ ಆಫರ್ ಪಡೆದರೆ ₹71,999 ರಷ್ಟು ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು. ಭಾರತದಲ್ಲಿ ಇದರ ಮಾರಾಟ ಈಗಾಗಲೇ ಆರಂಭವಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE vs ಮೊಟೊರೊಲಾ ಸಿಗ್ನೇಚರ್ 27: ಪರ್ಫಾರ್ಮೆನ್ಸ್, ಗೇಮಿಂಗ್ ಮತ್ತು ಬ್ಯಾಟರಿ
ಸ್ಯಾಮ್‌ಸಂಗ್ ಫೋನ್‌ನಲ್ಲಿರುವ 3nm ತಂತ್ರಜ್ಞಾನದ ಎಕ್ಸಿನೋಸ್ 2500 (Exynos 2500) ಪ್ರೊಸೆಸರ್ ಗೇಮಿಂಗ್‌ಗೆ ಅತ್ಯುತ್ತಮವಾಗಿದೆ. ಭಾರತದಲ್ಲಿ ನಡೆಸಿದ ಆರಂಭಿಕ ಪರೀಕ್ಷೆಗಳಲ್ಲಿ 'ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ' (BGMI) ಗೇಮ್ ಸರಾಸರಿ 100 FPS ಗಿಂತ ಹೆಚ್ಚು ಫ್ರೇಮ್‌ರೇಟ್‌ನಲ್ಲಿ ಸುಲಲಿತವಾಗಿ ರನ್ ಆಗಿದೆ. ಇನ್ನು 45W ಅಡಾಪ್ಟರ್ ಬಳಸಿ ಚಾರ್ಜ್ ಮಾಡಿದರೆ, ಕೇವಲ 30 ನಿಮಿಷಗಳಲ್ಲಿ ಶೇ. 69 ರಷ್ಟು ಬ್ಯಾಟರಿ ಭರ್ತಿಯಾಗುತ್ತದೆ. 'ಡಿಜಿಟ್' ಲ್ಯಾಬ್ ಪರೀಕ್ಷೆಯ ಪ್ರಕಾರ, ಶೇ. 0 ಯಿಂದ 100 ರಷ್ಟು ಪೂರ್ಣ ಚಾರ್ಜ್ ಆಗಲು 98 ನಿಮಿಷ ಬೇಕಾಯಿತು. ಇನ್ನು ಕಡು ಬಿಸಿಲಿನಲ್ಲೂ ಸ್ಕ್ರೀನ್ ಸ್ಪಷ್ಟವಾಗಿ ಕಾಣಲು 1,900 ನೀಟ್ಸ್ ಪೀಕ್ ಬ್ರೈಟ್‌ನೆಸ್ ಡಿಸ್‌ಪ್ಲೇ ನೀಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE vs ಮೊಟೊರೊಲಾ ಸಿಗ್ನೇಚರ್ 27: ನೆಟ್‌ವರ್ಕ್, ಇತರೆ ಫೀಚರ್‌ಗಳು ಮತ್ತು ಅಂತಿಮ ತೀರ್ಪು
ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ, n77/n78 ಬ್ಯಾಂಡ್‌ಗಳಿರುವ 5G SA/NSA, ವೈ-ಫೈ 6E, ಬ್ಲೂಟೂತ್ 5.4, IP68 ವಾಟರ್ ರೆಸಿಸ್ಟೆನ್ಸ್ ಮತ್ತು ಬರೋಬ್ಬರಿ 7 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಬೆಂಬಲ ಸ್ಯಾಮ್‌ಸಂಗ್‌ನಲ್ಲಿದೆ. ಆದರೆ, ಫೋನ್ ಬಾಕ್ಸ್‌ನಲ್ಲಿ ಚಾರ್ಜರ್ ಇರುವುದಿಲ್ಲ. ಇನ್ನೊಂದೆಡೆ ಮೊಟೊರೊಲಾ ತನ್ನ ಕ್ಲೀನ್ ಸ್ಟಾಕ್ ಆಂಡ್ರಾಯ್ಡ್ ಅನುಭವಕ್ಕೆ ಹೆಸರಾಗಿದ್ದು, ಸಿಗ್ನೇಚರ್ ಸರಣಿಗೆ ಆಂಡ್ರಾಯ್ಡ್ 17 ಅಪ್‌ಡೇಟ್ ನೀಡುವ ಭರವಸೆ ಕೊಟ್ಟಿದೆ. ಆದರೆ ಮೊಟೊರೊಲಾ ಸಿಗ್ನೇಚರ್ 27 ಫೋನ್‌ನ ಭಾರತದ ಬೆಲೆ ಮತ್ತು ಬ್ಯಾಂಕ್ ಅಥವಾ ಇಎಂಐ ಆಫರ್‌ಗಳ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಹೀಗಾಗಿ, ಅತ್ಯುತ್ತಮ ಕ್ಯಾಮೆರಾ ಅಥವಾ ಕ್ಲೀನ್ ಆಂಡ್ರಾಯ್ಡ್ ಬೇಕು ಎನ್ನುವವರು ಮೊಟೊರೊಲಾಗಾಗಿ ಕಾಯಬಹುದು. ತಕ್ಷಣವೇ ಪ್ರೀಮಿಯಂ ಫೋನ್ ಬೇಕಿದ್ದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE ಉತ್ತಮ ಆಯ್ಕೆ.


Click it and Unblock the Notifications
