Home
ಮೊಬೈಲ್

Galaxy S26 Ultra ಡಿಸೈನ್ ಚಿತ್ರಗಳು ಲೀಕ್!..ಬಾಕ್ಸಿ ಲುಕ್‌ಗೆ ವಿದಾಯ?

ಟೆಕ್ ದೈತ್ಯ Samsung ತನ್ನ ಮುಂಬರುವ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Galaxy S26 Ultra ಅನ್ನು 2026ರ ಫೆಬ್ರವರಿ ಅಂತ್ಯದಲ್ಲಿ ಅನಾವರಣಗೊಳಿಸುವ ನಿರೀಕ್ಷೆ ಇದೆ. ಇತ್ತೀಚಿನ ಸೋರಿಕೆಯ ಮಾಹಿತಿಗಳು, ಈ Galaxy S26 Ultra ಸ್ಮಾರ್ಟ್‌ಫೋನ್ ದೊಡ್ಡ ಮಟ್ಟದ ವಿನ್ಯಾಸ ಬದಲಾವಣೆಗೆ ಮತ್ತು ಶಕ್ತಿಶಾಲಿ ಹಾರ್ಡ್‌ವೇರ್ ಅಪ್‌ಗ್ರೇಡ್‌ಗಳಿಗೆ ಸಾಕ್ಷಿಯಾಗಲಿದೆ ಎಂದು ಸೂಚಿಸಿವೆ. ಇದೀಗ ಈ Galaxy S26 Ultra ಸ್ಮಾರ್ಟ್‌ಫೋನ್ ವಿನ್ಯಾಸವನ್ನು ತೋರಿಸುವ ಹೊಸ ಚಿತ್ರಗಳು ಸಹ ಸೋರಿಕೆಯಾಗಿವೆ. ಈ ಚಿತ್ರಗಳು ಕಂಪೆನಿಯು ಈ ಬಾಕ್ಸಿ ಲುಕ್‌ನಿಂದ ಸ್ವಲ್ಪ ದೂರ ಹೋಗುತ್ತಿರುವುದನ್ನು ಸೂಚಿಸುತ್ತಿದೆ.!

ಹೌದು, ಜನಪ್ರಿಯ ಟಿಪ್‌ಸ್ಟರ್ @UniverseIce (PhoneArt) ಹಂಚಿಕೊಂಡ ಚಿತ್ರಗಳ ಪ್ರಕಾರ, Galaxy S26 Ultra ಫೋನ್ ಅದರ ಹಿಂದಿನದಕ್ಕಿಂತ ಹೆಚ್ಚು ಬಾಗಿದ ಮೂಲೆಗಳನ್ನು ಹೊಂದಿರಬಹುದು ಎಂದು ತೋರಿಸುತ್ತಿದೆ. ಈ ವಿನ್ಯಾಸವು Google Pixel ಹಾಗೂ Apple iPhone ಗಳ ಹೋಲಿಕೆಯನ್ನು ತರುವಂತಿದೆ. ಫೋನ್‌ನ ಮುಂಭಾಗದಲ್ಲಿ ಹೋಲ್-ಪಂಚ್ ಸೆಲ್ಫಿ ಕ್ಯಾಮೆರಾ ಉಳಿದಂತೆಯೇ ಇರಲಿದ್ದು, ಬೇಜಲ್‌ಗಳು ತುಂಬಾ ತೆಳ್ಳಗಾಗಿರುವಂತದೆ. ಹಿಂಭಾಗದಲ್ಲಿ ಈ ಬಾರಿ ಪಿಲ್-ಶೇಪ್ ಕ್ಯಾಮೆರಾ ಐಲ್ಯಾಂಡ್ ವಿನ್ಯಾಸ ಕಾಣಬಹುದು, ಇದರಲ್ಲಿ ಮೂರು ಮುಖ್ಯ ಕ್ಯಾಮೆರಾ ಲೆನ್ಸ್‌ಗಳು ಕಾಣಿಸಿವೆ.

Galaxy S26 Ultra ಡಿಸೈನ್ ಚಿತ್ರಗಳು ಲೀಕ್!..ಬಾಕ್ಸಿ ಲುಕ್‌ಗೆ ವಿದಾಯ?

ಈ ಬದಲಾವಣೆ Galaxy ಸರಣಿಯಲ್ಲಿ ಹೊಸ ವಿನ್ಯಾಸದ ದಿಕ್ಕನ್ನು ಸೂಚಿಸುತ್ತದೆ. ಆದರೆ, Samsung ಈ ವಿನ್ಯಾಸ ಅಥವಾ ಮತ್ಯಾವುದೇ ವಿವರಗಳನ್ನು ಇನ್ನೂ ದೃಢೀಕರಿಸಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇನ್ನು Galaxy S25 Ultra ನಂತರ Galaxy S26 Ultra ಫೋನ್ ಕಂಪನಿಯ ಅತ್ಯಂತ ಪ್ರೀಮಿಯಂ ಪೋನ್ ಆಗಿ ಬರುತ್ತಿದೆ ಎಂಬುದನ್ನು ಹಲವಾರು ವರದಿಗಳು ಸೂಚಿಸಿವೆ. Galaxy S26 Ultra ಫೋನ್ ಹೊಂದಿರಬಹುದಾದ ಹಲವಾರು ಫೀಚರ್ಸ್ ಮಾಹಿತಿಗಳು ಸೋರಿಕೆಯಾಗಿವೆ. ಆರಂಭಿಕ ಸೋರಿಕೆಗಳ ಪ್ರಕಾರ, ಈ ಫೋನ್ ಕೆಳಗಿನ ಫೀಚರ್ಸ್‌ಗಳನ್ನು ಹೊಂದಿರಬಹುದು. ಅವುಗಳನ್ನು ಸಹ ನೋಡೋಣ.

Galaxy S26 Ultra : ನಿರೀಕ್ಷಿತ ವೈಶಿಷ್ಟ್ಯಗಳು

  • ಮುಂಬರುವ Galaxy S26 Ultra ಫೋನಿನನಲ್ಲಿ 6.9 ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಪೀಕ್ ಬ್ರೈಟ್ನೆಸ್ ಇರಬಹುದು
  • ಕಾರ್ಯಕ್ಷಮತೆಗಾಗಿ, Qualcomm Snapdragon 8 Elite Gen 5 ಪ್ರೊಸೆಸರ್ ಬಳಕೆ ಆಗಲಿದ್ದು, 16GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಯು ಲಭ್ಯವಾಗಬಹುದು.
  • ಬ್ಯಾಟರಿಯು 5,000mAh ಸಾಮರ್ಥ್ಯದದ್ದಾಗಿದ್ದು, 60W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದಿಂದ ವೇಗವಾಗಿ ಚಾರ್ಜ್ ಆಗುವ ಸಾಧ್ಯತೆ ಇದೆ.
  • ಕ್ಯಾಮೆರಾ ವಿಭಾಗದಲ್ಲಿ, Galaxy S26 Ultra ನಲ್ಲಿ 200MP ಪ್ರೈಮರಿ ಸೆನ್ಸರ್, 50MP ಅಲ್ಟ್ರಾವೈಡ್, 50MP ಪೆರಿಸ್ಕೋಪ್ ಟೆಲಿಫೋಟೋ ಮತ್ತು 10MP ಸೆಕೆಂಡರಿ ಟೆಲಿಫೋಟೋ ಲೆನ್ಸ್ ಇರಬಹುದು.
  • ಸೆಲ್ಫಿ ಕ್ಯಾಮೆರಾ ವಿಭಾಗದಲ್ಲಿ 12MP ಫ್ರಂಟ್ ಶೂಟರ್ ಅಥವಾ ಹೆಚ್ಚಿನ ಸಾಮರ್ಥ್ಯದ ಸೆನ್ಸಾರ್ ಇರಲಿದೆ.

Galaxy S26 Ultra: ಬಿಡುಗಡೆ ಯಾವಾಗ?
Samsung ತನ್ನ Galaxy S26 ಸರಣಿಯನ್ನು ಫೆಬ್ರವರಿ 25, 2026ರಂದು ಸ್ಯಾನ್ ಫ್ರಾನ್ಸಿಸ್ಕೋಯಲ್ಲಿ ನಡೆಯಲಿರುವ Galaxy Unpacked Event ನಲ್ಲಿ ಅನಾವರಣಗೊಳಿಸಬಹುದು ಎಂಬ ವರದಿಗಳು ಸೂಚಿಸುತ್ತವೆ. ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಕಂಪನಿ ತನ್ನ ರೂಢಿಯಂತೆ ಫೆಬ್ರವರಿ ಅಂತ್ಯದಲ್ಲಿ ಫ್ಲ್ಯಾಗ್‌ಶಿಪ್ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು. ಭಾರತದಲ್ಲಿ Galaxy S26 Ultra ಮಾದರಿಯ ಅಂದಾಜು ಬೆಲೆ ₹1,34,999 ಇರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಎಲ್ಲವೂ ಸೋರಿಕೆಯ ಅಥವಾ ಊಹಾಪೋಹ ಸುದ್ದಿಗಳು ಎಂಬುದನ್ನು ನಾವು ತಿಳಿದಿರಬೇಕು.

Samsung ಕಂಪೆನಿಯು ಉನ್ನತ ಮಟ್ಟದ ವೈಶಿಷ್ಟ್ಯಗಳೊಂದಿಗೆ Galaxy S ಸರಣಿಯನ್ನು ಪರಿಚಯಿಸುವುದು ಸಾಮಾನ್ಯ ಸಂಗತಿ. Galaxy S26 Ultra 2026ರ ಅತ್ಯಂತ ನಿರೀಕ್ಷಿತ ಆಂಡ್ರಾಯ್ಡ್ ಫೋನ್‌ಗಳಲ್ಲಿ ಒಂದಾಗಿದೆ. ಹಾಗಾಗಿಯೇ, Galaxy S26 Ultra ಬಗ್ಗೆ ದೊಡ್ಡ ಕುತೂಹಲ ಸೃಷ್ಟಿಯಾಗಿದೆ.

Best Mobiles in India

English summary
Newly leaked images of the Galaxy S26 Ultra smartphone reveal that Samsung may be slightly moving away from its traditional boxy design, hinting at a more refined and curved look this time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+