Subscribe to Gizbot

ಸ್ಯಾಮ್ ಸಂಗ್ ಮೊಬೈಲ್ ನಲ್ಲಿ 3ಡಿ ಬರಲಿದೆಯೆ?

Posted By:
ಸ್ಯಾಮ್ ಸಂಗ್ ಮೊಬೈಲ್ ನಲ್ಲಿ 3ಡಿ ಬರಲಿದೆಯೆ?

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಬಂದ ಅಲ್ಪಾವಧಿಯಲ್ಲಿಯೆ ಅಧಿಕ ಜನಪ್ರಿಯತೆಯನ್ನು ಗಳಿಸಿತು. ಇದರಿಂದಾಗಿ ಸ್ಯಾಮ್ ಸಂಗ್ ಗೆಲಾಕ್ಸಿಯ ಮತ್ತಷ್ಟು ಹೊಸ ಮಾಡಲ್ ಗಳನ್ನು ತಯಾರಿಸುತ್ತಿದೆ. ಇದೀಗ ಇದರ ಹೊಸ ಮಾಡಲ್ ಸ್ಯಾಮ್ ಸಂಗ್ ಗೆಲಾಕ್ಸಿ S III ಅನ್ನು 2012ರಲ್ಲಿ ಬಿಡುಗಡೆ ಮಾಡಲಿದೆ. ಇದರಲ್ಲಿ ಕೋಡ್ ಕೋರ್ ಪ್ರೊಸೆಸರ್ ಇದೆ ಎಂದು ಕೂಡ ಊಹಿಸಲಿದೆ. ಇದರ ಬಗ್ಗೆ ಕೆಲವು ಮಾಹಿತಿ ಸೋರಿಕೆಯಾಗಿದ್ದು ಇದರ ಪ್ರಕಾರ ಡ್ಯುಯೆಲ್ ಕೋರ್ ಪ್ರೊಸೆಸರ್ 1.8 GHz ಕ್ಲೋಕ್ ಸ್ಪೀಡ್ ಹೊಂದಿದೆ ಎಂದು ಹೇಳಲಾಗುತ್ತಿದೆ.

ಇದರಲ್ಲಿ ಎಕ್ಸಿನೋಸ್ 4412 ಪ್ರೊಸೆಸರ್ ಬಳಸಲಾಗಿದೆ ಎಂಬ ಸುದ್ಧಿ ಕೂಡ ಕೇಳಿ ಬರುತ್ತಿದೆ. ಇದರ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ 32nm ಕ್ವಾಡ್ ಕೊರ್ ಕೊರ್ಟೆಕ್ಸ್ A9 ಚಿಪ್ ಅಳವಡಿಸಲಾಗಿದೆ ಎಂಬ ಸುದ್ಧಿ ಕೂಡ ಕೇಳಿ ಬರುತ್ತಿದೆ. ಆದರೆ ಅದರ ಬದಲು ಎಕ್ಸಿನೋಸ್ 5XXX ಬಳಸಲೂ ಬಹುದು. ಇದನ್ನು ಫೆಬ್ರವರಿಯಲ್ಲಿ ತರುವುದಾದರೆ ಹಳೆಯ ಚಿಪ್ ಸೆಟ್ ಅನ್ನೆ ಬಳಸಬೇಕಾಗುವುದು ಆದ್ದರಿಂದ ಇದರಲ್ಲಿ ಹೊಸ ಚಿಪ್ ಸೆಟ್ ಅಳವಡಿಸಿದ ಮೊಬೈಲ್ 2012ರ ಮಧ್ಯೆದಲ್ಲಿ ಬರಬಹುದು.

ಇದರ ಬಗ್ಗೆ ಕೇಳಿ ಬರುತ್ತಿರುವ ಮತ್ತೊಂದು ಸುದ್ಧಿ ಅಂದರೆ 4.6 ಇಂಚಿನ AMOLED ಡಿಸ್ ಪ್ಲೇ ಮತ್ತು ಅದರ ಸ್ಕ್ರೀನ್ 1280 x 720 ಪಿಕ್ಸಲ್ ರೆಸ್ಯೂಲೇಶನ್ ಹೊಂದಿದೆ, ಇದರ ಕ್ಯಾಮೆರಾ 12 ಮೆಗಾ ಪಿಕ್ಸಲ್ ಕ್ಯಾಮೆರಾ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. ಇದರಲ್ಲಿ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಬಳಸುವ ಸಾಧ್ಯತೆ ಇದೆ.

ಅಲ್ಲದೆ ಸ್ಯಾಮ್ ಸಂಗ್ 3D ತಾಂತ್ರಿಕತೆಯನ್ನು ಬಳಸುವುದರ ಬಗ್ಗೆ ಹೆಚ್ಚಿನ ಗಮನವನ್ನು ಕೂಡ ನೀಡುತ್ತಿದೆ. ಇದನ್ನು ಈ ಮೊಬೈಲ್ ನಲ್ಲಿ ಬಳಸದಿದ್ದರೂ ಭವಿಷ್ಯದ ಸ್ಯಾಮ್ ಸಂಗ್ ಮಾಡಲ್ 3D ತಂತ್ರಜ್ಞಾನವನ್ನು ಅಳವಡಿಸಲು ಹೆಚ್ಚಿನ ಗಮನವನ್ನು ಕೊಡುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot