ಸ್ಯಾಮ್ಸಂಗ್ ಗ್ಯಾಲಕ್ಸಿ S3 vs HTC ವನ್ X

By Varun
|
ಸ್ಯಾಮ್ಸಂಗ್ ಗ್ಯಾಲಕ್ಸಿ S3 vs HTC ವನ್ X

ಸ್ಮಾರ್ಟ್ ಫೋನುಗಳಲ್ಲಿ ಹಲವಾರು ಮಾಡೆಲ್ ಗಳು ಇದ್ದು ಹೈ ಎಂಡ್ ಬಜೆಟ್ ನಲ್ಲಿ ಇರುವ ಸ್ಮಾರ್ಟ್ ಫೋನುಗಳಲ್ಲಿ ಅತ್ಯುತ್ತಮವಾದವು ಎಂದರೆ ನಮ್ಮ ತಲೆಗೆ ಬರುವುದು ಆಪಲ್, ಸ್ಯಾಮ್ಸಂಗ್, ಸೋನಿ ಹಾಗು HTC ಕಂಪನಿಗಳ ಸ್ಮಾರ್ಟ್ ಫೋನುಗಳು.

ಆಪಲ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಉಳಿದ ಕಂಪನಿಗಳು ಬಹುತೇಕ ಆಂಡ್ರಾಯ್ಡ್ ತಂತ್ರಾಂಶವನ್ನೇ ಬಳಸುತ್ತವೆ. ಇತ್ತೀಚಿಗೆ ಬಿಡುಗಡೆಯಾಗಿರುವ ಸ್ಮಾರ್ಟ್ ಫೋನುಗಳಲ್ಲಿ ಬೇಡಿಕೆಯಿರುವ ಸ್ಮಾರ್ಟ್ ಫೋನುಗಳೆಂದರೆ ಅದು ಸ್ಯಾಮ್ಸಂಗ್ ಗ್ಯಾಲಕ್ಸಿ S3 ಹಾಗು HTC ವನ್ X.

ಈ ಎರಡೂ ಫೋನುಗಳು ಅತ್ಯುತ್ತಮವಾಗಿದ್ದು, ಇವುಗಳು ಪರಸ್ಪರ ಹೇಗಿವೆ, ಫೀಚರುಗಳಲ್ಲಿ ಯಾವುದು ಬೆಸ್ಟ್ ಎಂದು ನೋಡೋಣವೆ:1) ಹೊರಮೈ:

ಗ್ಯಾಲ್ಕಕ್ಸಿ S3- 136.6 x 70.6 x 8.6mm ಇದ್ದು 133 ಗ್ರಾಂ ತೂಗುತ್ತದೆ.

HTC ವನ್ X- 134.4 x 69.9 x 9.3 mm ಇದ್ದು 130 ತೂಗುತ್ತದೆ.2) ಡಿಸ್ಪ್ಲೇ:

ಗ್ಯಾಲ್ಕಕ್ಸಿ S3- 4.8 ಇಂಚ್ ಡಿಸ್ಪ್ಲೇ, AMOLED ಪರದೆ

HTC ವನ್ X- ಕೇವಲ 4.7 ಇಂಚ್ ಡಿಸ್ಪ್ಲೇ3) ಪ್ರೋಸೆಸರ್:

ಗ್ಯಾಲ್ಕಕ್ಸಿ S3- ಕ್ವಾಡ್ ಕೋರ್ Exynos 4 ಕ್ವಾಡ್ ಪ್ರೋಸೆಸರ್, 1.4 GHz ಕ್ಲಾಕ್ ಸ್ಪೀಡ್ ಹಾಗು 1GB ರಾಮ್.

HTC ವನ್ X- ಕ್ವಾಡ್ ಕೋರ್ ಪ್ರೋಸೆಸರ್, 1.5 GHz ಕ್ಲಾಕ್ ಸ್ಪೀಡ್ ಹಾಗು 1GB ರಾಮ್.4) ಕ್ಯಾಮರಾ:

ಗ್ಯಾಲ್ಕಕ್ಸಿ S3- 8 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮರಾ, ಆಟೋ ಫೋಕಸ್ ಹಾಗು LED ಫ್ಲಾಶ್ ಜೊತೆ, HD ವೀಡಿಯೋ, ಇಮೇಜ್ ರೆಕಾರ್ಡಿಂಗ್, ಜಿಯೋ ಟ್ಯಾಗಿಂಗ್, ಟಚ್ ಫೋಕಸ್, ಸ್ಮೈಲ್ ಡಿಟೆಕ್ಶನ್

1.9 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ, ವೀಡಿಯೋ ಕಾಲಿಂಗ್ ಜೊತೆ.

HTC ವನ್ X - 8 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮರಾ, f2.0 ಅಪರ್ಚರ್ ಜೊತೆ ಹಾಗು 1.3 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮರಾ , 720p ವೀಡಿಯೋ ರೆಕಾರ್ಡಿಂಗ್ ಜೊತೆ.5) ತಂತ್ರಾಂಶ:

ಗ್ಯಾಲ್ಕಕ್ಸಿ S3- ಟಚ್ವಿಜ್ ಇಂಟರ್ಫೇಸ್ ಇರುವ ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಆಪರೇಟಿಂಗ್ ಸಿಸ್ಟಮ್ ಜೊತೆ.

HTC ವನ್ X- ಸೆನ್ಸ್ 4.0 ಇಂಟರ್ಫೇಸ್ ಹಾಗು ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಆಪರೇಟಿಂಗ್ ಸಿಸ್ಟಮ್6) ಸ್ಟೋರೇಜ್:

ಗ್ಯಾಲ್ಕಕ್ಸಿ S3: 16GB, 32GB and 64GB ಗಳ ಜೊತೆ ಬರುತ್ತದೆ. ಇದರ ಜೊತೆ 50GB ಡ್ರಾಪ್ ಬಾಕ್ಸ್ ಖಾತೆಯೂ ಉಚಿತವಾಗಿ ಬರುತ್ತದೆ.

HTC ವನ್ X: 32GB ಕಾರ್ಡ್ ಸ್ಲಾಟ್ ಜೊತೆ ಬರಲಿದ್ದು 25GB ಡ್ರಾಪ್ ಬಾಕ್ಸ್ ಖಾತೆ ಉಚಿತವಾಗಿ ಬರಲಿದೆ.7) ಬ್ಯಾಟರಿ:

ಗ್ಯಾಲ್ಕಕ್ಸಿ S3- 2050mAh Li-Ion ಬ್ಯಾಟರಿ

HTC ವನ್ X- 1800mAh ಬ್ಯಾಟರಿ8) ಬೆಲೆ:

ಗ್ಯಾಲ್ಕಕ್ಸಿ S3- 32,999ರೂಪಾಯಿಗೆ ಲಭ್ಯವಿದೆ.

HTC ವನ್ X- 37,000 ರೂಪಾಯಿಗೆ ಲಭ್ಯವಿದೆ.ಇವಿಷ್ಟೂ ಫೀಚರುಗಳನ್ನು ಹೋಲಿಸಿ ನೋಡಿದರೆಹಾಗು ಬೆಲೆಯನ್ನು ಪರಿಗಣನೆಗೆ ತೆಗೆದುಕೊಂಡರೆ ಸ್ಯಾಮ್ಸಂಗ್ ಗ್ಯಾಲಕ್ಸಿ S3, HTC ವನ್ X ಗಿಂತಾ ಸ್ವಲ್ಪಮಟ್ಟಿಗೆ ಚೆನ್ನಾಗಿದ್ದು, ಹೆಚ್ಚಿನ ಸೌಲಭ್ಯಗಳು ಇವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X