ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್‌3 ಮಿನಿ vs ಗ್ಯಾಲಾಕ್ಸಿ ಎಸ್‌3

Posted By: Vijeth

ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್‌3 ಮಿನಿ vs ಗ್ಯಾಲಾಕ್ಸಿ ಎಸ್‌3

ಎರಡು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾದ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್‌3 ಸಮಾರ್ಟ್‌ಫೋನ್‌ ಖರೀದಿಸ ಬೇಕೆಂದವರಿಗೆ ಕೇವಲ 16GB, 32GB ಹಾಗೂ 64GB ಮಾದರಿಗಳಲ್ಲಿ ಯಾವುದಾದರು ಒಂದನ್ನು ಮಾತ್ರವಷ್ಟೇ ಆಯ್ಕೆ ಮಾಡಿಕೊಳ್ಳ ಬೇಕಾಗಿತ್ತು. ಆದರೆ ಇದೀಗ ಸ್ಯಾಮ್ಸಂಗ್‌ ಹ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಪೊನ್‌ನ ಮಿನಿ ಮಾದರಿ ನೂತನ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸಿದ್ದು ಗ್ರಾಹಕರಿಗೆ ಮತ್ತೊಂದು ಆಯ್ಕೆ ಲಭ್ಯವಾಗಿದ್ದು ದೊಡ್ಡ ಗಾತ್ರದ ಗ್ಯಾಲಾಕ್ಸಿ ಎಸ್‌3 ಬೇಡವೆನಿಸಿದಲ್ಲಿ ಚಿಕ್ಕ ಗಾತ್ರದ ಗ್ಯಾಲಾಕ್ಸಿ ಎಸ್‌3 ಮಿನಿ ಖರೀದಿಸ ಬಹುದಾಗಿದೆ.

ಅಂದಹಾಗೆ ನೀವು ಕೂಡ ಗ್ಯಾಲಾಕ್ಸಿ ಎಸ್‌3 ಹಾಗೂ ಗ್ಯಾಲಾಕ್ಸಿ ಎಸ್‌3 ಮಿನಿ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸುವುದು ಎಂದು ಆಲೋಚಿಸುತ್ತಿದ್ದೀರ ಅದಕ್ಕಾಗಿಯೇ ಗಿಜ್ಬಾಟ್‌ ನಿಮಗಾಗಿ ಸ್ಯಾಮ್ಸಂಗ್‌ನ ಎರಡೂ ಸ್ಮಾರ್ಟ್‌ಫೋನ್‌ಗಳ ನಡುವಿನ ಹೋಲಿಕೆಯನ್ನು ತಂದಿದೆ ಒಮ್ಮೆ ಓದಿ ನೋಡಿ ನಂತರ ದೊಡ್ಡ ಗಾತ್ರದ ಗ್ಯಾಲಾಕ್ಸಿ ಎಸ್‌3 ಖರೀದಿಸ ಬೇಕೋ ಅಥವಾ ಪುಟ್ಟ ಗಾತ್ರದ ಗ್ಯಾಲಾಕ್ಸಿ ಎಸ್‌3 ಮಿನಿ ಖರೀದಿಸ ಬೇಕೋ ಎಂದು ನೀವೆ ನಿರ್ಧರಿಸಿ.

ಗಾತ್ರ ಹಾಗೂ ಸುತ್ತಳತೆ: ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಪೊನ್‌ನ ಚಿಕ್ಕ ಗಾತ್ರದ ಮಾದರಿಯಾದ ಗ್ಯಾಲಾಕ್ಸಿ ಎಸ್‌3 ಮಿನಿ 121.55 x 63 x 9.85 mm ಸುತ್ತಳತೆಯೊಂದಿಗೆ 111.5 ಗ್ರಾಂ ತೂಕವಿದ್ದರೆ, ಒರಿಜಿನಲ್‌ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ 136.6 x 70.6 x 8.6 mm ಸುತ್ತಳತೆ ಯೊಂದಿಗೆ 133 ಗ್ರಾಂ ತೂಕವಿದೆ.

ದರ್ಶಕ: ಗ್ಯಾಲಾಕ್ಸಿ ಎಸ್‌3 ಮಿನಿಯಲ್ಲಿ 4 ಇಂಚಿನ ಸೂಪರ್‌ AMOLED ಸಾಮರ್ತ್ಯದ ಟಚ್‌ಸ್ಕ್ರೀನ್‌ ನೊಂದಿಗೆ 800 x 400 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. ಮತ್ತೊಂದೆಡೆ ಗ್ಯಾಲಾಕ್ಸಿ ಎಸ್‌3 ನಲ್ಲಿ 4.8 ಇಂಚಿನ ಸೂಪರ್‌ AMOLED ಟಚ್‌ಸ್ಕ್ರೀನ್‌ ದರ್ಶಕದೊಂದಿಗೆ 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಗ್ಯಾಲಾಕ್ಸಿ ಎಸ್‌3 ಮಿನಿ ಸ್ಮಾರ್ಟ್‌ಫೋನ್‌ನಲ್ಲಿ 1GHz ಡ್ಯುಯೆಲ್‌-ಕೋರ್‌ ಪ್ರೊಸೆಸರ್‌ ಹಾಗೂ ಗ್ಯಾಲಾಕ್ಸಿ ಎಸ್‌3 ಕೊಂಚ ಉತ್ತಮವಾದ ಕ್ವಾಡ್‌ ಕೋರ್‌ ಪ್ರೊಸೆಸರ್‌ ನೊಂದಿಗೆ ಸ್ಯಾಮ್ಸಂಗ್‌ ಎಕ್ಸಾನ್‌ 4412 ಕ್ವಾಡ್‌ ಚಿಪ್‌ಸೆಟ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಗ್ಯಾಲಾಕ್ಸಿ ಎಸ್‌3 ಮಿನಿ ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಚಾಲಿತ ವಾಗಿದ್ದರೆ. ಗ್ಯಾಲಾಕ್ಸಿ ಎಸ್‌3ನಲ್ಲಿ ಕೊಂಚ ಹಳೆಯ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಹೊಂದಿದೆ ಅಂದಹಾಗೆ ಶೀಘ್ರದಲ್ಲೆ ಜೆಲ್ಲಿಬೀನ್‌ಗೆ ಅಪ್ಗ್ರೇಡ್‌ ಆಗಲಿದೆ.

ಕ್ಯಾಮೆರಾ: ಈ ವಿಚಾರದಲ್ಲಿ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ನಲ್ಲಿ 5MPನ ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ VGA ಕ್ಯಾಮೆರಾ ಇದೆ. ಮತ್ತೊಂದೆಡೆ ಗ್ಯಾಲಾಕ್ಸಿ ಎಸ್‌3 ನಲ್ಲಿ ಕೋಂಚ ಉತ್ತಮವಾದ 8MP ನ ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ 1.9MP ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ 8GB/16GB ಆಂತರಿಕ ಮೆಮೊರರಿ ಮಾದರಿಯೊಂದಿಗೆ 1GB RAM ಹೊಂದಿದ್ದು ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ. ಹಾಗೂ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ 16GB/32GB/64GB ಆಮತರಿಕ ಮೆಮೊರಿಯೊಂದಿಗೆ 1GB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 64GB ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.

ಕನೆಕ್ಟಿವಿಟಿ: ಈ ವಿಚಾರದಲ್ಲಿ ಎರಡೂಸ್ಮಾರ್ಟ್‌ ಫೋನ್‌ಗಳಲ್ಲಿ Wi-Fi 802.11 a/b/g/n, DLNA, Wi-Fi ಡೈರೆಕ್ಟ್‌, Wi-Fi ಹಾಟ್‌ಸ್ಪಾಟ್‌, ಬ್ಲೂಟೂತ್‌ 4.0 ಜೊಯೆಗೆ A2DP ಹಾಗೂ EDR, NFC ನೊಂದಿಗೆ ಮೈಕ್ರೋ USB 2.0 ಹೊಂದಿವೆ.

ಬ್ಯಾಟರಿ: ಗ್ಯಾಲಾಕ್ಸಿ ಎಸ್‌3 ಮಿನಿ ಸ್ಮಾರ್ಟ್‌ಪೋನ್‌ನಲ್ಲಿ 1,500 mAh Li-ion ಬ್ಯಾಟರಿ ಇದ್ದರೆ. ಒರಿಜಿನಲ್‌ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ನಲ್ಲಿ 2,100 mAh Li-ion ಬ್ಯಾಟರಿ ಇದ್ದು 11.5 ಗಂಟೆಗಳ ಟಾಕ್‌ ಟೈಮ್‌ ಹಾಗೂ 790 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ: ಗ್ಯಾಲಾಕ್ಸಿ ಎಸ್‌3 ಮಿನಿ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಸ್ಯಾಮ್ಸಂಗ್‌ ಈವರೆಗೂ ಅಧಿಕೃತವಾಗಿ ತಿಳಿಸಿಲ್ಲಾ, ಅಂದಹಾಗೆ ವಿಶ್ಲೇಷಕರುಗಳ ಪ್ರಕಾರ ನೂತನ ಸ್ಮಾರ್ಟ್‌ಪೋನ್‌ನ 8GB/16GB ಮಾದರಿಗಳು ಕ್ರಮವಾಗಿ 20,000 ರೂ. ಹಾಗೂ 25,000 ರೂ. ದರದಲ್ಲಿ ಲಭ್ಯವಾಗ ಬಹುದು ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಗ್ಯಾಲಾಕ್ಸಿ ಎಸ್‌3ನ 16GB ಮಾದರಿಯು 37,990 ರೂ. ಹಾಗೂ 32GB ಮಾದರಿಯು 40,900 ರೂ ದರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

Read In English...

ಭಾರತದಲ್ಲಿ ಗ್ಯಾಲಾಕ್ಸಿ ಎಸ್‌3 ಮಿನಿ ಬಿಡುಗಡೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot