ಸ್ಯಾಮ್ಸಂಗ್ ಗ್ಯಾಲಕ್ಸಿ S3 ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯ

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ S3 ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯ

"Inspired by Nature,Designed for Humans" ಎಂಬ ಪಂಚ್ ಲೈನ್ ನೊಂದಿಗೆ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಸ್ಮಾರ್ಟ್ ಫೋನ್ ಬಿಡುಗಡೆಯಾದ ನಂತರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಬಿಡುಗಡೆಗೂ ಮುನ್ನವೇ 9 ಮಿಲಿಯನ್ ಹ್ಯಾಂಡ್ ಸೆಟ್ ಪ್ರೀ ಆರ್ಡರ್ ಪದೆದುಕೊದಿದ್ದ 4.8 ಇಂಚ್ ಡಿಸ್ಪ್ಲೇ ಇರುವ ಈ ದೊಡ್ಡ ಫೋನ್ ಅನ್ನು ಭಾರತದಲ್ಲಿ ಖ್ಯಾತ ಮಾಡಲ್ ನರ್ಗಿಸ್ ಫಾಕ್ರಿ ಬಿಡುಗಡೆ ಮಾಡಿದ್ದರು.

ವಿಭಿನ್ನ ಫೀಚರುಗಳು ಹೊಂದಿರುವ ಈ ವರ್ಷದ ಅತಿ ನಿರೀಕ್ಷಿತ ಸ್ಮಾರ್ಟ್ ಫೋನ್ ಎಲ್ಲ ರೀತಿಯಲ್ಲಿ ಉತ್ತಮ ಫೋನ್ ಆಗಿದ್ದರೂ, 16 GB ಯ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಯ ಬೆಲೆ 43,180 ರೂಪಾಯಿ ಎಂದು ತಿಳಿದೊಡನೆ ಬಹಳ ಮಂದಿ ಶಾಕ್ ಆದರು. ಏಕೆಂದರೆ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಗಳಾದ HTC ಒನ್ ಸರಣಿಯ ಫೋನ್ ಗಳು ಹಾಗು ಸೋನಿ Xperia ಸ್ಮಾರ್ಟ್ ಫೋನ್ ಇದಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದ್ದು ಗ್ಯಾಲಕ್ಸಿ S3 ಫೋನ್ ಬೆಲೆ ಹೆಚ್ಚು ಎನಿಸಿತ್ತು.

ಆದರೆ ಆನ್ಲೈನಿನಲ್ಲಿ ಹಲವಾರು ವೆಬ್ಸೈಟುಗಳು ಡಿಸ್ಕೌಂಟ್ ಬೆಲೆಗೆ ಈ ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡುತ್ತಿದ್ದು, ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು. ಇಲ್ಲಿದೆ ನೋಡಿ ಆ ವೆಬ್ಸೈಟ್ ಗಳ ವಿವರ.

1) Homeshop18- ಹೋಮ್ ಶಾಪ್ 18 ನಲ್ಲಿ 38,900 ರೂಪಾಯಿಗೆ ಲಭ್ಯವಿದೆ. ಇದು, ಮಾರುಕಟ್ಟೆ ದರಕ್ಕಿಂತ 4,000 ರೂಪಾಯಿ ಕಮ್ಮಿ. ಇದಷ್ಟೇ ಅಲ್ಲದೆ, ಸೆಟ್ ನ ಜೊತೆ ಬ್ಲೂಟೂತ್ ಮೋನೋ ಹೆಡ್ ಸೆಟ್ ಹಾಗು ಫ್ರೀ ಹೋಮ್ ಡೆಲಿವರಿ ಕೂಡ ಇದೆ.

2) Flipkart.com- ಸ್ಯಾಮ್ಸಂಗ್ ಗ್ಯಾಲಕ್ಸಿ S3 ಬೆಲೆ ಫ್ಲಿಪ್ ಕಾರಟ್ ನಲ್ಲಿ -38,900 ಈ ವೆಬ್ಸೈಟ್ ನಲ್ಲಿ ಡಿಸ್ಕೌಂಟ್ ಜೊತೆ 30 ದಿನಗಳ ರೀಪ್ಲೇಸ್ಮೆಂಟ್ ಗ್ಯಾರಂಟಿ ಕೂಡ ಇದೆ.

3) Snapdeal.com- ಆನ್ಲೈನ್ ಬುಕಿಂಗ್ ನಲ್ಲೇ ಸಾಕಷ್ಟು ಖ್ಯಾತಿಯಾದ ಸ್ನಾಪ್ ಡೀಲ್ ನಲ್ಲಿ ಕೂಡ 38,900 ರೂಪಾಯಿಗೆ ಮಾರಾಟವಾಗುತ್ತಿದ್ದು, ಫ್ರೀ ಕ್ಯಾಶ್ ಆನ್ ಡೆಲಿವರಿ ಸೌಲಭ್ಯವಿದೆ.

4) eBay.com- 38,900 ರೂಪಾಯಿಗೆ ನೀವು ಕೊಳ್ಳಬಹುದಾಗಿದ್ದು, EMI ಸೌಲಭ್ಯವೂ ಇದೆ.

5) Buytheprice.com- ಇದೂ ಕೂಡ 38,900 ರೂಪಾಯಿಗೆ ಮಾರಾಟ ಮಾಡುತ್ತಿದ್ದು, 2,149 ಬೆಲೆ ಬಾಳುವ ಸ್ಕಲ್ ಕ್ಯಾಂಡಿ ಹೆಡ್ ಫೋನ್ ಕೂಡ ಉಚಿತವಾಗಿ ಕೊಡಲಿದೆ. ಇದಷ್ಟೇ ಅಲ್ಲದೆ 1,000 ರೂಪಾಯಿ ಬೆಲೆಬಾಳುವ ವೌಚರ್ ಕೂಡ ಕೊಡಲಾಗುತ್ತೆ.

ನಿಮಗೆ ಯಾವ ಆಫರ್ಉತ್ತಮ ಯೆನಿಸುತ್ತೋ ಆ ವೆಬ್ಸೈಟ್ ನಲ್ಲಿ ಬುಕ್ ಮಾಡಿ, ಗ್ಯಾಲಕ್ಸಿ S3 ಬಗೆಗಿನ ನಿಮ್ಮ ಅನುಭವ ನಮಗೆ ತಿಳಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot