ಸ್ಯಾಮ್‌ಸಂಗ್ ಹೊಸ ದಾಖಲೆ: ಎರಡೇ ವಾರದಲ್ಲಿ 60 ಲಕ್ಷ ಎಸ್ 4 ಮಾರಾಟ
ಸ್ಯಾಮ್‌ಸಂಗ್ ಅಭಿಮಾನಿಗಳಿಗೆ ಗುಡ್‌ನ್ಯೂಸ್. ಸ್ಯಾಮ್‌ಸಂಗ್‌ನ ಭಾರೀ ಜನಪ್ರಿಯ ಸ್ಮಾರ್ಟ್‌ಫೋನ್ ಗೆಲಾಕ್ಸಿ ಎಸ್4 ಹೊಸ ಮೈಲಿಗಲ್ಲನ್ನು ಬರೆದಿದೆ. ಬಿಡುಗಡೆಯಾದ ಎರಡೇ ವಾರದಲ್ಲಿ ವಿಶ್ವದ್ಯಾಂತ 60 ಲಕ್ಷ ಗೆಲಾಕ್ಸಿ ಎಸ್4 ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ಹೊಸ ದಾಖಲೆ ಬರೆದಿದೆ.
ಗೆಲಾಕ್ಸಿ ಎಸ್4 ಬಿಡುಗಡೆಯಾದ ಐದೇ ದಿನದಲ್ಲಿ40 ಲಕ್ಷ ಸ್ಮಾರ್ಟ್‌ಫೋನ್ ಮಾರಾಟ ಮಾಡಿದೆ ಎಂದು chosun meida ವರದಿ ಮಾಡಿದೆ. ಅಷ್ಟೇ ಅಲ್ಲದೇ ಈ ತಿಂಗಳ ಅಂತ್ಯಕ್ಕೆ ಒಂದು ಕೋಟಿ ಎಸ್ 4 ಮಾರಾಟ ಮಾಡುವ ಗುರಿಯನ್ನು ಸ್ಯಾಮ್‌ಸಂಗ್ ಹೊಂದಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಕಳೆದ ಏಪ್ರಿಲ್ 26ರಂದು ವಿಶ್ವದ ಮಾರುಕಟ್ಟೆಗೆ ಗೆಲಾಕ್ಸಿ ಎಸ್4 ಬಿಡುಗಡೆಯಾಗಿತ್ತು. ಗೆಲಾಕ್ಸಿ ಎಸ್ 4ನ್ನು ಗ್ರಾಹಕರು 39,490 ಬೆಲೆಯಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4
ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್ AMOLED ಸ್ಕ್ರೀನ್
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಓಎಸ್
ಅಕ್ಟಾ ಕೋರ್ ಪ್ರೋಸೆಸರ್
2GB RAM 16GB/32GB/64GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್,ಅಟೋಫೋಕಸ್,ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್
2,600mAh ಬ್ಯಾಟರಿ
ಇದನ್ನೂ ಓದಿ : ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4ನಲ್ಲಿ ಅಂಥ ವಿಶೇಷತೆ ಏನಿದೆ ?


Click it and Unblock the Notifications








