Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಮಿನಿ ಲೀಕ್ ಔಟ್ ವೈಶಿಷ್ಟ್ಯಗಳು

Written By:

ಕೊನೆಗೂ ಹೆಚ್ಚು ನಿರೀಕ್ಷೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಚಿತ್ರಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಆನ್‌ಲೈನ್‌ನಲ್ಲಿ ದೊರೆತಿರುವ ಎಸ್‌5 ಚಿತ್ರಗಳು ಕೊಂಚ ನಿರಾಸೆಯನ್ನುಂಟು ಮಾಡಿವೆ. ಇದು ಅಷ್ಟೇನೂ ದೊಡ್ಡದಾಗಿಲ್ಲದ ಪರದೆಯನ್ನು ಹೊಂದಿದ್ದು ತನ್ನ ಹಿಂದಿನ ಆವೃತ್ತಿಗೆ ಹೋಲುವಂತಿದೆ.

ಅದೇ ರಿಯರ್ ಮೌಂಟೆಡ್ ಹಾರ್ಟ್ ರೆಟ್ ಸೆನ್ಸಾರ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಇದು ಹೊಂದಿದೆ. ಎಸ್‌5 ನಲ್ಲಿದ್ದಂತೆಯೇ ಇದು ಅದೇ ರೀತಿಯ ರಬ್ಬರ್ ಗ್ಯಾಸ್ಕೆಟ್ ಅನ್ನು ಹೊಂದಿದ್ದು ಇದು ಜಲಪ್ರತಿರೋಧಕ ಶಕ್ತಿಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಮಿನಿ ಲೀಕ್ ಔಟ್ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಮಿನಿಯಲ್ಲಿ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 400 SoC ಇಲ್ಲ ಇದಕ್ಕೆ ಬದಲಾಗಿ ಎಕ್ಸೋನಸ್ 3 ಕ್ವಾಡ್ (Exynos 3470) ಚಿಪ್ ಜೊತೆಗೆ ಕ್ವಾಡ್-ಕೋರ್ 1.4 GHz ಪ್ರೊಸೆಸರ್ ಮಾಲಿ -400 MP4 ಜಿಪಿಯು ನೊಂದಿಗೆ 1.5 ಜಿಬಿ ರ್‌ಯಾಮ್ ಹೀಗೆ ಫೋನ್ ಸಖತ್ತಾಗಿದೆ.

ಒಂದು ಮೂಲಗಳ ಪ್ರಕಾರ ಬರಲಿರುವ ಡಿವೈಸ್ 4.5-ಇಂಚಿನ AMOLED ಡಿಸ್‌ಪ್ಲೇಯೊಂದಿಗೆ 1280 x 720 ಪಿಕ್ಸೆಲ್‌ ರೆಸಲ್ಯೂಶನ್ ಫೋನ್‌ನಲ್ಲಿದೆ. 8-ಮೆಗಾಪಿಕ್ಸೆಲ್-ರಿಯರ್ ಫೇಸಿಂಗ್ ಕ್ಯಾಮೆರಾ ಪೂರ್ಣ ಎಚ್‌ಡಿ 1080p ರೆಕಾರ್ಡಿಂಗ್, ಇದರೊಂದಿಗೆ 2-ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಶೂಟರ್ ಫೋನ್‌ನಲ್ಲಿದೆ. ಎಸ್5 ಮಿನಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ನಲ್ಲಿ ಚಾಲನೆಯಾಗುತ್ತದೆ.

ಇನ್ನೂ ಎಸ್5 ಮಿನಿ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎಂಬುದು ತಿಳಿದುಬಂದಿಲ್ಲ. ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದೈತ್ಯ ಈ ರಹಸ್ಯವನ್ನು ಗೌಪ್ಯವಾಗಿಟ್ಟಿದೆ. ಆದ್ದರಿಂದ ಈ ವೈಶಿಷ್ಟ್ಯಗಳನ್ನು ಮನದಲ್ಲಿಟ್ಟುಕೊಂಡು ಗ್ಯಾಲಕ್ಸಿ ಎಸ್5 ಮಿನಿಯ ಆಗಮನವನ್ನು ನಿರೀಕ್ಷಿಸೋಣ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot