Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಪ್ರೈಮ್ ಜೂನ್‌ನಲ್ಲಿ ಬಿಡುಗಡೆ

Written By:

ಸ್ಯಾಮ್‌ಸಂಗ್ ತನ್ನ ಮಾರುಕಟ್ಡೆ ಜಾಲವನ್ನು ವಿಸ್ತರಿಸುವ ಧಾವಂತದಲ್ಲಿದ್ದು ಮಧ್ಯಮ ಕ್ರಮಾಂಕದ ಫೋನ್ ಅನ್ನು ಬಿಡುಗಡೆ ಮಾಡಿ ಬಳಕೆದಾರರ ವಿಶ್ವಾಸಕ್ಕೆ ಪಾತ್ರವಾಗಲಿದೆ.

ತನ್ನದೇ ಬ್ರಾಂಡ್ ಹೊಸ ಗ್ಯಾಲಕ್ಸಿ ಎಸ್5 ಪ್ರೈಮ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಸನ್ನಾಹದಲ್ಲಿದ್ದು ಇದರ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಇದರ ಬಿಡುಗಡೆಯ ಸನ್ನಾಹದಲ್ಲಿದೆ ಸೌತ್‌ ಕೊರಿಯಾ ಕಂಪೆನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಪ್ರೈಮ್ ಜೂನ್‌ನಲ್ಲಿ ಬಿಡುಗಡೆ

ಜೂನ್ ಮಧ್ಯದಲ್ಲಿ ತನ್ನದೇ ನೆಲದಲ್ಲಿ ಗ್ಯಾಲಕ್ಸಿ ಎಸ್5 ಪ್ರೈಮ್ ಮಾರಾಟಕ್ಕೆ ಮುಂದುವರಿಯಲಿದ್ದು ಇತರ ಮಾರುಕಟ್ಟೆಗಳಿಗೂ ಇದು ಅತ್ಯುತ್ತಮವಾಗಿ ಪರಿಣಾಮಕಾರಿಯಾಗಲಿದೆ. ತನ್ನ ಉತ್ಪನ್ನಗಳ ಕಡೆಗೆ ವಿಶೇಷ ಆಸ್ಥೆ ವಹಿಸುವ ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್‌ಗೂ ವಿಶೇಷ ಮುತುವರ್ಜಿಯನ್ನು ನೀಡಲಿದೆ.

ಈ ಫೋನ್ 5.2 ಇಂಚಿನ QHD (2560×1440) ಡಿಸ್‌ಪ್ಲೇಯನ್ನು ಹೊಂದಿದ್ದು Exynos 5430/ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಇದರಲ್ಲಿದೆ. 3 ಜಿಬಿ ರ್‌ಯಾಮ್ ಕೂಡ ಫೋನ್‌ನಲ್ಲಿ ಲಭ್ಯವಿದ್ದು ಸ್ಯಾಮ್‌ಸಂಗ್‌ನ ISOCELL ತಂತ್ರಜ್ಞಾನದೊಂದಿಗೆ 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ನಿಮಗೆ ಫೋನ್‌ನಲ್ಲಿ ಲಭ್ಯವಾಗಲಿದೆ. LTE-A ಸಂಪರ್ಕತೆ ಹೊರತಾಗಿ, ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4.3 ಇದರಲ್ಲಿದೆ.

ಇದು ಮೆಟಾಲಿಕ್ ಬೋಡಿಯನ್ನು ಹೊಂದಿದ್ದು ನೊಡಲು ಅತ್ಯಾಕರ್ಷಕವಾಗಿದೆ. ಇನ್ನು ಈ ಪೋನ್ ಬಂದು ಏನು ಕಾರುಬಾರುಗಳನ್ನು ಮಾಡಲಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot