ಒನ್‌ಪ್ಲಸ್ 6ಗೆ ಸೆಡ್ಡು: ಸ್ಯಾಮ್‌ಸಂಗ್‌ನಿಂದ ಬಂಪರ್ ಕ್ಯಾಷ್‌ಬ್ಯಾಕ್..!
ಮಾರುಕಟ್ಟೆಗೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೂ ನಿರ್ಮಾಣವಾಗಿದ್ದು, ಇದಕ್ಕೇ ಸೆಡ್ಡು ಹೊಡೆಯಲು ಸ್ಯಾಮ್‌ಸಂಗ್ ಭರ್ಜರಿ ಕಾಷ್ ಬ್ಯಾಕ್ ಯೋಜನೆಯನ್ನು ಲಾಂಚ್ ಮಾಡಲು ಮುಂದಾಗಿದೆ. ತನ್ನ ಟಾಪ್ ಎಂಡ್ ಫೋನ್‌ಗಳ ಮೇಲೆ ಆಫರ್ ನೀಡಿದ್ದು, ಬೇಡಿಕೆಯನ್ನು ಉಳಿಸಿಕೊಳ್ಳಲು ತಂತ್ರವನ್ನು ರೂಪಿಸಿದೆ.

ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ಗ್ಯಾಲೆಕ್ಸಿ S8, ಗ್ಯಾಲೆಕ್ಸಿ S8 ಪ್ಲಸ್ ಮತ್ತು ಗ್ಯಾಲೆಕ್ಸಿ A8+ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದ್ದು, ಇದರಿಂದ ಹೆಚ್ಚಿನ ಪ್ರಮಾಣದ ಬಳಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಸ್ಯಾಮ್‌ಸಂಗ್ ಮಾಡಿದೆ ಎನ್ನಲಾಗಿದೆ. ಇದರಿಂದಾಗಿ ಒನ್‌ಪ್ಲಸ್ ಮಾರಾಟದ ಮೇಲೆ ಭಾರಿ ಹೊಡೆತವು ಬೀಳುವ ಸಾಧ್ಯತೆ ಇದೆ.

ಗ್ಯಾಲೆಕ್ಸಿ S8:
ಸದ್ಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಲಾಂಚ್ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್‌ಫೋನ್ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್ ಮೇಲೆ ರೂ.8000 ಕ್ಯಾಷ್ ಬ್ಯಾಕ್ ನೀಡಲಾಗಿದೆ.

ಗ್ಯಾಲೆಕ್ಸಿ A8+:
ಇದಲ್ಲದೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಗ್ಯಾಲೆಕ್ಸಿ A8+ ಸ್ಮಾರ್ಟ್‌ಫೋನಿನ ಮೇಳೆ ರೂ.5000 ಕ್ಯಾಷ್ ಬ್ಯಾಕ್ ಅನ್ನು ಪಡೆಯಬಹುದಾಗಿದೆ. ಒನ್‌ಪ್ಲಸ್ 6ಗೆ ಈ ಸ್ಮಾರ್ಟ್‌ಫೋನ್ ಸೆಡ್ಡು ಹೊಡೆಯಲಿದೆ.

ಸ್ಯಾಂಗ್‌ಸಂಗ್‌ನಲ್ಲಿ ಸೈಟ್‌ನಲ್ಲಿ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8, ಗ್ಯಾಲೆಕ್ಸಿ S8 ಪ್ಲಸ್ ಮತ್ತು ಗ್ಯಾಲೆಕ್ಸಿ A8+ ಸ್ಮಾರ್ಟ್‌ಫೋನ್‌ಗಳ ಮೇಲೆ ಘೋಷಣೆ ಮಾಡಲಾಗಿರುವ ಕ್ಯಾಷ್ ಬ್ಯಾಕ್ ಆಫರ್ ಕೇವಲ ಸ್ಮಾಮ್ ಸಂಗ್ ಸೈಟಿನಲ್ಲಿ ಮಾತ್ರವೇ ದೊರೆಯಲಿದೆ.


Click it and Unblock the Notifications








